ಕರಾವಳಿ

ಮರವಂತೆಯ ಸವಿತಾ ಕೆ. ಅವರಿಗೆ ಪಿ.ಎಚ್‌.ಡಿ. ಪದವಿ

Pinterest LinkedIn Tumblr

ಕುಂದಾಪುರ: ಪೆರಿಯಾರ್ ವಿಶ್ವವಿದ್ಯಾಲಯವು ಡಾ. ಸವಿತಾ ಕೆ. ಅವರಿಗೆ “ದ ರೋಲ್ ಆಫ್ ಜಾಬ್ ಸಾಟಿಸ್ಫ್ಯಾಕ್ಷನ್ ಇನ್ ಲಿಂಕಿಂಗ್ ಪ್ರೊಫೆಷನಲ್ ಐಡೆಂಟಿಟಿ ಅಂಡ್ ಬರ್ನ್ ಔಟ್: ಡೆವಲಪ್ಮೆಂಟ್ ಅಂಡ್ ವಾಲಿಡೇಷನ್ ಆಫ್ ಅ ಪ್ರೊಫೆಷನಲ್ ಐಡೆಂಟಿಟಿ ಸ್ಕೇಲ್ ಫಾರ್ ಹೈಯರ್ ಸೆಕೆಂಡರಿ ಟೀಚರ್ಸ್” ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕಾಗಿ ಪಿಎಚ್.ಡಿ ಪದವಿ ನೀಡಿದೆ.

ಅವರು ಪೆರಿಯಾರ್ ವಿಶ್ವವಿದ್ಯಾಲಯದ ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಜೆ. ವೆಂಕಟಾಚಲಂ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದಾರೆ. ಸರಸ್ವತಿ ಮತ್ತು ಚಂದ್ರಕಾಂತ. ಕೆ  ದಂಪತಿಯ ಪುತ್ರಿಯಾಗಿರುವ ಡಾ. ಸವಿತಾ ಕೆ. ಅವರು ಅಂಕೋಲದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕಿಶನ್ ಅವರ ಪತ್ನಿ.

Comments are closed.