ಕುಂದಾಪುರ: ಸಹಕಾರಿ ಸಂಸ್ಥೆಯೊಂದಕ್ಕೆ 40 ಲಕ್ಷದ 62 ಸಾವಿರದ 108 ರೂ. ಮೊತ್ತದ ಚೆಕ್ ನೀಡಿ ಅದು ಅಮಾನ್ಯಗೊಂಡ ಪ್ರಕರಣದ ಆರೋಪಿ ಗಂಗೊಳ್ಳಿ ಮೋಹನ್ ಖಾರ್ವಿ ಎನ್ನುವರ ಮೇಲಿನ ಆರೋಪಗಳು ರುಜುವಾತಾಗದ ಕಾರಣ ದೋಷಮುಕ್ತಗೊಳಿಸಿ ಕುಂದಾಪುರದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ರೋಹಿಣಿ ಡಿ. ಅವರು ಆದೇಶ ಪ್ರಕಟಿಸಿದ್ದಾರೆ.
ಆರೋಪಿಯು ಸಂಸ್ಥೆಯೊಂದಕ್ಕೆ ಚೆಕ್ ನೀಡಿದ್ದು ಆ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದ ಕಾರಣ ಅದು ಅಮಾನ್ಯಗೊಂಡಿತ್ತು. ಸಂಸ್ಥೆ ಆರೋಪಿಗೆ ನೋಟಿಸ್ ನೀಡಿ ಚೆಕ್ ಅಮಾನ್ಯಗೊಂಡಿದ್ದು ಹಣ ನೀಡುವಂತೆ ಸೂಚಿಸಿದ್ದರೂ ಕೂಡ ಆತ ಪಾವತಿ ಮಾಡದ ಹಿನ್ನೆಲೆ ಚೆಕ್ ಅಮಾನ್ಯತೆ (ಚೆಕ್ ಬೌನ್ಸ್) ಪ್ರಕರಣವವನ್ನು ದಾಖಲಿಸಲಾಗಿತ್ತು. ನೆಗೋಶಿಯೆಬಲ್ ಇನ್ಸ್ಟ್ರುಮೆಂಟ್ (ಎನ್.ಐ) ಕಾಯ್ದೆಯ 138 ರ ಅಡಿಯಲ್ಲಿ ದಾಖಲಾಗಿದ್ದ ಈ ಪ್ರಕರಣದಲ್ಲಿ ಪಿರ್ಯಾದುದಾರರ ಪ್ರತಿನಿಧಿ ಸಾಕ್ಷ್ಯ ನುಡಿದಿದ್ದರು. ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಲಯ ಪ್ರಕರಣ ಸಾಭೀತಾಗದ ಕಾರಣ ಆರೋಪಿಯನ್ನು ದೋಷಮುಕ್ತಗೊಳಿಸಿ ಆದೇಶ ಪ್ರಕಟಿಸಿದೆ.
ಆರೋಪಿ ಮೋಹನ್ ಖಾರ್ವಿ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.
Comments are closed.