ದುಬೈ: ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಅನುಭವಿಸುತ್ತಿರುವ ನೋವು, ಕಣ್ಣೀರು ಬಗ್ಗೆ ನಾವು ಚಿಂತನೆ ನಡೆಸಬೇಕು. ಅವರು ಅಷ್ಟೊಂದು ನೋವಿನಿಂದ ಜೀವನ ನಡೆಸಲು ಮೂಲ ಕಾರಣ ಅವರಿಗೆ ಅಲ್ಲಾಹನ ಮೇಲಿರುವ ಭಯ ಮಾತ್ರವಾಗಿದೆ. ಅವರ ಕಣ್ಣೀರನ್ನು ಒರಸುವ ಕೆಲಸ ನಾವು ಮಾಡಬೇಕು. ಅವರು ಅಷ್ಟೊಂದು ನೋವಿನಿಂದ ಜೀವನ ನಡೆಸಲು ಮೂಲ ಕಾರಣ ಅವರಿಗೆ ಅಲ್ಲಾಹನ ಮೇಲಿರುವ ಭಯ ಮಾತ್ರವಾಗಿದೆ ಆದ್ದರಿಂದ ಮರಣವನ್ನು ನೆನೆದು ಸತ್ಕರ್ಮದಿಂದ ಜೀವನ ನಡೆಸಿ ಎಂದು ಕುಂಬೋಳ್ ಅಹ್ಮದ್ ಮುಖ್ತರ್ ತಂಙಳ್ ಹೇಳಿದರು. ಅವರು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯುಎಇ ಸಮಿತಿಯೂ ದುಬೈಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಮೀಲಾದ್ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇಸ್ಲಾಂ ಚರಿತ್ರೆಯಲ್ಲಿ ವ್ಯಕ್ತವಾಗಿರುವ ಮಹಾ ಪಂಡಿತರೋರ್ವರು ಸೂಚಿಸಿರುವ ನಾಲ್ಕು ವಿಷಯದಲ್ಲಿ ಗಟ್ಟಿಯಾದ ನಿಲುವು ನಿಮ್ಮಲ್ಲಿ ಸದಾ ಇರಬೇಕು. ಅವುಗಳಲ್ಲಿ ಒಂದನೇಯದ್ದು ನಮಗೆ ದೈನಂದಿನ ಜೀವನದಲ್ಲಿ ಸದಾ ಯಶಸ್ವೀ ನೀಡುವವನು ಅಲ್ಲಾಹನು ಎಂಬ ದೃಢ ವಿಶ್ವಾಸವಿರಬೇಕು. ಎರಡು ಸ್ವತಃ ಸತ್ಕರ್ಮಗಳನ್ನು ಮಾಡಿದರೆ ಮಾತ್ರ ಅಲ್ಲಾಹನಿಂದ ಪ್ರತಿಫಲ ಸಿಗಲು ಸಾಧ್ಯ ಎಂದು ಅರ್ಥೈಸಿಕೊಳ್ಳಬೇಕು. ಮೂರು ನನ್ನ ಮೇಲೆ ಯಾವಾಗಲೂ ಅಲ್ಲಾಹನ ನೋಟ ಇದ್ದೇ ಇರುತ್ತದೆ ಎಂದು ತಿಳಿದಿರಬೇಕು. ನಾಲ್ಕು ಮರಣ ಎಂಬುವುದು ನಮ್ಮನ್ನು ಯಾವಾಗಲೂ ಹಿಂಬಾಲಿಸುತ್ತ ಇರುತ್ತದೆ ಎಂದು ನೆನಪಿರಬೇಕು. ಈ ನಾಲ್ಕು ಪ್ರಮುಖ ಕಾರ್ಯಗಳನ್ನು ಬಹಳ ಗೌರವದಿಂದ ನೀವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕೆ.ಎಚ್ ಅಹ್ಮದ್ ಫೈಝಿ ಕಕ್ಕಿಂಜೆ ಅವರು ಕಾರ್ಯಕ್ರಮ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಡಿ.ಕೆ.ಎಸ್.ಸಿ ಯುಎಇ ಸಮಿತಿ ಸಲಹೆಗಾರ ಇಬ್ರಾಹಿಂ ಸಖಾಫಿ ಕೆದುಂಬಾಡಿ ಅವರು ಮುಖ್ಯ ಭಾಷಣದಲ್ಲಿ ಮಾತನಾಡುತ್ತ ಇಸ್ಲಾಂ ಉದಯ ಕಾಲದಲ್ಲಿದ್ದ ಮುಹಮ್ಮದ್ ಪೈಗಂಬರರ ಅತ್ಯಂತ ಶ್ರೇಷ್ಠ ಅನುಯಾಯಿಗಳು ಪೈಗಂಬರರ ಮೇಲೆ ಅಪಾರವಾದ ಪ್ರೀತಿ ಗೌರವ ಹೊಂದಿದ್ದ ಬಗ್ಗೆ ಖುರ್-ಆನ್ ನಲ್ಲಿ ಉಲ್ಲೇಖಿಸಿರುವ ಹಲವು ನಿದರ್ಶನಗಳನ್ನು ವಿವರಿಸಿದರು. ನಮ್ಮಲ್ಲಿ ಮುಹಮ್ಮದ್ ಪೈಗಂಬರ ಮೇಲಿನ ಪ್ರೀತಿ ನರ ನಾಡಿಗಳಲ್ಲಿ ಆಳವಾಗಿ ಬೇರೂರಿರಬೇಕು ಅವರು ಇಡೀ ಪ್ರಪಂಚಕ್ಕೆ ಅನುಗ್ರಹಿ ಎಂದರು.
ಪೈಗಂಬರರು ಜೀವಿತ ಕಾಲದಲ್ಲೂ ಹಾಗೂ ಮರಣ ನಂತರವೂ ಅನುಯಾಯಿಗಳಿಗೆ ಕರುಣೆ ತೋರಿಸಿದವರು ಆದ್ದರಿಂದ ಅವರ ಜೀವನ ಚರಿತ್ರೆಯ ಬಗ್ಗೆ ಕೊಂಡಾಡಲು ನಾವು ಹಿಂಜರಿಯಬಾರದು ಎಂದರು. ನಮ್ಮ ಬಳಿ ಈಗ ಇರುವುದು ಅವರ ಜನ್ಮ ದಿನಾಚರಣೆಯನ್ನು ಆಚರಿಸುವ ಅವಕಾಶವಾಗಿದೆ, ಅಂತಹ ಕಾರ್ಯಕ್ರಮಗಳಿಂದ ಯಾರು ವಂಚಿತರಾಗಬೇಡಿ. ಆದ್ದರಿಂದ ಅಲ್ಲಾಹನು ತೃಪ್ತಿ ಪಡುವ ಪ್ರತಿಜ್ಞೆಯೊಂದಿಗೆ ಜೀವನ ನಡೆಸಿದರೆ ಪರ ಲೋಕದ ಜೀವನ ಪ್ರಾಪ್ತಿಯಾಗುವುದರಲ್ಲಿ ಸಂಶಯಬೇಡ ಎಂದು ಇಬ್ರಾಹಿಂ ಸಖಾಫಿ ಕೆದುಂಬಾಡಿ ಅವರು ಹೇಳಿದರು.
ಪೈಗಂಬರರು ಜೀವಿತ ಕಾಲದಲ್ಲೂ ಹಾಗೂ ಮರಣ ನಂತರವೂ ಅನುಯಾಯಿಗಳಿಗೆ ಕರುಣೆ ತೋರಿಸಿದವರು ಆದ್ದರಿಂದ ಅವರ ಜೀವನ ಚರಿತ್ರೆಯ ಬಗ್ಗೆ ಕೊಂಡಾಡಲು ನಾವು ಹಿಂಜರಿಯಬಾರದು ಎಂದರು. ನಮ್ಮ ಬಳಿ ಈಗ ಇರುವುದು ಅವರ ಜನ್ಮ ದಿನಾಚರಣೆಯನ್ನು ಆಚರಿಸುವ ಅವಕಾಶವಾಗಿದೆ, ಅಂತಹ ಕಾರ್ಯಕ್ರಮಗಳಿಂದ ಯಾರು ವಂಚಿತರಾಗಬೇಡಿ. ಆದ್ದರಿಂದ ಅಲ್ಲಾಹನು ತೃಪ್ತಿ ಪಡುವ ಪ್ರತಿಜ್ಞೆಯೊಂದಿಗೆ ಜೀವನ ನಡೆಸಿದರೆ ಪರ ಲೋಕದ ಜೀವನ ಪ್ರಾಪ್ತಿಯಾಗುವುದರಲ್ಲಿ ಸಂಶಯಬೇಡ ಎಂದು ಇಬ್ರಾಹಿಂ ಸಖಾಫಿ ಕೆದುಂಬಾಡಿ ಅವರು ಹೇಳಿದರು.
ಗ್ರಾಂಡ್ ಕರಾವಳಿ ಫ್ಯಾಮಿಲಿ ಮುಲಾಕಾತ್ ಸಂಚಾಲಕ ಎಸ್. ಯೂಸುಫ್ 2017 ಜನವರಿ 1 ರಂದು ನಡೆಯುವ ಗ್ರಾಂಡ್ ಕರಾವಳಿ ಫ್ಯಾಮಿಲಿ ಮುಲಾಕಾತ್ ಇದರ ಕಾರ್ಯಕ್ರಮದ ವಿವರಣೆಯನ್ನು ನೀಡುವುದರೊಂದಿಗೆ ಯಶಸ್ವಿಗೆ ಸಹಕರಿಸುವಂತೆ ವಿನಂತಿಸಿದರು.
ಅತಿಥಿಗಳಾಗಿ ಆಗಮಿಸಿದ ಕುಂಬೋಳ್ ಅಹ್ಮದ್ ಮುಖ್ತರ್ ತಂಙಳ್ ರವರನ್ನು ಡಿ.ಕೆ.ಎಸ್.ಸಿ ಉಪಾಧ್ಯಕ್ಷರಾದ ಎಂ.ಇ ಮೂಳೂರು, ಮಿಲಾದ್ ಸಮಿತಿ ಛೇರ್ಮನ್ ಶಕೂರು ಮನಿಲಾ, ಇ.ಕೆ.ಇಬ್ರಾಹಿಂ ಕಿನ್ಯ ರವರು ಶಾಲುಹೊದಿಸಿ ಡಿ.ಕೆ.ಎಸ್.ಸಿ ಯುಎಇ ಸಮಿತಿ ಸಲಹೆಗಾರರಾದ ಮೊಯ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ, ಡಿ.ಕೆ.ಎಸ್.ಸಿ ಯುಎಇ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಣ್ಣಂಗಾರ್ , ಪ್ಯಾಮಲಿ ಮುಲಾಖತ್ ಛೇರ್ಮನ್ ಅಬ್ದುಲ್ ಲತೀಫ್ ಮುಲ್ಕಿ ಸ್ಮ್ರಣಿಕೆ ನೀಡಿ ಸನ್ಮಾನಿಸಿದರು .
ಈ ಸಂದರ್ಭದಲ್ಲಿ ಡಿ.ಕೆ.ಎಸ್.ಸಿ. ಸೆಂಟ್ರಲ್ ಕಮಿಟಿ ಹೊರತಂದ ಹಸನಾತ್ ಅನ್ನು ಡಿ.ಕೆ.ಎಸ್.ಸಿ ಶಾರ್ಜಾ ಯುನಿಟ್ ಅಧ್ಯಕ್ಷರಾದ ಬಷೀರ್ ಕಾಪಿಕ್ಕಾಡ್ , ಬಾರ್ ದುಬೈ ಯುನಿಟ್ ಅಧ್ಯಕ್ಷರಾದ ಇಸ್ಮಾಯಿಲ್ ಬಾಬಾ ಮೂಳೂರು, ಅಲ್ ಗ್ವಿಸಸ್ ಯುನಿಟ್ ಅಧ್ಯಕ್ಷರಾದ ಬದ್ರುದ್ದೀನ್ ಅರಂತೋಡು, ಮದಾಮ್ ಯುನಿಟ್ ನ ಹಾಜಿ.ಅಬ್ದುಲ್ ಖದರ್ ಉಚ್ಚಿಲ, ರಾಸ್ ಅಲ್ ಖೈಮಾ ಯುನಿಟ್ ಪ್ರಧಾನ ಕಾರ್ಯದರ್ಶಿ ಅಪ್ಜಲ್ ಮಂಗಳೂರು ರವರಿಗೆ ನೀಡುವುದರ ಮೂಲಕ ಬಿಡುಗಡೆ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಡಿ.ಕೆ.ಎಸ್.ಸಿ ಯುಎಇ ಸಮಿತಿ ಗೌರಾಧ್ಯಕ್ಷರಾದ ಸಯ್ಯದ್ ತ್ವಾಹ ಭಾಪಕಿ ತಂಙಳ್, ಸಲಹೆಗಾರರಾದ ಅಸ್ಕರ್ ಅಲಿ ತಂಙಳ್ ಕೋಲ್ಪೆ, ಮೊಯ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ, ಡಿ.ಕೆ.ಎಸ್.ಸಿ ಉಪಾಧ್ಯಕ್ಷ ಎಂ.ಇ ಮೂಳೂರು, ಡಿ.ಕೆ.ಎಸ್.ಸಿ ಯುಎಇ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಣ್ಣಂಗಾರ್, ಅಬೂಬಕ್ಕರ್ ಮುಸ್ಲಿಯಾರ್ ಕೊಡುಂಗಾಯಿ, ಬಿ.ಸಿ.ಎಫ್ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮಹಮ್ಮದ್, ಫ್ಯಾಮಿಲಿ ಮುಲಾಕಾತ್ ಛೇರ್ಮನ್ ಲತೀಫ್ ಮುಲ್ಕಿ, ಮಿಲಾದ್ ಸಮಿತಿ ಕೋಶಾಧಿಕಾರಿ ಝೈನುದ್ದೀನ್ ಬೆಳ್ಳಾರೆ ಉಮರಾ ನಾಯಕರಾದ ಹಾಜಿ ಅಶ್ರಫ್ ಅಡ್ಯಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೌಲಿದ್ ಪಾರಾಯಣವು ಅಬ್ದುಲ್ ರಹಿಮಾನ್ ಹಾಜಿ ಸೆಂಟ್ಯಾರ್, ಅಬ್ದುಲ್ಲಾ ಉಸ್ತಾದ್, ಶಾಫಿ ಸಖಾಫಿ ಅವರ ಉಸ್ತುವಾರಿಯಲ್ಲಿ ಡಿ.ಕೆ.ಎಸ್.ಸಿ ಯುಎಇ ಸಮಿತಿ ಗೌರವಾಧ್ಯಕ್ಷ ಬಾಫಾಕಿ ತಂಙಳ್, ಜ್ಞಂಡಾಡಿ ಉಸ್ತಾದ್, ಅಬೂಬಕ್ಕರ್ ಮುಸ್ಲಿಯಾರ್ ಕೊಡುಂಗಾಯಿ, ಕೆ.ಎಚ್ ಅಹ್ಮದ್ ಫೈಝಿ, ಅಬ್ದುಲ್ ಅಝೀಝ್ ಲತೀಫಿ, ಕಾಸಿಂ ಮದನಿ ಮೊದಲಾದವರ ನೇತೃತ್ವದಲ್ಲಿ ಬಹಳ ಭಕ್ತಿಪೂರ್ವಕವಾಗಿ ನಡೆಯಿತು.
ದುಃಅ ಆಶೀರ್ವಚನವನ್ನು ಅಸ್ಸಯ್ಯದ್ ಅಹ್ಮದ್ ಮುಖ್ತರ್ ತಂಙಳ್ ಕುಂಬೋಳ್ ಅವರು ನೆರವೇರಿಸಿದರು. ಬುರ್ದಾ ಆಲಾಪನೆಯನ್ನು ಕೆ.ಸಿ.ಎಫ್ ದುಬೈ ಝೋನ್ ತಂಡದವರು ನಡೆಸಿಕೊಟ್ಟರು. ಸ್ವಯಂ ಸೇವಕರಾಗಿ ಸಮದ್ ಕೊಳ್ನಾಡು ಅವರ ಉಸ್ತುವಾರಿಯಲ್ಲಿ ಡಿ.ಕೆ.ಎಸ್.ಸಿ ಅಜ್ಮಾನ್ ಯುನಿಟ್ ಸದಸ್ಯರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಶರೀಫ್ ಅರ್ಲಪದವು, ಝುಬೈರ್ ಆತೂರು, ರಫೀಕ್ ಸಂಪ್ಯ, ಕಮರುದ್ದೀನ್ ಗುರುಪುರ ಮೊದಲಾದವರು ವಾಹನ ನಿಲುಗಡೆ ವ್ಯವಸ್ಥೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಹಾಗೂ ಇ.ಕೆ ಇಬ್ರಾಹಿಂ, ಇಸ್ಮಾಯಿಲ್ ಬರೂದ್, ಹಂಝ ಮೂಳೂರು, ಇಸ್ಮಾಯಿಲ್ ಬಾಬಾ ಮೂಳೂರು, ಬದ್ರುದ್ದೀನ್ ಅರಂತೋಡು, ಅಶ್ರಫ್ ಸತ್ತಿಕಲ್, ರಹಿಮಾನ್ ಸಜಿಪ ಡಿ.ಕೆ.ಎಸ್.ಸಿ ರಾಷ್ಟೀಯ ಸಮಿತಿ ನಾಯಕರು ಹಾಗೂ ಯುನಿಟ್ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆ ಹಾಗೂ ಸ್ಥಾಪನೆಗಳ ನೇತಾರರು ಹಾಜರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಮೊದಲಾದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ್ದರು.
ಮಿಲಾದ್ ಸಮಿತಿ ಛೇರ್ಮನ್ ಶಕೂರು ಮನಿಲಾ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಿಲಾದ್ ಸಮಿತಿ ಸಂಚಾಲಕ ಸೈಫುದ್ದೀನ್ ಪಟೇಲ್ ಅರಂತೋಡು ಅವರು ಸ್ವಾಗತಿಸಿ, ಎಸ್.ಎಂ ಉಮ್ಮರ್ ಸುಳ್ಯ ಹಾಗೂ ಮಿಲಾದ್ ಸಮಿತಿ ಮಾಧ್ಯಮ ಸಂಯೋಜಕ ಕಮಾಲ್ ಅಜ್ಜಾವರ ಕಾರ್ಯಕ್ರಮ ಬಹಳ ಸುಂದರವಾಗಿ ನಿರೂಪಿಸಿದರು. ಮಿಲಾದ್ ಪ್ರಚಾರ ಸಮಿತಿ ಸಂಚಾಲಕ ನವಾಝ್ ಕೋಟೆಕಾರ್ ಧನ್ಯವಾದ ಸಲ್ಲಿಸಿದರು.
Comments are closed.