UAE

ದುಬೈನಿಂದ ಬೆಂಗಳೂರಿಗೆ 25 ಐ-ಫೋನ್​ಗಳ ಕಳ್ಳಸಾಗಣೆ: ಉಡುಪಿ ಮೂಲದ ವ್ಯಕ್ತಿಯಿಂದ 30 ಲಕ್ಷ ಮೌಲ್ಯದ ವಸ್ತುಗಳು ವಶ

Pinterest LinkedIn Tumblr

ಬೆಂಗಳೂರು: ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ 25 ಐ-ಫೋನ್​ ಮತ್ತು 5 ಆಪಲ್​​ ವಾಚ್​ಗಳನ್ನು ಸಾಗಿಸುತ್ತಿದ್ಧ ಉಡುಪಿ ಮೂಲದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್​​​ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಈ ವ್ಯಕ್ತಿಯಿಂದ ಸುಮಾರು 30 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕಸ್ಟಮ್ಸ್ ಮೂಲದ ಪ್ರಕಾರ ಉಡುಪಿ ಮೂಲದ ತಬ್ರೇಜ್ ಅಹಮದ್ ಎಂಬ ಪ್ರಯಾಣಿಕ ಎಂದು ತಿಳಿದುಬಂದಿದೆ.

ಜುಲೈ 20 ಶನಿವಾರ, ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್ (ಇಕೆ-568) ವಿಮಾನದಲ್ಲಿ ಬಂದ ಪ್ರಯಾಣಿಕನನ್ನು ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಕಸ್ಟಮ್ಸ್​ನ ಏರ್​ ಇಂಟೆಲಿಜೆನ್ಸ್ ಯೂನಿಟ್​ನ ಅಧಿಕಾರಿಗಳು ತಪಾಸಣೆ ನಡೆಸಿದ್ದಾಗ, ಅಕ್ರಮವಾಗಿ ವಿದೇಶದಿಂದ ತಂದಿರುವ ಐ-ಫೋನ್ ಮತ್ತು ಆಪಲ್ ವಾಚ್​ಗಳು ಪತ್ತೆಯಾಗಿವೆ.

ಪ್ರಯಾಣಿಕನನ್ನು ಬೆಂಗಳೂರು ಕಸ್ಟಮ್ಸ್​​ ಅಧಿಕಾರಿಗಳು ಬಂಧಿಸಿದ್ದು, ಆತ ತನ್ನ ಬ್ಯಾಗ್​ನಲ್ಲಿ ಮರೆಮಾಚಿ ಅಕ್ರಮವಾಗಿ ವಸ್ತುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕಸ್ಟಮ್ಸ್ ಕಾಯ್ದೆಯ 2016ರ ಬ್ಯಾಗೇಜ್ ನಿಯಮಗಳ ಪ್ರಕಾರ ಒಬ್ಬ ಪ್ರಯಾಣಿಕನಿಗೆ ಗರಿಷ್ಠ 50 ಸಾವಿರ ಮೌಲ್ಯದ ವಸ್ತುಗಳನ್ನು ಸಾಗಿಸಲು ಅವಕಾಶ ಇದೆ. ಆದರೆ ಆತ 25 ಐ-ಫೋನ್ ಮತ್ತು 5 ಆಪಲ್ ವಾಚ್​ಗಳನ್ನು ಅಕ್ರಮವಾಗಿ ಸಾಗಿಸುವ ಯತ್ನ ನಡೆಸಿದ್ದು, ಪ್ರತಿಯೊಂದು ಐ-ಫೋನ್ ಬೆಲೆ 1 ಲಕ್ಷ ಎನ್ನಲಾಗಿದೆ. ಪ್ರತಿಯೊಂದು ಐ-ಫೋನ್​ಗೆ 50 ಸಾವಿರ ಕಸ್ಟಮ್ಸ್​ ಸುಂಕವನ್ನು ಪಡೆಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.