ಕರಾವಳಿ

ಅಕ್ರಮವಾಗಿ ಕೆಂಪು ಕಲ್ಲು ಬಂಡೆ ಸ್ಪೋಟ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಶಂಕರನಾರಾಯಣ ಪೊಲೀಸರು!

Pinterest LinkedIn Tumblr

ಉಡುಪಿ: ಹಳ್ಳಿಹೊಳೆ ಗ್ರಾಮದ ಅರಮನೆಕೊಡ್ಲು ಎಂಬಲ್ಲಿ ಅಕ್ರಮವಾಗಿ ಕಲ್ಲು ಬಂಡೆಗಳನ್ನು ಸ್ಪೋಟಿಸಿದ ಪರಿಣಾಮ ಸುತ್ತುಮುತ್ತಲಿನ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ (ಸುಮೋಟೊ) ದಾಖಲಾಗಿದೆ.

ಅನಂತಮೂರ್ತಿ ಭಟ್ ಎಂಬಾತ ತನ್ನ ಜಾಗದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಕಲ್ಲು ಬಂಡೆಗಳನ್ನು ಸ್ಪೋಟಿಸಿದ್ದು, ಇದರ ಪರಿಣಾಮ ಅಕ್ಕ ಪಕ್ಕದ ಹಲವು ಮನೆಗಳಿಗೆ ಹಾನಿ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಸ್ಪೋಟಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

(ಸಂಗ್ರಹ ಚಿತ್ರ)

ಶಂಕರನಾರಾಯಣ ಪಿಎಸ್ಐ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿ ತಂಡ ಸ್ಥಳ ಪರಿಶೀಲಿಸಿದಾಗ ಸ್ಥಳದಲ್ಲಿದ್ದ ಕೆಂಪು ಕಲ್ಲುಬಂಡೆಗಳನ್ನು ಯಾವುದೇ ಪರವಾನಿಗೆ ಇಲ್ಲದೇ, ಸ್ಪೋಟಕ ವಸ್ತು ಬಳಸಿ ಬಂಡೆಕಲ್ಲುಗಳನ್ನು ಒಡೆದು ಸಮತಟ್ಟು ಮಾಡಿದ್ದು ಸ್ಥಳದಲ್ಲಿ ಕಲ್ಲು ಬಂಡೆಗಳನ್ನು ಸ್ಪೋಟಕ ಬಳಸಿ ಒಡೆದು ಹಾಕಿರುವುದು ಹಾಗೂ ಬಂಡೆಗಳನ್ನು ಒಡೆಯಲು ಸ್ಪೋಟಕ ವಸ್ತುಗಳನ್ನು ಉಪಯೋಗಿಸಿದ ಎಲೇಕ್ಟ್ರೀಕ್ ವಯರ್‌ಗಳು ಬಿದ್ದಿರುವುದು ಕಂಡು ಬಂದಿದೆ. ಹಾಗೂ ಕಲ್ಲುಬಂಡೆಗಳಿಗೆ ಯಾವುದೋ ವಸ್ತುವಿನಿಂದ ಅಲ್ಲಲ್ಲಿ ರಂಧ್ರ ಕೊರೆದು ಸ್ಫೋಟಿಸಿದಂತೆ ಕಂಡುಬಂದಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಬಂಡೆಕಲ್ಲುಗಳನ್ನು ಸ್ಪೋಟಿಸಲು ಉಪಯೋಗಿಸಿದ ಎಲೇಕ್ಟ್ರೀಕ್ ವಯರ್‌ಗಳು, ಪಾಲೇಥಿನ್ ಚೀಲದಲ್ಲಿ ಕೆಂಪು ಮಣ್ಣಿನಂತೆ ತೋರುವ ಮಣ್ಣು ಅದರ ಪಕ್ಕದಲ್ಲಿ EXPLOSIVE ಎಂದು ಬರೆದಿರುವ ಬಾಕ್ಸ್, ಇನ್ನೊಂದು ಚೀಲದಲ್ಲಿ ಸ್ಪೋಟಕಕ್ಕೆ ಉಪಯೋಗಿಸುವ ವಸ್ತು ಕಂಡು ಬಂದಿದೆ.

ಅನಂತಮೂರ್ತಿ ಭಟ್ ಇತರರೊಂದಿಗೆ ಸೇರಿ ಅಕ್ರಮವಾಗಿ ಕೆಂಪು ಕಲ್ಲು ಬಂಡೆಗಳನ್ನು ಕಂಪ್ರೆಸರ್ ಮತ್ತು ಸ್ಪೋಟಕ ವಸ್ತುಗಳನ್ನು ಬಳಸಿ, ಸ್ಪೋಟಗೊಳಿಸಿರುವುದು ಕಾನೂನು ಬಾಹಿರ ಕೃತ್ಯವಾಗಿದೆ ಎಂದು ಪಿಎಸ್ಐ ನಾಸೀರ್ ಹುಸೇನ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Comments are closed.