ಕನ್ನಡ ವಾರ್ತೆಗಳು

ಆರೋಪ ಸಾಬೀತಾದರೆ ರಾಜಕೀಯ ಸನ್ಯಾಸ : ಆರೋಗ್ಯ ಸಚಿವ ಯು.ಟಿ.ಖಾದರ್

Pinterest LinkedIn Tumblr

Khader_Press_Meet_3

ಮಂಗಳೂರು, ಮೇ 23 : ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್‍ಎಚ್‍ಎಂ)ದ ಅಡಿ ಬಡವರಿಗೆ ಉಚಿತ ಔಷಧ ಮತ್ತು ಚಿಕಿತ್ಸೆಗೆ ಕೇಂದ್ರ ಬಿಡುಗಡೆ ಮಾಡಿದ್ದ ಅನುದಾನ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಯಲಿ. ನಾನು ತನಿಖೆಗೆ ಸಿದ್ದನಿದ್ದೇನೆ ತನಿಖೆ ನಡೆದು ಈ ಅನುದಾನ ದುರ್ಬಳಕೆಯಲ್ಲಿ ನನ್ನ ಪಾತ್ರ ಸಾಬೀತಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅವ್ಯವಹಾರದ ಆರೋಪ ಬಂದ ಕೂಡಲೆ ಈ ಬಗ್ಗೆ ಪ್ರಾಥಮಿಕ ವರದಿಯನ್ನು ತರಿಸಿಕೊಂಡು ಪರೀಶೀಲಿಸಿದ್ದೇನೆ. ಅದರಲ್ಲಿ ಯಾವುದೆ ಅವ್ಯವಹಾರವಾಗಿರುವುದು ಕಂಡುಬರುವುದಿಲ್ಲ. ಆರೋಪ ಮಾಡಿರುವವರು ಮಾಹಿತಿ ಕೊರತೆಯಿಂದ ಆರೋಪ ಮಾಡಿದ್ದಾರೆ. ಬಿಬಿಎಂಪಿ ಪಾಲಿಕೆ ಮಾಜಿ ಸದಸ್ಯ ಎನ್.ಆರ್.ರಮೇಶ್ ಅವರು ಪ್ರಚಾರಕ್ಕಾಗಿ, ಇಲಾಖೆಗೆ ಕಪ್ಪು ಚುಕ್ಕೆ ತರಲು ನಿರಾಧಾರ ಆರೋಪ ಮಾಡಿದ್ದು ಅವರ ವಿರುದ್ದ ಮಾನನಷ್ಟ ಮೊಕದ್ದಮ್ಮೆ ಹೂಡಲು ಚಿಂತಿಸಲಾಗುತ್ತಿದೆ ಎಂದು ಹೇಳಿದರು.

Khader_Press_Meet_2

ಔಷಧಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರ ಸಂಶಯವನ್ನು ನಿವಾರಿಸಲು ಸಾರ್ವಜನಿಕರು ಆರೋಗ್ಯ ಕೇಂದ್ರಗಳಲ್ಲಿ ನೀಡಲಾದ ಔಷಧಿಯ ಬಗ್ಗೆ ಅನುಮಾನಗಳಿದ್ದರೆ 104 ನಂಬರಿಗೆ ಕರೆ ಮಾಡಿ ದೂರು ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದರು.

Khader_Press_Meet_4

ಎತ್ತಿನಹೊಳೆ ಯೋಜನೆಯ ಸದನದಲ್ಲಿ ಮಂಜೂರಾಗಿರುವುದರಿಂದ ಇನ್ನು ಯಾವ ಮುಖ್ಯಮಂತ್ರಿ, ಯಾವ ಸರ್ಕಾರ ಬಂದರೂ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಅದರ ವಿರುದ್ದ ಹೋರಾಟ ಮಾಡುವವರು ಪಶ್ಚಿಮವಾಹಿನಿ ಯೋಜನೆ ಜಾರಿಗೆ ಧ್ವನಿಯೆತ್ತಬೇಕಾದ ಅವಶ್ಯಕತೆಯಿದೆ. ಪಶ್ಚಿಮವಾಹಿನಿ ಯೋಜನೆ ಜಾರಿ ಬಗ್ಗೆ ನಾನು ಈಗಾಗಲೆ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದು ಇದಕ್ಕಾಗಿ 800 ಕೋಟಿ ರೂಗಳ ಯೋಜನೆಯನ್ನು ರೂಪಿಸಲಾಗಿದೆ ಎಂದು ಸಚಿವರು ಹೇಳಿದರು.

ಕಾಂಗ್ರೆಸ್ ಮುಖಂಡರುಗಳಾದ ಚಂದ್ರಹಾಸ ಕರ್ಕೆರಾ, ಮೊಹಮ್ಮದ್ ಮೋನು, ಮೆಲ್ವಿನ್, ಸಂತೋಷ್ ಶೆಟ್ಟಿ ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Comments are closed.