ಕರ್ನಾಟಕ

ಮಂಗಳೂರು-ದಿಲ್ಲಿ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಕಾರ್ಯಾರಂಭ

Pinterest LinkedIn Tumblr

ಮಂಗಳೂರು: ಮಂಗಳೂರಿನಿಂದ ದಿಲ್ಲಿಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆಯ ನೇರ ವಿಮಾನಯಾನ ಶನಿವಾರದಿಂದ ಆರಂಭಗೊಂಡಿದೆ.

ಉದ್ಘಾಟನಾ ವಿಮಾನ ಐಎಕ್ಸ್ 1552 ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 6.40ಕ್ಕೆ ಹೊರಟು 9.35ಕ್ಕೆ ದಿಲ್ಲಿ ಏರ್‌ಪೋರ್ಟಲ್ಲಿ ಇಳಿಯಿತು. ಜೊತೆ ವಿಮಾನವಾದ ಐಎಕ್ಸ್ 2768 ದಿಲ್ಲಿಯಿಂದ ಬೆಳಗ್ಗೆ 6.40ಕ್ಕೆ ಹೊರಟು ಮಂಗಳೂರಿನಲ್ಲಿ 9.35ಕ್ಕೆ ಇಳಿದಿದೆ. ದಿಲ್ಲಿಯಿಂದ ಹೊರಟ ವಿಮಾನಕ್ಕೆ ಕ್ಯಾ | ವಿನೀತ್ ಕುಮಾ‌ರ್ ಕಮಾಂಡ‌ರ್ ಆಗಿದ್ದರು.

ಮಂಗಳೂರು- ದಿಲ್ಲಿ ವಿಮಾನದಲ್ಲಿ 167 ಮಂದಿ ಹಾಗೂ ದಿಲ್ಲಿ-ಮಂಗಳೂರು ವಿಮಾನದಲ್ಲಿ 144 ಪ್ರಯಾಣಿಕರಿದ್ದರು. ವಿಮಾನ ಪ್ರತಿದಿನ ಸಂಚರಿಸಲಿದೆ.ಹೊಸ ವಿಮಾನಕ್ಕೆ ಮಂಗಳೂರು ವಿಮಾನ ನಿಲ್ದಾಣದ ಅಗ್ನಿಶಾಮಕ ವಿಭಾಗದಿಂದ ಜಲಫಿರಂಗಿ ವಂದನೆ ಸಲ್ಲಿಸಿ ಗೌರವ ಸೂಚಿಸಲಾಯಿತು.

ಇದುವರೆಗೆ ಮಂಗಳೂರು ಮುಂಬಯಿ ಮಧ್ಯೆ ಕಾರ್ಯಾಚರಿಸುತ್ತಿದ್ದ ಏರ್ ಇಂಡಿಯಾ ಕಂಪೆನಿಯ ಏಕೈಕ ವಿಮಾನ ಜ.31ಕ್ಕೆ ತನ್ನ ಸೇವೆ ಸ್ಥಗಿತಗೊಳಿಸಿದೆ. ಕೊನೆಯ ವಿಮಾನ ಶುಕ್ರವಾರ ತೆರಳಿದೆ.

ಲಭ್ಯ ಮಾಹಿತಿ ಪ್ರಕಾರ ಮಂಗಳೂರು-ಮುಂಬಯಿ ಮಧ್ಯೆ ಇನ್ನು ಏ‌ರ್ ಇಂಡಿಯಾ ಬದಲಿಗೆ ಏ‌ರ್ ಇಂಡಿಯಾ ಎಕ್ಸ್‌ಪ್ರೆಸ್‌ ಕಾರ್ಯಾಚರಿಸಲಿದೆ. ಏ‌ರ್ ಇಂಡಿಯಾ ಇನ್ನು ಮೆಟ್ರೋ ಪಟ್ಟಣಗಳ ಮಧ್ಯೆ ಹಾಗೂ ಅಂತಾರಾಷ್ಟ್ರೀಯ ದೂರ ಮಾರ್ಗಗಳ ಮಧ್ಯೆ ಮಾತ್ರವೇ ಸಂಚರಿಸಲಿದೆ.
ಏರ್‌ಇಂಡಿಯಾ ಎನ್ನುವುದು ಪ್ರೀಮಿಯಂ ದರ್ಜೆಯ ಸೌಲಭ್ಯ ಹೊಂದಿರುವ ಏರ್‌ಕ್ಯಾರಿಯರ್ ಆಗಿದ್ದರೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಕಡಿಮೆ ದರದಲ್ಲಿ ಕನಿಷ್ಠ ಸೌಲಭ್ಯಗಳೊಂದಿಗೆ ಏರ್‌ಕ್ಯಾರಿಯ‌ರ್ ಸೇವೆ ನೀಡುತ್ತದೆ.

Comments are closed.