ಲಕ್ನೋ,ಮೇ .24 : ಹಲವು ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಸ್ವಘೋಷಿತ ದೇವಮಾನವ ಬಾಬಾ ಪರಮಾನಂದರನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಲೈಂಗಿಕ ಹಗರಣ ಬೆಳಕಿಗೆ ಬಂದಿತ್ತು. ಆಗಿನಿಂದ ಬಾಬಾ ಪರಾರಿಯಾಗಿದ್ದರು. ಇದೀಗ, ಮಧ್ಯಪ್ರದೇಶದ ಸತ್ನಾದಲ್ಲಿ ಬಾಬಾರನ್ನು ಬಂಧಿಸುವಲ್ಲಿ ಉ.ಪ್ರ. ಪೊಲೀಸರು ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ?
ಬಾಬಾ ಪರಮಾನಂದರ ನಿಜನಾಮಧೇಯ ರಾಮಶಂಕರ್ ತಿವಾರಿ. ಇವರು ಲಕ್ನೋದ ಬಾರಾಬಂಕಿಯಲ್ಲಿ ಆಶ್ರಮ ಕಟ್ಟಿಕೊಂಡಿದ್ದಾರೆ. ಮಕ್ಕಳಾಗದ ಹೆಂಗಸರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅವರ ಲೈಂಗಿಕ ಶೋಷಣೆ ಮಾಡುತ್ತಾರೆಂಬ ಆರೋಪವಿದೆ. ಈ ವಿಚಾರದಲ್ಲಿ ಎಫ್’ಐರ್ ಕೂಡ ದಾಖಲಾಗಿತ್ತು. ಈ ಸಂಬಂಧ ಈತನ ಆಶ್ರಮದ ಮೇಲೆ ಪೊಲೀಸರು ದಾಳಿ ನಡೆಸಿದಾಗ ಹಲವು ಮಹಿಳೆಯರ ಅಸಭ್ಯ ವಿಡಿಯೋಗಳು, ಅಶ್ಲೀಲ ಸಾಹಿತ್ಯ, ಪೋರ್ನ್ ಸಿನಿಮಾ ಸಿಡಿಗಳು ಮೊದಲಾದವು ಸಿಕ್ಕಿದ್ದವು. ಆದರೆ, ಬಾಬಾ ಪರಮಾನಂದ ಮಾತ್ರ ಪರಾರಿಯಾಗಿದ್ದರು.
Comments are closed.