ಕರಾವಳಿ

ಕುಂದಾಪುರದ ಮಾರ್ಕೋಡು ಎಂಬಲ್ಲಿ ಬೋನಿಗೆ ಬಿದ್ದ ಚಿರತೆ!

Pinterest LinkedIn Tumblr

ಕುಂದಾಪುರ: ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಕಾಣಿಣಿಕೊಳ್ಳುತ್ತಿದ್ದ ಚಿರತೆ ಹಿಡಿಯಲು ಅರಣ್ಯ ಇಲಾಖೆ ಇಟ್ಟ ಬೋನಿನಲ್ಲಿ ಚಿರತೆ ಸೆರೆಯಾದ ಘಟನೆ ತಾಲೂಕಿನ ಕೋಣಿ ಗ್ರಾ.ಪಂ ವ್ಯಾಪ್ತಿಯ ಮಾರ್ಕೋಡು ಗುಡ್ಡೆಶಾಲೆ ಅಂಗನವಾಡಿ ಬಳಿ ನಡೆದಿದೆ.

ಅಂಗನವಾಡಿ, ಮನೆಗಳಿರುವ ಈ ಪ್ರದೇಶದಲ್ಲಿ ಚಿರತೆ ಓಡಾಟ ಹಾಗೂ ಚಿರತೆ ಕೂಗುವ ಸದ್ದು ಕೇಳಿಬಂದ ಹಿನ್ನೆಲೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆಯೇ ಗುರುವಾರ ಇಲ್ಲಿನ ಗುಡ್ಡೆಶಾಲೆ ಬಳಿ ಬೋನಿರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ಸಿದ್ದಪಡಿಸಲಾಗಿತ್ತು. ಈ ಬೋನಿನಲ್ಲಿ ಅಂದಾಜು 2-3 ವರ್ಷ ಪ್ರಾಯದ ಚಿರತೆ ಸೆರೆಯಾಗಿರುವುದು ಶುಕ್ರವಾರ ಕಂಡುಬಂದಿದ್ದು ಅರಣ್ಯಾಧಿಕಾರಿಗಳು ಭೇಟಿ ನೀಡಿ ಚಿರತೆಯನ್ನು ಕೊಂಡೊಯ್ದಿದ್ದು ರಕ್ಷಿತಾರಣ್ಯಕ್ಕೆ ಬಿಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಚಿರತೆಯನ್ನು ಕಾಣಲು ನೂರಾರು ಮಂದಿ ಜಮಾಯಿಸಿದ್ದರು.

ಕುಂದಾಪುರ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಉಪವಲಯ ಅರಣ್ಯಾಧಿಕಾರಿ ವಿನಯ್ ಜಿ., ಗಸ್ತು ಅರಣ್ಯ ಪಾಲಕರಾದ ಮಾಲತಿ, ಅಶೋಕ್, ಅರಣ್ಯ ವೀಕ್ಷಕ ಸೋಮಶೇಖರ್ ಹಾಗೂ ಸಾರ್ವಜನಿಕರು ಇದ್ದರು.

Comments are closed.