ಕರಾವಳಿ

ಮಾರಾಟಕ್ಕಾಗಿ ತಂದಿದ್ದ 2 ಕೆ.ಜಿ.ಗೂ ಅಧಿಕ ಗಾಂಜಾ ಸಹಿತ ಆರೋಪಿಯನ್ನು ಬಂಧಿಸಿದ ಉಡುಪಿ‌‌ ಸೆನ್ ಅಪರಾಧ ಠಾಣೆ ಪೊಲೀಸರು

Pinterest LinkedIn Tumblr

ಉಡುಪಿ: ಗಾಂಜಾ ಮಾರಾಟದ ಸಲುವಾಗಿ ಬ್ಯಾಗ್‌ನಲ್ಲಿ ವ್ಯಕ್ತಿಯೋರ್ವ 2 ಕೆ.ಜಿ.ಗೂ ಅಧಿಕ ಗಾಂಜಾವನ್ನಿಟ್ಟುಕೊಂಡು ನಿಂತಿದ್ದ ಬಗ್ಗೆ ಉಡುಪಿ ಸೆನ್ ಅಪರಾಧ ಠಾಣೆ ಪೊಲೀಸರಿಗೆ ಸಿಕ್ಕ ಮಾಹಿತಿಯಂತೆ ದಾಳಿ ನಡೆಸಿ ಆರೋಪಿಯೋರ್ವನನ್ನು ಬಂಧಿಸಿದ ಘಟನೆ ಉಡುಪಿ ನಗರದ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಸಮೀಪದ ಸಾರ್ವಜನಿಕ ರಸ್ತೆಯಲ್ಲಿ ಅ.26 ರಂದು ನಡೆದಿದೆ.

ಉಡುಪಿ‌ ಮೂಲದ ಅಬ್ದುಲ್‌ ಜಬ್ಬಾರ್‌ ಅಲಿಯಾಸ್ ಜಬ್ಬಾರ್‌ (27) ಬಂಧಿತ ಆರೋಪಿ. ಈತನಿಂದ 2 ಕಿಲೋ 344 ಗ್ರಾಂ ತೂಕದ ಗಾಂಜಾ, ಆತನ ಮೊಬೈಲ್ ಪೋನ್, ಗಾಂಜಾವನ್ನು ಸಾಗಾಟ ಮಾಡಲು ಬಳಸಿದ್ದ ಸ್ಕೂಟರ್ ಬ್ಯಾಗ್, 34 ದೊಡ್ಡ ಪಾರದರ್ಶಕ ಪ್ಲಾಸ್ಟಿಕ್‌ ಕವರ್‌, 33 ಸಣ್ಣ ಪಾರದರ್ಶಕ ಪ್ಲಾಸ್ಟಿಕ್‌ ಕವರ್‌ಗಳು, ವೆಯಿಂಗ್‌ ಮಿಶನ್‌, ಚೂರಿ, 5810 ರೂ‌. ನಗದು ವಶಪಡಿಸಿಕೊಂಡಿದ್ದು ಈ ಸ್ವತ್ತುಗಳು ಒಟ್ಟು ಅಂದಾಜು ಮೌಲ್ಯ 3 ಲಕ್ಷದ 5,360 ರೂ. ಆಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ.ಕೆ ಅವರ ನಿರ್ದೇಶನದಲ್ಲಿ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ ಮತ್ತು ಪರಮೇಶ್ವರ ಹೆಗ್ಡೆಯವರ ಮಾರ್ಗದರ್ಶನದಲ್ಲಿ, ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಉಪನಿರೀಕ್ಷಕ ಪವನ್ ನಾಯಕ್ ಮತ್ತು ಸಿಬ್ಬಂದಿಗಳಾದ ಪ್ರವೀಣ್, ರಾಜೇಶ್, ಪ್ರವೀಣ್ ಶೆಟ್ಟಿಗಾರ್, ವೆಂಕಟೇಶ್, ಯತೀನ್ ಕುಮಾರ್, ಚರಣ್ ರಾಜ್ ಮತ್ತು ಪ್ರಶಾಂತ್ ಇದ್ದರು.

Comments are closed.