ಕರಾವಳಿ

ಮಣಿಪಾಲ: ಹೋಟೆಲ್ ಕಾರ್ಮಿಕನ ಕುತ್ತಿಗೆಗೆ ಇರಿದು ಕೊಲೆ.!

Pinterest LinkedIn Tumblr

ಉಡುಪಿ: ಲಕ್ಷ್ಮೀಂದ್ರನಗರದ ಬಳಿಯ ಮುಖ್ಯ ರಸ್ತೆಯ ಅನಂತ ಕಲ್ಯಾಣ ಮಾರ್ಗದಲ್ಲಿ ಹೊಟೇಲ್ ಕಾರ್ಮಿಕನ ಕುತ್ತಿಗೆಗೆ ಚುಚ್ಚಿ ಹತ್ಯೆಗೈದ ಘಟನೆ ಶುಕ್ರವಾರ(ಡಿ.6) ನಡೆದಿದೆ.

ಹತ್ಯೆಯಾದವನನ್ನು ಹೊನ್ನಾವರದ ಕಾಸಕೋಡು ನಿವಾಸಿ ಶ್ರೀಧರ ಎಂದು ತಿಳಿದುಬಂದಿದೆ.

ಘಟನೆ ಗುರುವಾರ ರಾತ್ರಿ ಆಗಿರುವ ಸಾಧ್ಯತೆ ಇದ್ದು. ಶುಕ್ರವಾರ ಬೆಳಗ್ಗೆ ವಾಯುವಿಹಾರಕ್ಕೆ ಹೋದಾಗ ಸ್ಥಳೀಯರ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಎಸ್ಪಿ ಡಾ.ಅರುಣ್ ಕುಮಾರ್, ಮಣಿಪಾಲ ಇನ್ಸ್‌ಪೆಕ್ಟರ್ ದೇವರಾಜ್, ಮಂಜುನಾಥ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನಷ್ಟೇ ಹೆಚ್ಚಿನ ವಿವರ ತಿಳಿದುಬರಬೇಕಿದೆ.

Comments are closed.