ಮಸ್ಕತ್ (ಒಮನ್): ಕೊಲ್ಲಿ ದೇಶ ಒಮನ್‌ನಿಂದ ವಿದೇಶೀ ಕೆಲಸಗಾರರು ತಮ್ಮ ದೇಶಗಳಿಗೆ ಕಳುಹಿಸುವ ಹಣಕ್ಕೆ ಸಂಬಂಧಿಸಿ ಹೊಸ ನಿಯಮಗಳನ್ನು ತರಲಾಗಿದೆ. ಕಪ್ಪು ಹಣ ಬಿಳುಪು ದಂಧೆಯನ್ನು ತಪ್ಪಿಸುವುದಕ್ಕಾಗಿ ಭಾರೀ ಪ್ರಮಾಣದಲ್ಲಿ ಹಣಕಾಸು ವ್ಯವಹಾರಗಳನ್ನು ನಡೆಸುವ ವಿದೇಶೀಯರು ಪರಿಶೀಲನೆಗೆ ಒಳಗಾಗಲಿದ್ದಾರೆ.
‘ಎನ್‌ಹಾನ್ಸ್‌ಡ್ ಡ್ಯೂ ಡಿಲಿಜನ್ಸ್’ ಎಂಬುದಾಗಿ ಕರೆಯಲ್ಪಡುವ ನೂತನ ವ್ಯವಸ್ಥೆಯು ಮಾರ್ಚ್ 22ರಿಂದ ಜಾರಿಗೆ ಬರಲಿದೆ ಎಂದು ‘ಟೈಮ್ಸ್ ಆಫ್ ಒಮನ್’ ವರದಿ ಮಾಡಿದೆ.
ಬೃಹತ್ ಪ್ರಮಾಣದಲ್ಲಿ ಹಣದ ವ್ಯವಹಾರ ಅಥವಾ ಹಣ ವಿನಿಮಯ ನಡೆಸುವ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ನೂತನ ನಿಯಮವನ್ನು ರೂಪಿಸಲಾಗಿದೆ.
‘‘ಕಪ್ಪು ಹಣ ಬಿಳುಪು ನಿಗ್ರಹ ಕಾನೂನಿನಡಿ ಸೆಂಟ್ರಲ್ ಬ್ಯಾಂಕ್ ಆಫ್ ಒಮನ್ ಹೊರಡಿಸಿರುವ ಮಾರ್ಗದರ್ಶಿ ಸೂತ್ರಗಳ ಪ್ರಕಾರ, 400 ಒಮನಿ ರಿಯಾಲ್ (ಸುಮಾರು 67,800 ರೂಪಾಯಿ)ಗಿಂತ ಹೆಚ್ಚಿನ ಪ್ರಮಾಣದ ಹಣಕಾಸು ವ್ಯವಹಾರಗಳು ‘ಎನ್‌ಹಾನ್ಸ್‌ಡ್ ಡ್ಯೂ ಡಿಲಿಜನ್ಸ್’ ಪ್ರಕ್ರಿಯೆಗೆ ಒಳಗಾಗಬೇಕಿದೆ’’ ಎಂದು ಒಮನ್ ಯುನೈಟೆಡ್ ಎಕ್ಸ್‌ಚೇಂಜ್‌ನ ಜನರಲ್ ಮ್ಯಾನೇಜರ್ ಸೈಯದ್ ಫರಾಝ್ ಅಹ್ಮದ್ ಹೇಳುತ್ತಾರೆ.
Comments are closed.