UAE

ಯು.ಎ.ಇ. ಬಂಟ್ಸ್ ಅಧ್ಯಕ್ಷರಾಗಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅಧಿಕಾರ ಸ್ವೀಕಾರ

Pinterest LinkedIn Tumblr

ಯುಎಇ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಕರ್ನಾಟಕ ಪರ ಸಂಘಟನೆಗಳು ಕಾರ್ಯೊನ್ಮುಖವಾಗಿದೆ. ಇವುಗಳಲ್ಲಿ ಅತ್ಯಂತ ಹಿರಿಯ ಸಂಘಟನೆಗಳಲ್ಲಿ 47 ವರ್ಷಗಳಿಂದ ಯಶಸ್ವಿ ಹೆಜ್ಜೆಗುರುತುಗಳನ್ನು ಮೂಡಿಸಿರುವ ಯು.ಎ.ಇ. ಬಂಟ್ಸ್ ಎಕ್ಸಿಕ್ಯೂಟ್ ಬೋರ್ಡ್ ನ ವಾರ್ಷಿಕ ಮಹಾಸಭೆ ದುಬಾಯಿ ಕರಾಮದಲ್ಲಿರುವ ಫಾರ್ಚೂನ್ ಆಟ್ರಿಯಂ ಹೋಟೆಲ್ ಸಭಾಂಗಣದಲ್ಲಿ 2024 ಡಿಸೆಂಬರ್ 14ನೇ ತಾರೀಕಿನಂದು ಮಧ್ಯಾಹ್ನ 3.00 ಗಂಟೆಯಿಂದ ನಡೆಯಿತು.

ಯು.ಎ.ಇ. ಬಂಟ್ಸ್ ಉಪಾಧ್ಯಕ್ಷರಾಗಿ ಹಲವು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ
ಮಾಡಲಾಯಿತು. ನಿಕಟ ಪೂರ್ವ ಅಧ್ಯಕ್ಷರಾಗಿರುವ ಸರ್ವೋತ್ತಮ ಶೆಟ್ಟಿಯವರಿಂದ ಅಧಿಕಾರ pಹಸ್ತಾಂತರ ಸ್ವೀಕರಿಸಿದ ನಂತರ ನೂತನ ಆಡಳಿತ ಮಂಡಳಿಯ ಸರ್ವ ಸದಸ್ಯರಿಂದ ಪ್ರಮಾಣ ವಚನ
ಸ್ವೀಕರಿಸಿದರು. 2025-26 ನೆ ಸಾಲಿನ ಯು.ಎ.ಇ. ಬಂಟ್ಸ್ ನ ಕಾರ್ಯಕಾರಿ ಸಮಿತಿಯವರು ಸಹ
ಉಪಸ್ಥಿತರಿದ್ದರು.

     

ನೂತನ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು
ತಮ್ಮನ್ನು ಆಯ್ಕೆಮಾಡಿರುವ ಯು.ಎ.ಇ. ಬಂಟ್ಸ್ ಆಡಳಿತ ಮಂಡಳಿಗೆ ತನ್ನ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಸಂಘಟನೆಯನ್ನು ಯಶಸ್ವಿ ಪಥದತ್ತ ಕೊಂಡೊಯ್ಯುವ ಭರವಸೆಯನ್ನು ನೀಡಿ ಸರ್ವರ ಸಲಹೆ
ಸಹಕಾರ ಬೆಂಬಲ ನೀಡುವಂತೆ ಮನವಿಯನ್ನು ಮಾಡಿದರು.

ಕಳೆದ ನಾಲ್ಕೂವರೆ ದಶಕಗಳಿಂದ ಯು.ಎ.ಇ. ಬಂಟ್ಸ್ ವಾರ್ಷಿಕ ಸ್ನೇಹ ಮಿಲನ, ಯು.ಎ.ಇ. ಬಂಟ್ಸ್ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ವಿಹಾರ ಕೂಟ, ಕ್ರೀಡಾ ಕೂಟ, ಕ್ರಿಕೆಟ್ ಪಂದ್ಯಾಟ, ರಕ್ತದಾನ
ಶಿಬಿರ, ಊರಿನಲ್ಲಿ ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವು, ಯು.ಎ.ಇ. ಬಂಟ್ಸ್ 2024 ನೇ ಸಾಲಿನ 47ನೇ ವಾರ್ಷಿಕೋತ್ಸವದ ಜೊತೆಯಲ್ಲಿ ಗಲ್ಫ್ ಬಂಟೋತ್ಸವ, ದುಬಾಯಿ ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಯು.ಎ.ಇ. ಬಂಟ್ಸ್ ನ ಪೋಷಕರಾಗಿರುವ ಸರ್ವೋತ್ತಮ ಶೆಟ್ಟಿಯವರು ನೂತನ ಆಡಳಿತ ಮಂಡಳಿಗೆ ಶುಭವನ್ನು ಹಾರೈಸಿದರು.

ಯು.ಎ.ಇ. ಬಂಟ್ಸ್ 2025-26 (ಎರಡು ವರ್ಷದ ಅವಧಿ) ನೂತನ ಆಡಳಿತ ಮಂಡಳಿ
ಪೋಷಕರು:  ಸರ್ವೋತ್ತಮ್ ಶೆಟ್ಟಿ
ಅಧ್ಯಕ್ಷರು : ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ
ಉಪಾಧ್ಯಕ್ಷರು:  ಪ್ರೇಂನಾಥ್ ಶೆಟ್ಟಿ
ಪ್ರಧಾನ ಕಾರ್ಯದರ್ಶಿ: ರವಿರಾಜ್ ಶೆಟ್ಟಿ
ಆಡಳಿತ ಮಂಡಳಿಯ ಸದಸ್ಯರುಗಳು;  ರತ್ನಾಕರ್ ಶೆಟ್ಟಿ, ಗುಣಶೀಲ್ ಶೆಟ್ಟಿ, ಸುಜಾತ್
ಶೆಟ್ಟಿ. ಬಿ. ಕೆ. ಗಣೇಶ್ ರೈ, ಸುಂದರ್ ಶೆಟ್ಟಿ, ಸಜನ ಶೆಟ್ಟಿ ಹಾಗೂ ದಿನೇಶ್ ಶೆಟ್ಟಿ ಕೊಟ್ಟಿಂಜ.
ಯು.ಎ.ಇ. ಬಂಟ್ಸ್ 2025-26 ರ ನೂತನ ಕಾರ್ಯಕಾರಿ ಸಮಿತಿ

ಅಬುಧಾಬಿ: ನಿತ್ಯಾಪ್ರಕಾಶ್ ಶೆಟ್ಟಿ / ಕೀರ್ತಿ ಶೆಟ್ಟಿ, ಪ್ರಸನ್ನ ಶೆಟ್ಟಿ / ಮೆಘಾ ಶೆಟ್ಟಿ, ಶ್ತೀಶ್ ಹೆಗ್ಡೆ / ವಿದ್ಯಾಶ್ರೀ
ಹೆಗ್ಡೆ, ಕಿರಣ್ ಶೆಟ್ಟಿ / ದೀಪಾ ಶೆಟ್ಟಿ.
ದುಬಾಯಿ: ದಿನ್ ರಾಜ್ ಶೆಟ್ಟಿ / ದೀಪ್ತಿ ಶೆಟ್ಟಿ, ಅನೂಪ್ ಶೆಟ್ಟಿ ಚೈತ್ರಾ ಶೆಟ್ಟಿ, ವಸಂತ್ ಶೆಟ್ಟಿ / ರಜಿತಾ
ಶೆಟ್ಟಿ, ಸುಪ್ರಜ್ ಶೆಟ್ಟಿ / ಪ್ರಥ್ವಿ ಶೆಟ್ಟಿ, ಸೀತರಾಮ್ ಶೆಟ್ಟಿ / ಅಶ್ವಿನಿ ಶೆಟ್ಟಿ, ಗೋಕುಲ್ ದಸ್ಸ್ ರೈ / ನಿಶ್ಮಿತಾ
ರೈ.

ರಾಸ್ ಅಲ್ ಖೈಮಾ: ಸಂಪತ್ ಶೆಟ್ಟಿ / ಲಾಸ್ಯ ಶೆಟ್ಟಿ.
ವಂದನಾರ್ಪಣೆ ಮತ್ತು ಉಪಹಾರದೊಂದಿಗೆ ಸಭೆ ಮುಕ್ತಾಯವಾಯಿತು.

Comments are closed.