ಕುಂದಾಪುರ: ತಾಲೂಕಿನ ಪ್ರಮುಖ ಸಹಕಾರಿ ಸಂಘಗಳಲ್ಲೊಂದಾದ ಕೋಟೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಗೆ ಅವಿರೋಧವಾಗಿ ನಿರ್ದೇಶಕರು ಆಯ್ಕೆಯಾಗಿದ್ದು ಕಾಂಗ್ರೆಸ್ ಬೆಂಬಲಿತರಿಗೆ 9 ಸ್ಥಾನ ಹಾಗೂ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 4 ಸ್ಥಾನ ಪಡೆದುಕೊಂಡಿದ್ದಾರೆ.
ದಿನಾಂಕ 05.01.2025ರಂದು ಮುಂದಿನ ಐದು ವರ್ಷಗಳ ಅವಧಿಗೆ ನಡೆಯಬೇಕಾಗಿದ್ದ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಿರುವ ಉಮೇದುದಾರರ ನಾಮಪತ್ರಗಳನ್ನು ಪರಿಶೀಲಿಸಿ ಸಂಘದ ಉಪವಿಧಿಯ ಪ್ರಕಾರ ಆಯ್ಕೆಯಾಗಬೇಕಾದ ಸ್ಥಾನಗಳ ಸಂಖ್ಯೆಗೆ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಯು ಸರಿಸಮನಾಗಿರುವುದರಿಂದ ಅರ್ಹ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸಾಮಾನ್ಯ ಕ್ಷೇತ್ರದಲ್ಲಿ ನವೀನ ಕುಮಾರ್ ಹೆಗ್ಡೆ ಶಾನಾಡಿ ಕೆದೂರು, ಸದಾನಂದ ಶೆಟ್ಟಿ ಕೆದೂರು, ಮೋಹನದಾಸ ಶೆಟ್ಟಿ ಎಂ ತೆಕ್ಕಟ್ಟೆ, ಭರತ್ ಕುಮಾರ್ ಶೆಟ್ಟಿ ಕಾಳಾವರ, ಶರತ್ ಕುಮಾರ್ ಹೆಗ್ಡೆ ಶಾನಾಡಿ, ರಮೇಶ್ ಸುವರ್ಣ ಬೀಜಾಡಿ- ಕೋಟೇಶ್ವರ, ಗೋಪಾಲ ಕುಂಭಾಶಿ ಆಯ್ಕೆಗೊಂಡರು. ಮಹಿಳಾ ಮೀಸಲಾತಿಯಲ್ಲಿ ಆಶಾಲತಾ ಶೆಟ್ಟಿ ವಕ್ವಾಡಿ, ಸುಶೀಲ ಕೋಟೇಶ್ವರ ಆಯ್ಕೆಗೊಂಡರು. ಹಿಂದುಳಿದ ವರ್ಗ ಮೀಸಲು ಸ್ಥಾನ(ಪ್ರವರ್ಗ ಎ)ರಲ್ಲಿ ಅಶೋಕ್ ಪೂಜಾರಿ ಬೀಜಾಡಿ, ಹಿಂದುಳಿದ ವರ್ಗ ಮೀಸಲು ಸ್ಥಾನ (ಪ್ರವರ್ಗ ಬಿ)ರಲ್ಲಿ ಗೋಪಾಲ ಶೆಟ್ಟಿ ಹೊಸ್ಮಠ ಕೊರ್ಗಿ ಆಯ್ಕೆಯಾದರು. ಪ.ಜಾತಿ ಮೀಸಲು ಸ್ಥಾನದಲ್ಲಿ ಸುರೇಶ ಕೆ. ವಿ ಕಾಳಾವರ ಹಾಗ ಪ. ಪಂಗಡ ಮೀಸಲು ಸ್ಥಾನದಲ್ಲಿ ಚಿಕ್ಕು ಅಸೋಡು ಆಯ್ಕೆಯಾಗಿದ್ದಾರೆ.
ಸಹಕಾರ ಅಭಿವೃದ್ಧಿ ಅಧಿಕಾರಿ/ರಿಟರ್ನಿಂಗ್ ಅಧಿಕಾರಿ ಹಾಗೂ ಸಂಘದ ಚುನಾವಣಾ ಅಧಿಕಾರಿಯಾದ ಸುನೀಲ್ ಕುಮಾರ್ ಸಿ.ಎಂ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಶ್ವೇಶ್ವರ ಐತಾಳ್ ಸಹಕರಿಸಿದ್ದರು.
Comments are closed.