ವಯನಾಡ್( ಕೇರಳ): ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ, ಮುಂಡಕೈ ಮತ್ತು ಚೋರಲ್ ಮಲದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಸಂಭವಿಸಿರುವ ಭೂಕುಸಿತಕ್ಕೆ 90ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಒಂದು ಮಗುವೂ ಸೇರಿದಂತೆ ನಾಲ್ಕು ಮಂದಿ ಮೃತಪಟ್ಟಿರುವುದನ್ನು ಜಿಲ್ಲಾಡಳಿತ ದೃಢಪಡಿಸಿದ್ದು, ಒಟ್ಟಾರೆ 100ಕ್ಕೂ ಹೆಚ್ಚು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇರಳದ ಕೆಲ ಭಾಗಗಳಲ್ಲಿ ಜಡಿ ಮಳೆಯಾಗುತ್ತಿದ್ದು ಮಂಗಳವಾರ ಬೆಳಗ್ಗೆ ಏರು ಹೊತ್ತಿನ 4 ಗಂಟೆ ಅವಧಿಯೊಳಗೆ 3 ಕಡೆ ಭಾರೀ ಕುಸಿತವುಂಟಾಗಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮುಂಡಕೈ ಪಟ್ಟಣದಲ್ಲಿ ಮೊದಲು ಭೂೀ ಕುಸಿತ ಉಂಟಾಯಿತು. ಎರಡನೇ ಭೂ ಕುಸಿತವು ಬೆಳಗ್ಗೆ 4 ಗಂಟೆ ಸುಮಾರಿಗೆ ಚೋರಲ್ ಮಲ ಶಾಲೆ ಬಳಿ ಉಂಟಾಗಿದೆ. ಇಲ್ಲಿ ನಡೆದ ಪ್ರಕೃತಿ ವಿಕೋಪಕ್ಕೆ ಶಿಬಿರದ ಮಾದರಿಯಲ್ಲಿ ನಡೆಯುತ್ತಿದ್ದ ಶಾಲೆ, ಆಸುಪಾಸಿನ ಮನೆ ಮತ್ತು ಅಂಗಡಿ ಕೋಣೆಗಳು ನೆರೆ ಮತ್ತು ಮಣ್ಣಿನ ಕುಸಿತಕ್ಕೆ ಕೊಚ್ಚಿಕೊಂಡ ಹೋಗಿವೆ.
Comments are closed.