ಕನ್ನಡ ವಾರ್ತೆಗಳು

ಶ್…ಎಚ್ಚರಿಕೆ! ಬಹಳ ಖತರ್ನಾಕ್ ಪ್ರಾಣಿಗಳಿವು….

Pinterest LinkedIn Tumblr

wild_animal_pic_1

ಕಾಡುಪ್ರಾಣಿಗಳು ಎಂದಾಕ್ಷಣ ನಮ್ಮೆಲ್ಲರಿಗೆ ಭಯ. ಏಕೆಂದರೆ ಇವುಗಳಿಗೆ ನಿಸರ್ಗ ನೀಡಿರುವ ಶಕ್ತಿ, ಉಗುರು, ಹಲ್ಲು, ಕೊಂಬು ಇತ್ಯಾದಿಗಳು ನಮಗಿಲ್ಲದೇ ಇದ್ದು ಇವುಗಳಿಗೆ ಸುಲಭವಾಗಿ ಆಹಾರವಾಗುವ ಶಕ್ತಿಹೀನರಾಗಿದ್ದೇವೆ. ನಿಸರ್ಗ ಎಲ್ಲಾ ಜೀವಿಗಳನ್ನು ಒಂದು ಸಮತೋಲನದಲ್ಲಿರಿಸಿದೆ. ಆದರೆ ಮಾನವರು ತಮ್ಮ ಸ್ವಾರ್ಥಕ್ಕಾಗಿ ನಿಸರ್ಗದ ಮೇಲೆ ಆಡಿದ ಆಟದ ಪರಿಣಾಮವಾಗಿ ಇಂದು ಹಲವು ಜೀವಿಗಳು ಅಳಿವಿನ ಅಂಚಿಗೆ ಬಂದು ನಿಂತಿವೆ. ಕೆಲವು ಜೀವಿಗಳ ಸಂತತಿಗಳಂತೂ ಅಳಿದೂ ಹೋಗಿದೆ. ಹುಷಾರು, ಇವುಗಳ ತಂಟೆಗೆ ಮಾತ್ರ ಹೋಗಬೇಡಿ.

ನಿಸರ್ಗದಲ್ಲಿರುವ ಹಲವು ಪ್ರಾಣಿಗಳ ಬಗ್ಗೆ ನಾವು ಕೇಳಿ ತಿಳಿದುಕೊಂಡಿರುವ ಕಾರಣಕ್ಕೆ ಅವುಗಳನ್ನು ನೋಡಿದಾಕ್ಷಣ ಭಯ ಮೂಡುತ್ತದೆ. ಆದರೆ ಕೆಲವು ಪ್ರಾಣಿಗಳು ನೋಡಲು ಭಯಾನಕವಾಗಿದ್ದು ಇವುಗಳ ನೋಟವೇ ಭಯಹುಟ್ಟಿಸುತ್ತದೆ. ಇಂದು ಜೀವಂತವಿರುವ ಈ ಪ್ರಾಣಿಗಳು ಅಳಿವಿನ ಅಂಚಿನಲ್ಲಿದ್ದು ಇವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗಾಗಿ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ.
ಅತೀ ಬುದ್ಧಿವಂತ ಪ್ರಾಣಿಗಳಿವು!
ನಮ್ಮ ಸುತ್ತಮುತ್ತಲೇ ಈ ಪ್ರಾಣಿಗಳು ಇದ್ದರೂ ಇವುಗಳಿಗೆ ಮುಖಾಮುಖಿಯಾಗದೇ ಇವು ನಮಗೆ ಅಪರಿಚಿತವಾಗಿಯೇ ಉಳಿದುಕೊಂಡಿದೆ. ಬನ್ನಿ, ಇಂತಹ ಕೆಲವು ಪ್ರಾಣಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಪರಿಚಯ ಮಾಡಿಕೊಳ್ಳೋಣ…

wild_animal_pic_2

ಸಾಗರದ ತಳದಲ್ಲಿ ಬಂಡೆಗಳ ನಡುವೆ ಕದ್ದು ಕುಳಿತುಕೊಳ್ಳುವ ಮೀನನ್ನು ನೋಡಿದರೆ ಈಗತಾನೇ ಯಾರೋ ಇದರ ಹಣೆಯ ಮೇಲೆ ಗುದ್ದಿ ದೊಡ್ಡ ಬಾಸುಂಡೆ ಎದ್ದಿರುವಂತೆ ಕಾಣುತ್ತದೆ. ಇದು ಕೊರಿಯಾ, ಚೀನಾ, ಜಪಾನ್ ಮತ್ತು ಒಗಾಸವಾರಾ ದ್ವೀಪಗಳಲ್ಲಿ ಹೆಚ್ಚಾಗಿ ಕಾಣಬರುತ್ತದೆ.

wild_animal_pic_3

ತೀರಾ ಇತ್ತೀಚೆಗೆ ಅಂದರೆ 2009ರಲ್ಲಿ ವೆನೆಜುವೇಲಾ ದೇಶದ ಅರಣ್ಯದಲ್ಲಿ ಕಂಡುಬಂದ ಈ ಪತಂಗ ತನ್ನ ದೊಡ್ಡ ಕಣ್ಣುಗಳಿಂದ ಭಯಹುಟ್ಟಿಸುತ್ತದೆ. ಇದರ ಮೈಗೆಲ್ಲಾ ನವಿರಾದ ರೋಮವಿದ್ದು ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.

wild_animal_pic_4

ಯೂಲಿಸಿಸ್ ಮತ್ತು ಸೈಕ್ಲೋಪ್ಸ್ ಎಂಬ ಕಥೆಯಲ್ಲಿ ಸೈಕ್ಲೋಪ್ಸ್ ಎಂಬುದು ಒಂಟಿಕಣ್ಣಿನ ರಾಕ್ಷಸನ ಹೆಸರು. ಇದೇ ರೂಪವನ್ನು ಹೋಲುವ ಶಾರ್ಕ್ ಮೀನೊಂದು ಪತ್ತೆಯಾಗಿದ್ದು ಒಂಟಿಕಣ್ಣಿನ ಕಾರಣಕ್ಕೆ ಇದಕ್ಕೂ ಸೈಕ್ಲೋಪ್ಸ್ ಶಾರ್ಕ್ ಎಂದೇ ಹೆಸರಿಟ್ಟಿದ್ದಾರೆ. ಇದನ್ನು ನೇರವಾಗಿ ನೋಡಿದರೆ ಶಿವ ಮೂರನೆಯ ಕಣ್ಣನ್ನೇನಾದರೂ ತೆರೆದನೇ ಅನ್ನಿಸುವಂತಹ ಭೀತಿ ಎದುರಾಗುತ್ತದೆ.

ಆಫ್ರಿಕಾದ ಟಾಂಗಾನ್ಯಿಕಾ ಸರೋವರ ಮತ್ತು ಕಾಂಗೋ ನದಿಯ ಜಲಾನಯನ ಭಾಗದಲ್ಲಿ ಕಂಡುಬರುವ ಈ ಮೀನು ಬಹುತೇಕ ಎಲ್ಲಾ ಮೀನುಗಳಂತೆಯೇ ಇದ್ದರೂ ಇದರ ಹಲ್ಲುಗಳು ಮಾತ್ರ ನೋಡಲು ಭಯಾನಕವಾಗಿ ಕಾಣುತ್ತವೆ. ಹುಲಿಯ ಕೋರೆಹಲ್ಲುಗಳನ್ನು ಮೇಲಿನ ಮತ್ತು ಕೆಳಗಿನ ದವಡೆಯಲ್ಲಿ ಸಮಾನಾಂತರದಲ್ಲಿ ಅಳವಡಿಸಿದಂತೆ ಕಾಣುವ ಈ ಚೂಪಾದ ಹಲ್ಲುಗಳಿರುವ ಮೀನು ಇತರ ಮೀನುಗಳ ಮೇಲೆ ಮತ್ತು ಅಪರೂಪಕ್ಕೆ ಮನುಷ್ಯರ ಮೇಲೂ ಧಾಳಿ ಮಾಡಿದ ಉದಾಹರಣೆಗಳಿವೆ.

wild_animal_pic_5

ಆಫ್ರಿಕಾ ಮತ್ತು ದಕ್ಷಿಣ ಸಹಾರಾ ಮರುಭೂಮಿಯ ಭಾಗದಲ್ಲಿ ಕಾಣುವ ಈ ಹಕ್ಕಿಗಳು ಅಗಲವಾದ ರೆಕ್ಕೆಗಳನ್ನು ಹೊಂದಿವೆ. ದೇಹ ಬಿಳಿಯದಾಗಿದ್ದರೂ ರೆಕ್ಕೆಯ ಅರ್ಧಭಾಗದ ಬಳಿಕ ಕಪ್ಪಗಾಗಿದ್ದು ಕೊಕ್ಕು ತುಕ್ಕುಹಿಡಿದ ತಗಡಿನಂತಿದೆ. ಈಗತಾನೇ ಯಾವುದೋ ಪ್ರಾಣಿಯನ್ನು ಖೂನಿ ಮಾಡಿ ಅದರ ರಕ್ತವನ್ನು ಕುಡಿದು ಬಂದಿದೆ ಎಂಬ ಭ್ರಮೆ ಮೂಡಿಸುವ ಈ ಕೊಕ್ಕಿಗೆ ಸಮನಾಗಿ ಇದರ ಕಿರಿದಾದ ಕಣ್ಣುಗಳು ಸಾಕ್ಷಿನೀಡುತ್ತವೆ. ಪ್ರಾಣಿಲೋಕದಲ್ಲಿ ಹುಲಿ ಕದ್ದು ಇತರ ಪ್ರಾಣಿಗಳನ್ನು ಹಿಡಿಯುವ ರೀತಿಯಲ್ಲಿಯೇ ಈ ಪಕ್ಷಿಯೂ ಚಾಣಾಕ್ಷತನದಿಂದ ಇತರ ಪಕ್ಷಿಗಳನ್ನು, ಅದರಲ್ಲೂ ವಿಶೇಷವಾಗಿ ಫ್ಲೆಮಿಂಗೋ ಹಕ್ಕಿಗಳನ್ನು ಹಿಡಿದು ತಿನ್ನುತ್ತದೆ.

wild_animal_pic_6

ಇದರ ಹೆಸರೇ ಇದರ ಬಗ್ಗೆ ಎಲ್ಲವನ್ನೂ ಹೇಳಿಬಿಡುತ್ತದೆ. ಇದನ್ನು ಪತಂಗ ಎಂದು ಮೊದಲೇ ಹೇಳದೇ ಇದ್ದರೆ ಇದನ್ನು ನೋಡಿದವರು ಇದನ್ನು ಕಡಲ ಏಡಿ ಅಥವಾ ಲಾಬ್ಸ್ಟರ್ ಎಂದೇ ತಪ್ಪಾಗಿ ಗುರುತಿಸಿಬಿಡುತ್ತಾರೆ. ಯೂರೋಪ್, ಏಷಿಯಾ ಮತ್ತು ಉತ್ತರ ಭಾಗ ಹೊರತಾಗಿ ಇಡಿಯ ಆಫ್ರಿಕಾದಲ್ಲಿ ಇದು ಕಂಡುಬರುತ್ತದೆ. ಬಸವನಪಾದವೊಂದನ್ನು ಕೂಸುಮರಿ ಮಾಡಿಕೊಂಡು ತಿರುಗುತ್ತಿರುವ ಏಡಿಯಂತೆ ಕಾಣುವ ಇದರ ನಾಲ್ಕು ಮುಂಗಾಲುಗಳು ಮತ್ತು ನಡುವಣ ಎರಡು ತೀಕ್ಷ್ಣ ಹಲ್ಲುಗಳು ನೋಡಲು ಭಯಹುಟ್ಟಿಸುತ್ತವೆ.

Comments are closed.