ಗಲ್ಫ್

ಅಬುಧಾಬಿ ಕರ್ನಾಟಕ ಸಂಘದ ಆದ್ಧೂರಿ ರಾಜ್ಯೋತ್ಸವ ಸಮಾರಂಭ; ಡಾ|. ಬಿ. ಆರ್.ಶೆಟ್ಟಿಯವರಿಂದ ಉದ್ಘಾಟನೆ: ಗಣೇಶ್ ರೈಯವರಿಗೆ ದ. ರಾ. ಬೇಂದ್ರೆ ಪ್ರಶಸ್ತಿ ಪ್ರದಾನ

Pinterest LinkedIn Tumblr

abudhabi-kar-sangha-2016-nov-4-001

Photo: Ashok Belman
ಅಬುಧಾಬಿ: ಅಬುಧಾಬಿಯಲ್ಲಿರುವ ಇಂಡಿಯಾ ಸೋಶಿಯಲ್ ಸೆಂಟರ್ ಆಶ್ರಯದಲ್ಲಿ ನಡೆಸಲಾಗುವ ಪ್ರಾದೇಶಿಕ ಸಮಾರಂಭ 61ನೇ ಕರ್ನಾಟಕ ರಾಜ್ಯೋತ್ಸವ ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. 2016 ನವೆಂಬರ್ 4ನೇ ತಾರೀಕು ಶುಕ್ರವಾರ ಬೆಳಿಗ್ಗೆ 10.30ಕ್ಕೆ ಅಬುಧಾಬಿಯಲ್ಲಿರುವ ಇಂಡಿಯಾ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ಸರ್ವರ ಮನಸೆಳೆಯಿತು.

abudhabi-kar-sangha-2016-nov-4-023

ಶ್ರೀಮತಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ
ಸಮಾರಂಭದ ಉದ್ಘಾಟನೆಯನ್ನು ಯು.ಎ.ಇ. ಕನ್ನಡಿಗರ ಮಹಾಪೋಷಕರಾದ ಶ್ರೀಮತಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರು ಇಂಡಿಯಾ ಸೋಶಿಯಲ್ ಸೆಂಟರ್ ನ ಉಪಾಧ್ಯಕ್ಷರು ಶ್ರೀ ರಾಜನ್ ಜಕಾರಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ ಜಾನ್ ವೇಗಸ್ ರವರ ಸಮುಖದಲ್ಲಿ ಉದ್ಘಾಟಿಸಿದರು. ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಉಪಸ್ತಿತರಿದ್ದರು. ಸರ್ವರನ್ನು ಶ್ರೀ ಮನೋಹರ್ ತೋನ್ಸೆಯವರು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

abudhabi-kar-sangha-2016-nov-4-016

abudhabi-kar-sangha-2016-nov-4-021

abudhabi-kar-sangha-2016-nov-4-022

ಶ್ರೀಮತಿ ದಿವ್ಯಾಶರ್ಮಾ ತಂಡದವರಿಂದ ಪ್ರಾರ್ಥನೆ, ಮತ್ತು ಮಹಿಳಾ ಸದಸ್ಯರ ತಂಡದಿಂದ ನಾಡಗೀತೆ, ವಿಧೂಷಿ ರೋಹಿಣಿ ಅನಂತ್ ನಿರ್ದೇಶನದಲ್ಲಿ ಮಕ್ಕಳ ತಂಡದ ಸ್ವಾಗತ ನೃತ್ಯ ಹಾಗೂ ಕರ್ನಾಟಕ ನವೋಲ್ಲಸ ರೂಪಕ, ವಿಧೂಷಿ ಸ್ವಪ್ನಾ ಕಿರಣ್ ನಿರ್ದೇಶನದಲ್ಲಿ ಮಕ್ಕಳ ತಂಡದ ಶಿವತಾಂಡವ ನೃತ್ಯ ಮತ್ತು ಸಂಗೀತನಾದದೊಂದಿಗೆ ಜಾನಪದ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಕರ್ನಾಟಕದ ಉಡುಗೆ ತೊಡುಗೆಯ ಆಕರ್ಷಕ ಪ್ರದರ್ಶನ ಶ್ರೀಮತಿ ವೀಣಾ ಮಲ್ಯರವರ ನಿರ್ದೇಶನದಲ್ಲಿ ಪ್ರದರ್ಶನವಾಗಿ ಸರ್ವರ ಮನಸೆಳೆಯಿತು. ಊರಿನಿನಿಂದ ಆಗಮಿಸಿದ ಹಿರಿಯ ಕಲಾವಿದ ವಿಧಾನ್ ಸಿ. ನಾವಡರವರ ತಂಡದ ಅದ್ಭುತ ಪ್ರದರ್ಶನ “ಕಂಸ ವಧೆ” ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.

abudhabi-kar-sangha-2016-nov-4-002

abudhabi-kar-sangha-2016-nov-4-003

abudhabi-kar-sangha-2016-nov-4-004

abudhabi-kar-sangha-2016-nov-4-005

abudhabi-kar-sangha-2016-nov-4-006

abudhabi-kar-sangha-2016-nov-4-007

abudhabi-kar-sangha-2016-nov-4-008

abudhabi-kar-sangha-2016-nov-4-010

abudhabi-kar-sangha-2016-nov-4-013

abudhabi-kar-sangha-2016-nov-4-019

ಪ್ರತಿಷ್ಠಿತ ದ. ರಾ. ಬೇಂದ್ರೆ ಪ್ರಶಸ್ತಿ ಶ್ರೀ ಬಿ. ಕೆ. ಗಣೇಶ್ ರೈಯವರಿಗೆ ಪ್ರದಾನ
ಅಬುಧಾಬಿ ಕರ್ನಾಟಕ ಸಂಘ ಪ್ರತಿವರ್ಷ ರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುತಿರುವ ಪ್ರತಿಷ್ಠಿತ ದ. ರಾ. ಬೇಂದ್ರೆ ಪ್ರಶಸ್ತಿಯನ್ನು ಯು.ಎ.ಇ.ಯಲ್ಲಿ ಕಳೆದ ಎರಡು ದಶಕಗಳಿಂದ ಕನ್ನಡ ಭಾಷೆ, ಕಲೆ, ಸಂಸ್ಕೃತಿ ಮತ್ತು ಸಮಾಜಸೇವೆಯಲ್ಲಿ ಮಾಡಿರುವ ಸಾಧನೆಗೆ ಕ್ರಿಯಾತ್ಮಕ ಕಲಾ ನಿರ್ದೇಶಕರಾದ ಶ್ರೀ ಬಿ. ಕೆ. ಗಣೇಶ್ ರೈಯವರಿಗೆ ಸರ್ವ ಸದಸ್ಯರು ಹಾಗೂ ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಶ್ರೀಮತಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರು ಪ್ರದಾನಿಸಿದರು.

ಸಮಾರಂಭಕ್ಕೆ ಬೆಂಬಲ ಪ್ರೋತ್ಸಾಹ, ಸಹಕಾರ ನೀಡಿದ ಪ್ರಾಯೋಜಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

abudhabi-kar-sangha-2016-nov-4-011

abudhabi-kar-sangha-2016-nov-4-012

abudhabi-kar-sangha-2016-nov-4-014

abudhabi-kar-sangha-2016-nov-4-015

abudhabi-kar-sangha-2016-nov-4-017

abudhabi-kar-sangha-2016-nov-4-018

abudhabi-kar-sangha-2016-nov-4-020

abudhabi-kar-sangha-2016-nov-4-024

abudhabi-kar-sangha-2016-nov-4-025

abudhabi-kar-sangha-2016-nov-4-026

abudhabi-kar-sangha-2016-nov-4-027

abudhabi-kar-sangha-2016-nov-4-028

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಯು.ಎ.ಇ. ಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ, ಕ್ರೀಡಾ ಕ್ಷೇತ್ರದಲ್ಲಿ ಹಾಗೂ ಇನ್ನಿತರ ವಿಭಾಗಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಅವರ ಮಾತಾಪಿತರ ಸಮ್ಮುಖದಲ್ಲಿ ಪದಕ ನೀಡಿ ಶ್ರೀಮತಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರು ಗೌರವಿಸಿದರು.

abudhabi-kar-sangha-2016-nov-4-029

abudhabi-kar-sangha-2016-nov-4-030

abudhabi-kar-sangha-2016-nov-4-031

abudhabi-kar-sangha-2016-nov-4-032

abudhabi-kar-sangha-2016-nov-4-033

abudhabi-kar-sangha-2016-nov-4-034

abudhabi-kar-sangha-2016-nov-4-035

abudhabi-kar-sangha-2016-nov-4-036

abudhabi-kar-sangha-2016-nov-4-037

abudhabi-kar-sangha-2016-nov-4-038

abudhabi-kar-sangha-2016-nov-4-039

abudhabi-kar-sangha-2016-nov-4-040

ಮೃದುವಾಣಿ ತಂಡದವರಿಂದ ಕೋಲಾಟ ಮತ್ತು ಹನಿಗವನ ವಾಚನ ನಡೆಯಿತು. ಕವಿಗಳಾದ ಇರ್ಷಾದ್ ಮೂಡಬಿದರಿ, ಪ್ರಕಾಶ್ ರಾವ್ ಪಯ್ಯಾರು, ಗೋಪಿನಾಥ್ ರಾವ್, ಅರ್ಶದ್ ಹುಸ್ಸೈನ್, ಅವನೀಶ ಭಟ್, ಸತೀಶ್ ಕುಲಾಲ್ ಮತ್ತು ಆರತಿ ಘಟಿಕ್ಕಾರ್ ಭಾಗವಹಿಸಿದ್ದರು.

ಮನಗೆದ್ದ ಯು.ಎ.ಇ. ಮಟ್ಟದ ವಿವಿಧ ತಂಡಗಳ ಸಮೂಹ ಗೀತಾಗಾಯನ ಸ್ಪರ್ಧೆ
ಹಲವಾರು ವರ್ಷಗಳಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿಕೊಂಡು ಬರುತ್ತಿದ್ದ ಅಬುಧಾಬಿ ಕರ್ನಾಟಕ ಸಂಘ ಈ ಬಾರಿ ಯು.ಎ.ಇ. ಮಟ್ಟದ ವಿವಿಧ ತಂಡಗಳ ಸಮೂಹ ಗೀತಾಗಾಯನ ಸ್ಪರ್ಧೆಯನ್ನು ಏರ್ಪಡಿಸಿದ್ದು ಯು.ಎ.ಇ. ಯ ವಿವಿಧ ಭಾಗಗಳಿಂದ ಒಂಬತ್ತು ತಂಡಗಳು ಭಾಗವಹಿಸಿದ್ದು ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.

abudhabi-kar-sangha-2016-nov-4-041

abudhabi-kar-sangha-2016-nov-4-042

abudhabi-kar-sangha-2016-nov-4-043

abudhabi-kar-sangha-2016-nov-4-044

abudhabi-kar-sangha-2016-nov-4-045

abudhabi-kar-sangha-2016-nov-4-046

abudhabi-kar-sangha-2016-nov-4-047

abudhabi-kar-sangha-2016-nov-4-048

abudhabi-kar-sangha-2016-nov-4-049

abudhabi-kar-sangha-2016-nov-4-050

abudhabi-kar-sangha-2016-nov-4-051

abudhabi-kar-sangha-2016-nov-4-052

abudhabi-kar-sangha-2016-nov-4-053

abudhabi-kar-sangha-2016-nov-4-054

abudhabi-kar-sangha-2016-nov-4-055

abudhabi-kar-sangha-2016-nov-4-056

ಪ್ರಥಮ ಸ್ಥಾನ : ದ. ರಾ. ಬೇಂದ್ರೆ ತಂಡ – ಶ್ರೀಮತಿ ಸಂಗೀತಾ ಶೆಟ್ಟಿಯರ ತಂದ ದುಬಾಯಿ
ದ್ವಿತೀಯ ಸ್ಥಾನ : ಮಾಸ್ತಿ ತಂಡ – ಅಬುಧಾಬಿ ಕರ್ನಾಟಕ ಸಂಘ ತಂಡ 2, ಶ್ರೀ ಪ್ರಶಾಂತ್ ಶೆಣೈಯವರ ತಂಡ
ತೃತಿಯ ಸ್ಥಾನ : ಕಾರಂತ ತಂಡ – ಅಬುಧಾಬಿ ಕರ್ನಾಟಕ ಸಂಘ ತಂಡ 1, ಶ್ರೀಮತಿ ದಿವ್ಯಾ ಶರ್ಮಾ ರವರ ತಂಡ

ತೀರ್ಪುಗಾರರಾಗಿ ಶ್ರೀ ಸುಧಾಕರ್ ಪೇಜಾವರ, ಶ್ರೀಮತಿ ವಿಜಯಾ ಭಟ್, ಶ್ರೀ ರವಿರಾಜ್ ತಂತ್ರಿ ಕಾರ್ಯನಿರ್ವಹಿಸಿದ್ದರು.

abudhabi-kar-sangha-2016-nov-4-057

abudhabi-kar-sangha-2016-nov-4-058

abudhabi-kar-sangha-2016-nov-4-059

abudhabi-kar-sangha-2016-nov-4-060

abudhabi-kar-sangha-2016-nov-4-061

abudhabi-kar-sangha-2016-nov-4-062

abudhabi-kar-sangha-2016-nov-4-063

abudhabi-kar-sangha-2016-nov-4-064

abudhabi-kar-sangha-2016-nov-4-065

abudhabi-kar-sangha-2016-nov-4-066

abudhabi-kar-sangha-2016-nov-4-067

abudhabi-kar-sangha-2016-nov-4-068

abudhabi-kar-sangha-2016-nov-4-069

abudhabi-kar-sangha-2016-nov-4-070

abudhabi-kar-sangha-2016-nov-4-071

abudhabi-kar-sangha-2016-nov-4-072

ಅದೃಷ್ಟ ಚೀಟಿ ಡ್ರಾ ಜೆಟ್ ಏರ್ ವೇಸ್ ನ ಶ್ರೀ ಕಾರ್ತಿಕ್ ರಾಮಲಿಂಗಮ್ , ಶ್ರೀ ಜಯರಾಮ್ ರೈ, ಶ್ರೀ ಶೇಖರ್ ಶೆಟ್ಟಿಯವರ ಸಮ್ಮುಖದಲ್ಲಿ ನಡೆಯಿತು.

ಬೆಳಗಿನಿಂದ ಸಂಜೆಯವರೆಗೆ ಅತ್ಯಂತ ಅಕರ್ಷಕ ಕಾರ್ಯಕ್ರಮ ವಿರೂಪಣೆಯನ್ನು ಊರಿನಿಂದ ಆಗಮಿಸಿದ್ದ ಶ್ರೀ ಅವನೀಶ್ ರವರು ನಡೆಸಿಕೊಟ್ಟರು. ಕೊನೆಯಲ್ಲಿ ಶ್ರೀ ಸರ್ವೋತ್ತಮ ಶೆಟ್ಟಿಯವರು ಸ್ಮರಣಿಕೆ ನೀಡಿ ಗೌರವಿಸಿದರು.

ಅಬುಧಾಬಿ ಕರ್ನಾಟಕ ಸಂಘದ ಅದ್ಧೂರಿ ರಾಜ್ಯೋತ್ಸವ ಸಮಾರಂಭವನ್ನು ಸರ್ವರಿಗೂ ವಂದನೆಗಳನ್ನು ಅರ್ಪಿಸುವುದರ ಮೂಲಕ ಮುಕ್ತಾಯಗೊಳಿಸಲಾಯಿತು.

Comments are closed.