ಕರಾವಳಿ

ಮಾದಕ ವಸ್ತುಗಳಾದ ಎಂ.ಡಿ.ಎಂ.ಎ, ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ; 7 ಲಕ್ಷ 86 ಸಾವಿರ ಮೌಲ್ಯದ ಗಾಂಜಾ, ಎಂ.ಡಿ.ಎಂ.ಎ ವಶ

Pinterest LinkedIn Tumblr

ಉಡುಪಿ: ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ನಾಲ್ವರು ಆರೋಪಿಗಳನ್ನು ಉಡುಪಿ ಸೆನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾಪು ಕುರ್ಕಾಲು ಗ್ರಾಮದ ಪ್ರೇಮನಾಥ ಅಲಿಯಾಸ್ ಪ್ರೇಮ್‌ ಯಾನೆ ರೇವುನಾಥ(23), ಉಡುಪಿ ಪೆರ್ಡೂರಿನ ಶೈಲೇಶ ಶೆಟ್ಟಿ (24), ಕಾಪು ಬೊಮ್ಮರಬೆಟ್ಟು‌ ನಿವಾಸಿ ಪ್ರಜ್ವಲ್‌(28 ), ಉಡುಪಿ ಬೊಮ್ಮರಬೆಟ್ಟುವಿನ ರತನ್‌ (27), ಬಂಧಿತರು.

ಕಾರ್ಕಳ ತಾಲೂಕು ನೀರೆ ಗ್ರಾಮದ ನೀರೆಹೆದ್ದಾರಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾರು ಮತ್ತು ಮೋಟಾರು ಸೈಕಲ್ ನಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾ ಹಾಗೂ ಎಂಡಿಎಂಎ ಪೌಡರ್‌ನ್ನು ಮಾರಾಟ ಮಾಡಲು ಆರೋಪಿಗಳು ಹೊಂಚುಹಾಕುತ್ತಿದ್ದಾಗ ಖಚಿತ ಮಾಹಿತಿ ಆಧರಿಸಿ‌ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಅಪಾರ ಪ್ರಮಾಣದ ಸೊತ್ತು ವಶ
37 ಗ್ರಾಂ 27 ಮಿಲಿ ಗ್ರಾಂ ತೂಕದ ಎಂಡಿಎಂಎ, 1ಕೆ.ಜಿ 112 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದು, ಎಂಡಿಎಂಎ ಅಂದಾಜು ಮೌಲ್ಯ ರೂ. 2 ಲಕ್ಷ , ಗಾಂಜಾದ ಅಂದಾಜು ಮೌಲ್ಯ ರೂ. 87,500, ಆಗಿರುತ್ತದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಮೊಬೈಲ್‌ ಪೋನ್‌-5, ಅಂದಾಜು ಮೌಲ್ಯ ರೂ. 41 ಸಾವಿರ. ಗಾಂಜಾವನ್ನು ಸಾಗಾಟ ಮಾಡಲು ಬಳಸಿದ ಬ್ಯಾಗ್‌ ಇನ್ನಿತರ ವಸ್ತುಗಳು ಸಹಿತ ನಗದು ರೂಪಾಯಿ 7130 ಅನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಸೊತ್ತಿನ ಒಟ್ಟು ಮೌಲ್ಯ ರೂ, 7,86,330 ರೂ. ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ಉಪವಿಭಾಗದ ಡಿವೈಎಸ್ಪಿ ಅರವಿಂದ್ ಎನ್ ಕಲಗುಜ್ಜಿ, ಉಡುಪಿ ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ನೇತೃತ್ವದಲ್ಲಿ ಸೆನ್ ಠಾಣೆ ಉಪನಿರೀಕ್ಷಕ ಪವನ್‌ ನಾಯಕ್, ಸೆನ್ ಠಾಣಾ ಸಿಬ್ಬಂದಿಯಗಳಾದ ಪ್ರವೀಣ್ ಕುಮಾರ್, ಪ್ರವೀಣ್‌, ರಾಜೇಶ್ , ವೆಂಕಟೇಶ, ದಿಕ್ಷೀತ್ , ಮಾಯಪ್ಪ, ಚರಣ್‌ರಾಜ್‌ ರವರನ್ನೊಳಗೊಂಡ ತಂಡ ಈ ಕಾರ್ಯಾಚರಣೆಯಲ್ಲಿದ್ದರು.

Comments are closed.