ಅಬು ಧಾಬಿ : ವರ್ಷಂಪ್ರತಿ ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿರುವ ಮಂಗಳೂರು ಕಪ್ ನ ಆರನೇ ಸೀಸನ್ “ಮಂಗಳೂರು ಕಪ್ 2018” ಮಾರ್ಚ್ 2 ಶುಕ್ರವಾರ ಶೇಖ್ ಝಾಯಿದ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು ಇದರ ಪೂರ್ವಸಿದ್ಧತಾ ಸಭೆಯು ಅಬುಧಾಬಿಯ ಪ್ಯಾರಿಸ್ ಕಿಚೆನ್ ನಲ್ಲಿ ಇತ್ತೀಚಿಗೆ ಜರುಗಿತು.
ಸಭೆ ಯ ಅಧ್ಯಕ್ಷತೆಯನ್ನು ಸಿತಾರಾ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಮ್ ವಹಿಸಿದ್ದು, ಎಂ ಸಿಸಿ ಅಧ್ಯಕ್ಷ ಲತೀಫ್ ಕೆ ಹೆಚ್. ಸಭೆ ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯಾವಳಿಗೆ ವೇದಿಕೆ ಸಜ್ಜಾಗಿದ್ದು ಪಂದ್ಯದ ಎಲ್ಲಾ ನಿಯಮಾವಳಿಗಳು ಅಂತರಾಷ್ಟ್ರೀಯ ಕ್ರಿಕೆಟ್ ನಿಯಮಾವಳಿಗಳಿಗೆ ಬದ್ದವಾಗಿರುವುದಾಗಿ ತಿಳಿಸಿದರು.
ಪಂದ್ಯದ ವೇಳಾಪಟ್ಟಿಯನ್ನು 18 ತಂಡಗಳ ನಾಯಕರ ಸಮ್ಮುಖದಲ್ಲಿ ಚೀಟಿ ಎತ್ತುವ ಮೂಲಕ ಸಿದ್ಧಪಡಿಸಲಾಯಿತು. ಬಲಿಷ್ಠ ತಂಡಗಳ ಹಣಾಹಣಿ ನೋಡುಗರಿಗೆ ಕಣ್ಣಿಗೆ ಹಬ್ಬವನ್ನು ನೀಡಲಿದೆ.
ಪಂದ್ಯ ದ ವೇಳಾಪಟ್ಟಿ ಇಂತಿದೆ:
ಈ ಸಭೆಯಲ್ಲಿ ಪ್ಯಾರಿಸ್ ಕಿಚನ್ ನ ನಿರ್ವಾಹಕರಾದ ನೌಫಾಲ್, ಅನ್ವರ್, ಫಿರೋಜ್. ಸೇಫ್ ಲೈನ್ ನ ಶಬನಾಜ್. ಎಂಸಿಸಿ ಯ ಸಲಾಂ ಕೆ ಹೆಚ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಜಲೀಲ್ ಕಾರ್ಯಕ್ರಮ ನಿರೂಪಿಸಿದರು.
Comments are closed.