ಕರ್ನಾಟಕ

ರೇಣುಕಾಸ್ವಾಮಿ ಮರ್ಡರ್ ಕೇಸ್: ಮೂವರಿಗೆ ಜಾಮೀನು ಮಂಜೂರು; ದರ್ಶನ್, ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Pinterest LinkedIn Tumblr

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿಯಾಗಿರುವ ನಟ ದರ್ಶನ್​ ಅವರ ಜಾಮೀನು ಅರ್ಜಿ ವಿಚಾರಣೆ ಕ್ರಮವಾಗಿ ಸೆಪ್ಟೆಂಬರ್​ 25 ಮತ್ತು ಸೆಪ್ಟೆಂಬರ್ 27ಕ್ಕೆ ಮುಂದೂಡಿಕೆಯಾಗಿದೆ.

ದರ್ಶನ್ ಮತ್ತು ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಎಸ್​ಪಿಪಿ ಪ್ರಸನ್ನ ಕುಮಾರ್ ಅವರು ಕಾಲಾವಕಾಶ ಕೋರಿದ್ದಾರೆ. ಅದಕ್ಕೆ ನ್ಯಾಯಾಲಯ ಅವಕಾಶ ನೀಡಿದೆ. ವಿಚಾರಣೆಯನ್ನು ಮುಂದೂಡಿ 57ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶರಾದ ಜೈಶಂಕರ್ ಇಂದು ಆದೇಶ ನೀಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಕೇಸ್​ನ ತನಿಖೆ ಅಂತ್ಯವಾಗಿ ಇತ್ತೀಚೆಗೆ ಪೊಲೀಸರು ಚಾರ್ಜ್​ಶೀಟ್​ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಎ15, 16 ಮತ್ತು ಎ 17 ಆರೋಪಿಗಳಿಗೆ ಜಾಮೀನು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೂವರಿಗೆ ಇಂದು ಜಾಮೀನು ಸಿಕ್ಕಿದೆ. ಎ15 ಆರೋಪಿ ನಿಖಿಲ್ ನಾಯ್ಕ್, ಎ16 ಆರೋಪಿಯಾಗಿದ್ದ ಕೇಶವಮೂರ್ತಿ ಹಾಗೂ ಎ17 ಆರೋಪಿ ಕಾರ್ತಿಕ್ ಗೆ ಹೈಕೋರ್ಟ್ ನಿಂದ ಜಾಮೀನು ಸಿಕ್ಕಿದೆ.

ರೇಣುಕಾಸ್ವಾಮಿ ಹತ್ಯೆ ಕೇಸಿನಲ್ಲಿ ಪ್ರಮುಖ ಆರೋಪಿಗಳು ನೀಡಿದ ಹಣ ಪಡೆದು ಶವ ಸಾಗಿಸುವಾಗ, ಪೊಲೀಸರಿಗೆ ಶರಣಾಗುವಲ್ಲಿ ಮಾತ್ರ ಇವರ ಪಾತ್ರವಿತ್ತು, ಹತ್ಯೆಗೂ ಇವರಿಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.

ರೇಣುಕಾಸ್ವಾಮಿ ಶವ ಸಿಕ್ಕಿದ ಮರುದಿನ (ಜೂ.10) ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಗೆ ಇವರು ಬಂದು ಶರಣಾಗಿದ್ದರು. ನಾವೇ ಕೊಲೆ ಮಾಡಿದ್ದಾಗಿ ಆರಂಭದಲ್ಲಿ ಹೇಳಿದ್ದರು. ಕೊನೆಗೆ ಪೊಲೀಸರು ಅವರ ಬಾಯಿ ಬಿಡಿಸಿದಾಗ ಸತ್ಯ ಹೊರಬಂದಿತ್ತು ಎಂದು ಹೇಳಲಾಗುತ್ತಿದೆ.

 

Comments are closed.