ಕರಾವಳಿ

ಬಾರೀ ಮಳೆಗೆ ಹಾಲಾಡಿ‌‌‌ ಸಮೀಪದಲ್ಲಿ ಕೊಚ್ಚಿಹೋದ ಸಂಪರ್ಕ ಸೇತುವೆ..!

Pinterest LinkedIn Tumblr

ಕುಂದಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾಲಾಡಿ ಟಿ.ವಿ.ಎಸ್ ಶೋ ರೂಂನಿಂದ ಒಳಗಡೆ ಮುದೂರಿ ಎಂಬಲ್ಲಿಗೆ ಸಂಪರ್ಕಿಸುವ ಬರಣಕೊಳಕಿ ಸೇತುವೆ ಕುಸಿದು ಬಿದ್ದಿರುವುದು ವರದಿಯಾಗಿದೆ. ಈ ಸಂರ್ಪಕ ಸೇತುವೆ ಕಾಮಗಾರಿ ನಡೆದು ಒಂದೇ ವರ್ಷದಲ್ಲಿ ಸೇತುವೆ ಕುಸಿದು ಹೋಗಿದೆ.

ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮೀ ಎಸ್.ಆರ್., ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಶಂಕರನಾರಾಯಣ ಪೊಲೀಸ್ ಉಪನಿರೀಕ್ಷಕ ನಾಸೀರ್ ಹುಸೇನ್, ಹಾಗೂ ಸಂಬಂದಪಟ್ಟವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Comments are closed.