ಆರೋಗ್ಯ

ಬಾಲಕನ ಎದೆಹೊಕ್ಕಿದ್ದ ತೆಂಗಿನ ಗರಿ, ಸ್ಟೀಲ್ ಚೈನ್ ಹೊರತೆಗೆದ ಮಂಗಳೂರು ವೆನ್ಲಾಕ್‌ ವೈದ್ಯರ ತಂಡ

Pinterest LinkedIn Tumblr

ಮಂಗಳೂರು: ವೆನ್ಲಾಕ್ ಆಸ್ಪತ್ರೆಯ ಹೃದಯ, ಎದೆ ಮತ್ತು ರಕ್ತನಾಳದ ಶಸ್ತ್ರಚಿಕಿತ್ಸೆ ವಿಭಾಗದ ಸಂಪೂರ್ಣ ತಂಡ, ಡಾ. ಸುರೇಶ್ ಪೈ ಅವರ ನೇತೃತ್ವದಲ್ಲಿ, 12 ವರ್ಷದ ಬಾಲಕನ ಎದೆಯಿಂದ ಒಂದು ದೊಡ್ಡ ತೆಂಗಿನ ಗರಿಯನ್ನು ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗಿದಿದ್ದಾರೆ.

ಮೂಲತಃ ಅಸ್ಸಾಂ ರಾಜ್ಯದ ಪ್ರಸ್ತುತ ಮಡಿಕೇರಿಯಲ್ಲಿ ಕೆಲಸದಲ್ಲಿದ್ದ ಬಾಲಕ ಬಿದ್ದು ಮರದ ತುಂಡು ಅವನ ಕುತ್ತಿಗೆಗೆ ಪ್ರವೇಶಿಸಿ ಎದೆಯಲ್ಲಿ ಸಿಕ್ಕಿಕೊಂಡಿತ್ತು. ಸಂಜೆ 7.30 ಕ್ಕೆ ಆಘಾತಕ್ಕೊಳಗಾದ ನಂತರ ಮಧ್ಯರಾತ್ರಿ 12.15 ಕ್ಕೆ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಕರೆತರಲಾಯಿತು. ಮಧ್ಯರಾತ್ರಿ 1.30 ರಿಂದ 3.30 ರವರೆಗೆ ಶಸ್ತ್ರಚಿಕಿತ್ಸೆ ನಡೆಯಿತು. ಮರದ ತುಂಡಿನ ಜೊತೆಗೆ ಸ್ಟೀಲ್ ಚೈನ್ ಕೂಡ ಸಿಲುಕಿಕೊಂಡಿತ್ತು, ಮರದ ಗರಿ ಮತ್ತು ಸ್ಟೀಲ್ ಚೈನ್ ಶಸ್ತ್ರಚಿಕಿತ್ಸೆಯಿಂದ ಹೊರತೆಗೆದು ಯುವ ಜೀವವನ್ನು ಉಳಿಸುವಲ್ಲಿ ಸಿಟಿವಿಎಸ್ ವೈದ್ಯಕೀಯ ತಂಡದ ಅಸಾಧಾರಣ ಪ್ರಯತ್ನ ಮಹತ್ತರವಾಗಿದೆ.

ಶಸ್ತ್ರ ಚಿಕಿತ್ಸೆಯ ಬಳಿಕ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ದೊರಕಿದೆ.

Comments are closed.