ದುಬೈ ಡಿಸೆಂಬರ್::25-ಕೆ,ಸಿ,ಎಫ್. ದುಬೈ ಸೌತ್ ಝೋನ್ ಅಧೀನದ ಹನ್ನೊಂದನೇ *”ಅಲ್ ವರ್ಕ”* ಶಾಖೆಯ ರೂಪೀಕರಣ ಸಭೆಯು ದಿನಾಂಕ 22-12-2017 ಶುಕ್ರವಾರ ರಾತ್ರಿ 10 ಗಂಟೆಗೆ ಕೆಸಿಎಫ್ ಯುಎಇ ರಾಷ್ಟ್ರೀಯ ಸಮೀತಿ ಪ್ರಧಾನ ಕಾರ್ಯದರ್ಶಿ ಜನಾಬ್\\ ಮುಹಮ್ಮದ್ ಇಕ್ಬಾಲ್ ಕಾಜೂರ್ ರವರ ನಿವಾಸದಲ್ಲಿ ಜರಗಿತು.
ಎಸ್,ವೈ,ಎಸ್ ಕರ್ನಾಟಕ ರಾಜ್ಯ ಅಧ್ಯಕ್ಷರಾದ *ಅಲ್ ಹಾಜ್, ಬಹು\\ ಜಿಎಮ್.ಮುಹಮ್ಮದ್ ಕಾಮಿಲ್ ಸಖಾಫಿ*ಯವರ ನೇತ್ರತ್ವದಲ್ಲಿ ಆಧ್ಯಾತ್ಮಿಕ ಮಜ್ಲೀಸ್ ನೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ತದನಂತರ ಸಂಘಟನಾ ಕಾರ್ಯಚರಣೆಯ ಅನಿವಾರ್ಯತೆ ಹಾಗೂ ಇದರಿಂದ ಇಹ ಪರದಲ್ಲಿ ಸಿಗುವ ಒಳಿತಿನ ಕುರಿತು ಮನಮುಟ್ಟುವಂತೆ ಸವಿಸ್ತಾರವಾಗಿ ವಿವರಿಸಿದ ಜಿ.ಎಮ್.ಮುಹಮ್ಮದ್ ಕಾಮಿಲ್ ಸಖಾಫಿ ಉಸ್ತಾದರು ಸಂಘಟನಾ ಕಾರ್ಯಚರಣೆಗೆ ತಮ್ಮಬಿಡುವಿನ ಸಮಯಗಳನ್ನು ಮೀಸಲಿಡಲು ಸುಲಭ ಮಾರ್ಗಗಳನ್ನು ತಿಳಿಸಿಕೊಟ್ಟರು.
ಕೆಸಿಎಫ್ ಅಬುಧಾಬಿ ಝೋನ್ ಅಧ್ಯಕ್ಷರಾದ ಹಸೈನಾರ್ ಅಮಾನಿ, ಕೆಸಿಎಫ್ ದುಬೈ ಸೌತ್ ಝೋನ್ ಅದ್ಯಕ್ಷರಾದ ಅಬ್ದುಲ್ ಅಝೀಝ್ ಅಹ್ಸನಿ ಇಂದ್ರಾಜೆ, ಸೌತ್ ಝೋನ್ ಶಿಕ್ಷಣ ವಿಭಾಗದ ಚೇರ್ಮೇನ್ ಶಾಹುಲ್ ಹಮೀದ್ ಸಖಾಫಿ ಶುಭ ಕೋರಿ ಮಾತನಾಡಿದರು.
“ಅಲ್ ವರ್ಕ” ಶಾಖೆಯನ್ನು ಕೆ.ಸಿ.ಎಫ್, ದುಬೈ ಸೌತ್ ಝೋನ್ ಅಧೀನದ ನೂತನ ಶಾಖೆಯಾಗಿ ಜಿ.ಎಮ್,ಉಸ್ತಾದ್ ರವರು ಘೋಷಣೆ ಮಾಡಿ ನೂತನ ಸಮೀತಿಗೆ ದಾಖಲೆ ಪುಸ್ತಕವನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಕೆಸಿಎಫ್ ದುಬೈ ಸೌತ್ ಝೋನ್ ಪದಾಧಿಕಾರಿಗಳು ಹಾಗೂ ಇತರ ಉಮರಾ ಉಲಮಾ ನೇತಾರರು ಹಾಜರಿದ್ದರು.
ಮುಹಮ್ಮದ್ ಇಕ್ಬಾಲ್ ಕಾಜೂರ್ ಸ್ವಾಗತಿಸಿ, ಅಮೀರ್ ಮೂರ್ಗೋಲಿ ವಂದನಾರ್ಪಣೆ ನಡೆಸಿ ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಅಲ್ ವರ್ಕ ಶಾಖೆಯ ನೂತನ ಸಮೀತಿ:
ಅಧ್ಯಕ್ಷರು:
ಬಹು\\ಅಶ್ರಫ್ ಸಖಾಪಿ ಕಿನ್ಯ.
ಪ್ರಧಾನ ಕಾರ್ಯದರ್ಶಿ: ಅಮೀರ್ ಮೂರ್ಗೋಲಿ.
ಕೋಶಾಧಿಕಾರಿ:
ಅಸ್ಗರ್ ನಲ್ಕ.
ಉಪಾಧ್ಯಕ್ಷರುಗಳು:
ಸಯ್ಯದ್ ಮುಖ್ತಾರ್ ತಙಳ್
ಮುಹಮ್ಮದ್ ಹನೀಫ್ ಕೊಡಗು
ಮುಹಮ್ಮದ್ ಅಬ್ದುಲ್ಲಾಹ್ ವಿದ್ಯಾನಗರ.
ಜೊತೆ ಕಾರ್ಯದರ್ಶಿಗಳು:
ಸಾಬಿರ್ ಮಠ.
ಸಿದ್ದೀಕ್ ಸುಳ್ಯ
ಸದಸ್ಯರು
ಇಕ್ಬಾಲ್ ಕಾಜೂರು
ಜೆ.ಹೆಚ್.ಅಬೂಬಕ್ಕರ್ ಕಾಜೂರು
ಇಬ್ರಾಹಿಂ ಅಳಿಕೆ
ಸಿರಾಜ್ ಅಳಿಕೆ
ಹನೀಫ್ ಎನ್ಮೂರು
ಅಬ್ದುಲ್ ರಝಾಕ್ ಈಶ್ವರಮಂಗಲ
ಕಬೀರ್ ರೆಂಜ
ಶರೀಫ್ ಬಂಡಾಡಿ
ಅಬ್ದುಲ್ ಸಮದ್ ಈಶ್ವರಮಂಗಲ
ಅಬ್ದುಲ್ ಜಬ್ಬಾರ್ ದೇಲಂಪಾಡಿ
ಅಬ್ದುಲ್ ರಹ್ಮಾನ್ ದೇಲಂಪಾಡಿ
Comments are closed.