ಕುಂದಾಪುರ: ಕುಂದಾಪುರದ ವಿಠ್ಠಲವಾಡಿ ನಿವಾಸಿ ಯುವಕ ಶಾನ್ ಡಿ’ಸೋಜಾ (19) ಯು.ಎ.ಇ.ಯಲ್ಲಿ ಬಿಸಿಲಿನ ಝಳ ತಾಳಲಾರದೆ ಮೃತಪಟ್ಟಿದ್ದಾರೆ.
ದುಬಾೖಯಿಂದ ಸುಮಾರು 115 ಕಿ.ಮೀ. ದೂರದಲ್ಲಿರುವ ರಾಸ್ ಅಲ್ ಖೈಮಾದಲ್ಲಿ ಬಿಸಿಲಿನ ತಾಪಕ್ಕೆ ಗುರಿಯಾಗಿ ಆರ್‌ಎಕೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಮೃತರಾಗಿದ್ದು ಅವರು ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಶಾನ್ ಡಿ’ಸೋಜಾ ಅವರು ಕುಂದಾಪುರದ, ಮೂಲತಃ ಮೂಡುಬಿದಿರೆಯ ಹೊಸಬೆಟ್ಟು ನಿವಾಸಿ ಎಲಿಯಾಸ್ ಸಿರಿಲ್ ಡಿ’ಸೋಜಾ ಮತ್ತು ಪ್ರಮೀಳಾ ಡಿ’ಸೋಜಾ ಅವರ ಪುತ್ರನಾಗಿದ್ದು, ಶಾನ್ ಡಿ’ಸೋಜಾ ತಂದೆ-ತಾಯಿ, ಇಬ್ಬರು ಸಹೋದರರ ಜತೆ ಯು.ಎ.ಇ. ಸೈಂಟ್ ಮೆರೀಸ್ ಚರ್ಚ್ ಬಳಿಯ ಮನೆಯಲ್ಲಿ ವಾಸವಾಗಿದ್ದರು.
ಎಲಿಯಾಸ್ ಅವರು ಖಾಸಗಿ ಕಂಪೆನಿಯಲ್ಲಿ ಮ್ಯಾನೆಜರ್ ಆಗಿದ್ದು, ಪ್ರಮೀಳಾ ಅವರು ಅಕೌಂಟೆಂಟ್ ಆಗಿದ್ದರು. ಅವರ ಮಗ ಶಾನ್ ಅಲ್ಲಿಯೇ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದರು.
Comments are closed.