ದುಬೈ: ಅಮೆರಿಕಾ ಅಧ್ಯಕ್ಷ ಪದವಿಯಿಂದ ನಿರ್ಗಮಿಸಲಿರುವ ಬರಾಕ್ ಒಬಾಮಗೆ ದುಬೈಯ ವಕೀಲರೊಬ್ಬರು ನೌಕರಿ ನೀಡುವುದಾಗಿ ಆಹ್ವಾನ ನೀಡಿದ್ದಾರೆ.
ಶ್ವೇತ ಭವನದಿಂದ ನಿರ್ಗಮಿಸಿದ ಬಳಿಕ ಒಬಾಮ ನನ್ನ ಆಫೀಸಿನಲ್ಲಿ ನೌಕರಿಗೆ ಸೇರುವುದಾದರೆ ವಿಮಾನ ಟಿಕೆಟ್ನ ಹಣ ನೀಡಲು ಕೂಡ ತಯಾರಿದ್ದೇನೆ ಎಂದು ವಕೀಲ ಐಸಾಬಿನ್ ಹೈದರ್ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ.
ಇಸ್ಲಾಮ್ ಧರ್ಮದಲ್ಲಿ ಸಹಿಷ್ಣುತೆ ಎಂದರೇನೆಂದು ಹತ್ತಿರದಿಂದ ನೋಡಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಒಬಾಮಗೆ ಈ ಆಫರ್ ನೀಡಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.
ಅರಬ್ ದೇಶಕ್ಕೆ ಬಂದು ಇಲ್ಲಿನ ಜನರ ಜತೆಗೆ ಬೆರೆತರೆ ಮಾತ್ರ ಇಸ್ಲಾಮ್ ಎಷ್ಟು ಸಹಿಷ್ಣು ಧರ್ಮ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಅಮೆರಿಕ ಮತ್ತು ಪಾಶ್ಚಾತ್ಯ ಮಾಧ್ಯಮಗಳು ನಿರಂತರವಾಗಿ ಇಸ್ಲಾಮನ್ನು ಉಗ್ರರ ಧರ್ಮ ಮತ್ತು ಮುಸ್ಲಿಮರನ್ನು ಉಗ್ರರೆಂದು ವರ್ಗೀಕರಿಸಿ ತಪ್ಪು ಗ್ರಹಿಕೆ ಸೃಷ್ಟಿಸಿವೆ. ಇದು ಸುಳ್ಳು ಎಂದು ಸಾಬೀತುಪಡಿಸಲು ಒಬಾಮಾ ಅವರನ್ನು ಆಹ್ವಾನಿಸಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
Comments are closed.