ಕಾರವಾರ: ಕಾರವಾರದ ಕಾಳಿ ನದಿಗೆ ಕಟ್ಟಿರುವ ಹಳೆಯ ಸೇತುವೆ ಬುಧವಾರ ಬೆಳಗಿನ ಜಾವ ಕುಸಿದಿದೆ. ಸೇತುವೆಯ ಮೇಲೆ ಚಲಿಸುತ್ತಿದ್ದ ಲಾರಿ ನದಿಗೆ ಬಿದ್ದಿದೆ. ಲಾರಿಯು ಕಾರವಾರದಿಂದ ಗೋವಾ ಕಡೆಗೆ ತೆರಳುತ್ತಿತ್ತು.
ಸೇತುವೆ ಕುಸಿದ ತತ್ ಕ್ಷಣ ಲಾರಿ ಚಾಲಕ ಮುರುಗನ್ ಲಾರಿಯ ಕ್ಯಾಬಿನ್ ಹತ್ತಿ ಕೂಗಿಕೊಂಡಿದ್ದು ದಂಡೆಯಲ್ಲಿದ್ದವರು ಈ ಘಟನೆ ನೋಡಿ ಕರಾವಳಿ ಕಾವಲು ಪಡೆಗೆ ಸುದ್ದಿ ತಲುಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿಸಿದ ಕರಾವಳಿ ಕಾವಲು ಪಡೆ, ಅಗ್ನಿ ಶಾಮಕದಳ, ಮೀನುಗಾರಿಕಾ ದೋಣಿಯಲ್ಲಿದ್ದವರು, ಚಾಲಕ ಮುರುಗನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಧ್ಯರಾತ್ರಿ ಕಳೆದ ನಂತರ ಈ ದುರ್ಘಟನೆ ನಡೆದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ. ಕಾಳಿ ನದಿಗೆ ಕಟ್ಟಿದ ಹಳೆಯ ಸೇತುವೆ ಇದಾಗಿದ್ದು, ವಾಹನ ಸಂಚಾರ ಚಾಲ್ತಿಯಲ್ಲಿತ್ತು. ಘಟನೆ ನಂತರ ಕಾರವಾರ, ಸದಾಶಿವಗಡ, ಗೋವಾ ಮಧ್ಯೆ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಎಸ್ಪಿ ಭೇಟಿ ನೀಡಿದ್ದಾರೆ.
Comments are closed.