UAE

ಯಕ್ಷ ಮಿತ್ರರು ದುಬೈನ 22 ನೇ ವರ್ಷದ “ಯಕ್ಷ ಸಂಭ್ರಮ-2025” ಅಂಗವಾಗಿ ನಡೆಯುವ ‘ಶಬರಿಮಲೆ ಸ್ವಾಮಿ ಅಯ್ಯಪ್ಪ’ ಭಕ್ತಿ ಪ್ರಧಾನ ಪ್ರಸಂಗದ ಮುಹೂರ್ತ ಪೂಜೆ

Pinterest LinkedIn Tumblr

ದುಬೈ: ದುಬಾಯಿ ಯಕ್ಷಗಾನದ ಮಾತೃ ಸಂಸ್ಥೆ ಯಕ್ಷ ಮಿತ್ರರು ದುಬಾಯಿ ಇವರ 22 ನೇ ವರ್ಷದ “ಯಕ್ಷ ಸಂಭ್ರಮ-2025” ಕಾರ್ಯಕ್ರಮದ ಅಂಗವಾಗಿ  ಪ್ರದರ್ಶನಗೊಳ್ಳಲಿರುವ ‘ಶಬರಿಮಲೆ ಸ್ವಾಮಿ ಅಯ್ಯಪ್ಪ’ ಎಂಬ ಭಕ್ತಿ ಪ್ರಧಾನ ಪ್ರಸಂಗದ ಮುಹೂರ್ತ ಪೂಜೆಯು ಎಪ್ರಿಲ್ 6 ರಂದು ಭಾನುವಾರದಂದು ಡಿಐಸಿ ವಿ.ಕೆ. ಎಕ್ಸಿಬಿಷನ್ &ಡೆಕೋರ್ ಇಂಡಸ್ಟ್ರಿ ಯ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಶ್ರೀಯುತರಾದ ವಾಸುದೇವ ಭಟ್ ಪುತ್ತಿಗೆ, ಲಕ್ಷ್ಮಿಕಾಂತ್ ಭಟ್  ಮತ್ತು ಸಂತೋಷ್ ರಾವ್ ಇವರ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮವು ನೆರವೇರಿತು. ಮೊಗವೀರ್ಸ್ ದುಬೈ ಭಜನ ತಂಡದವರಿಂದ ಭಜನೆ ಕಾರ್ಯಕ್ರಮ ನಡೆಯಿತು.  ಯಕ್ಷಗಾನದ  ಆಖ್ಯಾನವನ್ನು ವಾಸುದೇವ ಭಟ್ ಪುತ್ತಿಗೆಯವರು ಮತ್ತು ರಾದೇ ಶ್ಯಾಮ್ ಜೀ ಯವರು ಲೋಕಾರ್ಪಣೆಗೊಳಿಸಿ ಕಲಾವಿದರಿಗೆ ಶುಭವನ್ನು ಹಾರೈಸಿದರು.

ಗುರುಗಳಾದ ಕಿಶೋರ್ ಗಟ್ಟಿ ನೇತೃತ್ವದಲ್ಲಿ ಭಾಗವತರಾದ ಕೃಷ್ಣ ಪ್ರಸಾದ್ ರಾವ್, ವೆಂಕಟೇಶ್ ಶಾಸ್ತ್ರಿ,  ಮತ್ತು ರಾಜೇಶ್ ಉಚ್ಚಿಲ ಇವರ ಹಿಮ್ಮೇಳ  ಸಹಕಾರದೊಂದಿಗೆ  ದೇವೆಂದ್ರನ ಒಡ್ಡೊಲಗದ ಮೂಲಕ ಯಕ್ಷಗಾನ ಪ್ರಸಂಗದ ಅಭ್ಯಾಸಕ್ಕೆ ಅದ್ದೂರಿ  ಚಾಲನೆಯನ್ನು ನೀಡಲಾಯಿತು.ಯು. ಎ. ಇ ಯ ತುಳು ಕನ್ನಡ ಸಂಘಟನೆಗಳ ಪದಾಧಿಕಾರಿಗಳು, ಬೇರೆ ಬೇರೆ ಸಮುದಾಯದ ಮುಖಂಡರು,ಕಲಾ ಪೋಷಕರು, ಹಾಗೂ ಅಪಾರ ಯಕ್ಷ ಕಲಾಭಿಮಾನಿಗಳು ಉಪಸ್ಥಿತರಿದ್ದರು. ಯಕ್ಷ ಮಿತ್ರರು ತಂಡದ ರೂವಾರಿ. ಮತ್ತು ಕಲಾವಿದರು, ಸರ್ವ ಸದಸ್ಯರು, ಸದಸ್ಯೆಯರು ಉಪಸ್ಥಿತರಿದ್ಧು ಕಾರ್ಯಕ್ರಮವನ್ನು ಚಂದಗಾಣಿಸಿ ಕೊಟ್ಟರು.

ಯಕ್ಷಗಾನ ಪ್ರದರ್ಶನದ ದಿನಾಂಕ, ಸ್ಥಳ ಹಾಗೂ ಊರಿನಿಂದ ಬರುವ ಅತಿಥಿ ಕಲಾವಿದರ ಬಗ್ಗೆ ಮಾಹಿತಿಯನ್ನು ರಿತೇಶ್ ಅಂಚನ್ ಕುಲಶೇಖರವರು ನೀಡಿ ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು. ಯಕ್ಷಗಾನ ಪೂಜೆಯ ಅನ್ನದಾನ ಪ್ರಸಾದವನ್ನು ಪ್ರಪ್ರಥಮ ಬಾರಿಗೆ ಬಾಳೆಯ  ಎಲೆಯಲ್ಲಿ ಬಡಿಸುವ  ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

Comments are closed.