ಬೈಂದೂರು: ಅತ್ಯುತ್ತಮ ವೈದ್ಯಕೀಯ ಸೇವೆಗಾಗಿ ಕರ್ನಾಟಕ ಸರಕಾರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ವಿಶ್ವ ವೈದ್ಯರ ದಿನದಂದು ಬೆಂಗಳೂರನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಮಟ್ಟದ ಶ್ರೇಷ್ಠ ಸರಕಾರಿ ವೈದ್ಯ ಪ್ರಶಸ್ತಿ ಪಡೆದ ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಿಕ್ಮರಿ ಅವರನ್ನು ಇಂದು ದಲಿತ ಸಂಘರ್ಷ ಸಮಿತಿ ನಾಡ ಸೇನಾಪುರ ಹಾಗೂ ಸಾರ್ವಜನಿಕರ ವತಿಯಿಂದ ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸೇನಾಪುರ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಸತೀಶ್ ಕೆ. ರಾಮನಗರ ವಹಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭು ಕೆನಡಿ ಪಿರೇರಾ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಗೋಪಾಲಕೃಷ್ಣ ನಾಡ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸರಿತಾ ಪಾಯಸ್, ಅಂಗನವಾಡಿ ಶಿಕ್ಷಕಿ ಸುಶೀಲಾ ನಾಡ, ಗ್ರಾಮ ಪಂಚಾಯತ್ ಸದಸ್ಯ ಜಯ ಪೂಜಾರಿ, ಮುಖಂಡರಾದ ಕೃಷ್ಣ, ಸುರೇಶ್ ಪಡುಕೋಣೆ, ಸತೀಶ್ ಕಾಂಚನ್, ದಯಾನಂದ ದೇವಾಡಿಗ, ಶಿವಾನಂದ ಭಂಡಾರಿ, ಸಂತೋಷ್ ತೆಂಕಬೈಲ್, ರಾಮಚಂದ್ರ, ಬಾಬು ದೇವಾಡಿಗ ಮೊದಲದವರು ಉಪಸ್ಥಿತರಿದ್ದರು .
ಶಂಭು ಗುಡ್ಡಮಾಡಿ ಕಾರ್ಯಕ್ರಮ ನಿರೂಪಸಿ, ಸುರೇಂದ್ರ ರಾಮನಗರ ಸ್ವಾಗತಿಸಿ ವಂದಿಸಿದರು.
Comments are closed.