ಕರಾವಳಿ

ಕುಂದಾಪುರ ಪುರಸಭೆ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ್ ವಿ. ಆಯ್ಕೆ

Pinterest LinkedIn Tumblr

ಕುಂದಾಪುರ: ಇಲ್ಲಿನ ಪುರಸಭೆಯ ಮೂರನೇ ಅವಧಿಯ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ಆಡಳಿತ ಪಕ್ಷದ ಸದಸ್ಯ ಪ್ರಭಾಕರ್ ವಿ. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶನಿವಾರ ಪುರಸಭೆಯ ಸಭಾಂಗಣದಲ್ಲಿ ನಡೆಯಿತು. ಆಡಳಿತ ಪಕ್ಷದ ಸದಸ್ಯರಾದ ರೋಹಿಣಿ ಉದಯಕುಮಾರ್ ಅವರು ಸ್ಥಾಯೀ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪ್ರಭಾಕರ ವಿ. ಅವರ ಹೆಸರನ್ನು ಸೂಚಿಸಿದರು. ಇದನ್ನು ಸದಸ್ಯ ಸಂದೀಪ್ ಖಾರ್ವಿ ಅವರು ಅನುಮೋದಿಸಿದರು. ವಿಪಕ್ಷದಿಂದ ಯಾರೂ ಸ್ಪರ್ಧಿಸದಿದ್ದುರಿಂದ ಅವಿರೋಧ ಆಯ್ಕೆ ನಡೆ ನಡೆಯಿತು.

23 ಸದಸ್ಯ ಬಲದ ಪುರಸಭೆಯಲ್ಲಿ ಆಡಳಿತ ಪಕ್ಷವಾದ ಬಿಜೆಪಿಯ 14, ವಿಪಕ್ಷ ಕಾಂಗ್ರೆಸ್‌ 8. ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಪುರಸಭೆ ಅಧ್ಯಕ್ಷ ಮೋಹನ್ ದಾಸ್ ಶೆಣೈ ಅಭಿನಂದಿಸಿದರು. ಸದಸ್ಯರಾದ ರಾಘವೇಂದ್ರ ಖಾರ್ವಿ, ಚಂದ್ರಶೇಖರ್ ಖಾರ್ವಿ ಶುಭಹಾರೈಸಿದರು. ಉಪಾಧ್ಯಕ್ಷೆ ವನಿತಾ ಎಸ್.ಬಿಲ್ಲವ, ಸದಸ್ಯರಾದ ದೇವಕಿ ಸಣ್ಣಯ್ಯ, ಶ್ವೇತಾ ಸಂತೋಷ್, ಶೇಖರ್ ಪೂಜಾರಿ, ಆಶಕ್ ಕೋಡಿ, ಶ್ರೀಧರ್ ಶೇರೆಗಾರ್, ಅಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.

ಪುರಸಭೆ ಮುಖ್ಯಾಧಿಕಾರಿ ಆನಂದ ಜೆ. ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

Comments are closed.