ಕರಾವಳಿ

ಮಂಗಳೂರು: ಬಸ್ ಪ್ರಯಾಣದಲ್ಲಿ ವಿದ್ಯಾರ್ಥಿನಿಗೆ ಎದೆನೋವು: ಬಸ್ಸನ್ನು ಆ್ಯಂಬುಲೆನ್ಸ್ ಮಾದರಿಯಲ್ಲಿ ಆಸ್ಪತ್ರೆಗೆ ತಲುಪಿಸಿದ ಚಾಲಕ

Pinterest LinkedIn Tumblr

ಮಂಗಳೂರು: ನಗರದ ಸಿಟಿ ಬಸ್ ನಲ್ಲಿ ಮಂಗಳವಾರ ಪ್ರಯಾಣಿಸುತ್ತಿದ್ದ ಕಾಲೇಜಿನ‌ ವಿದ್ಯಾರ್ಥಿನಿಯೊಬ್ಬಳಿಗೆ ತೀವ್ರ ಎದೆ ನೋವು ಸಂಭವಿಸಿದ್ದು ಹೃದಯಾಘಾತದ ಮುನ್ಸೂಚನೆ ಸಿಗುತ್ತಿದ್ದಂತೆ ಎಚ್ಚೆತ್ತುಕೊಂಡ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ದು ವಿದ್ಯಾರ್ಥಿನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗಲು ನೆರವಾಗುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ.

13‌ಎಫ್‌ ರೂಟ್ ನಂಬರ್ ಕೃಷ್ಣ ಪ್ರಸಾದ್ ಬಸ್ ಕುಳೂರು ಮಾರ್ಗವಾಗಿ ಚಲಿಸುತ್ತಿದ್ದಾಗ ಅದರಲ್ಲಿ ಪ್ರಯಾಣಿಸುತಿದ್ದ ವಿದ್ಯಾರ್ಥಿನಿಯಲ್ಲಿ ಎದೆ‌ನೋವು ಕಾಣಿಸಿಕೊಂಡಿತ್ತು. ಬಸ್ ಚಾಲಕ, ನಿರ್ವಾಹಕರಾದ ಗಜೇಂದ್ರ ಕುಂದರ್, ಮಹೇಶ್ ಪೂಜಾರಿ ಮತ್ತು ಸುರೇಶ್ ಅವರು ಕೂಡಲೇ ಎಚ್ಚೆತ್ತು ಎಲ್ಲಾ ಪ್ರಯಾಣಿಕರ ಸಮೇತ ಆಂಬುಲೆನ್ಸ್ ಮಾದರಿಯಲ್ಲಿ ಕಂಕನಾಡಿ ಆಸ್ಪತ್ರೆಗೆ ಕೊಂಡೊಯ್ದಿದ್ದು ಕೂಡಲೇ ವಿದ್ಯಾರ್ಥಿನಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಅಗತ್ಯ ಚಿಕಿತ್ಸೆಯನ್ನು ವೈದ್ಯರು ನೀಡಿದರು.

ಬಸ್ಸಿನ ಚಾಲಕ, ನಿರ್ವಾಹಕರ ಈ ಸಮಯಪ್ರಜ್ಞೆಯ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Comments are closed.