ಗಲ್ಫ್

ಅಬುಧಾಬಿ ಐ.ಎಸ್.ಸಿ. ಆಶ್ರಯದಲ್ಲಿ ಯು.ಎ.ಇ. ರಾಷ್ಟ್ರಪಿತ ಗೌ| ಶೇಕ್ ಝಾಯದ್ ಸುಲ್ತಾನ್ ಅಲ್ ನಯ್ಯಾನ್ ಜನ್ಮ ಶತಾಬ್ಧಿ ವರ್ಷಾಚರಣೆ; ಐ. ಎಸ್. ಸಿ. 51ನೇ ವಾರ್ಷಿಕೋತ್ಸವ

Pinterest LinkedIn Tumblr

ಇಂಡಿಯಾ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ (ಐ.ಎಸ್.ಸಿ.) ಅಬುಧಾಬಿಯಲ್ಲಿ 1967 ರಲ್ಲಿ ಸ್ಥಾಪನೆಯಾಗಿದೆ. ಅತ್ಯಧುನಿಕ ವಾಸ್ತುಶಿಲ್ಪದೊಂದಿಗೆ ನಿರ್ಮಾಣವಾಗಿರುವ ಭವ್ಯ ಸೌಧ ಅಬುಧಾಬಿಯ ಹೃದಯಭಾಗದಲ್ಲಿ ತಲೆ ಎತ್ತಿ ನಿಂತಿದೆ. ಐ.ಎಸ್.ಸಿ. ಯ ಸ್ಥಳ ಅಬುಧಾಬಿ ರಾಜಮನೆತನ ಶೇಖ್ ಕುಟುಂಬದ ಕೊಡುಗೆಯಾಗಿದೆ. ಐ ಎಸ್. ಸಿ. ಯಲ್ಲಿ ಎರಡು ಸಾವಿರ ಸದಸ್ಯರಿದ್ದು, ಬೃಹತ್ ಉಧ್ಯಮಿಗಳು, ವೃತ್ತಿಪರ ಗಣ್ಯರು ಆಡಳಿತ ಮಂಡಳಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

ಭಾರತೀಯ ವೈವಿಧ್ಯಮಯ ಕಲೆ ಸಂಸ್ಕೃತಿ, ಕಲಾಪ್ರಾಕಾರಗಳಿಗೆ ವೇದಿಕೆಯನ್ನು ಕಲ್ಪಿಸಲಾಗುತ್ತಿದ್ದು, ನೂರಾರು ಕಲಾ ಪ್ರತಿಭೆಗಳು ಹೊರಹೊಮ್ಮಿದ್ದು, ವಿಶ್ವದ ವಿವಿಧ ಕಡೆಗಳಿಂದ ಪ್ರಖ್ಯಾತ ಕಲಾವಿದರು ಕಾರ್ಯಕ್ರಮ ನೀಡಿರುವ ಪವಿತ್ರ ವೇದಿಕೆ ಮತ್ತು ಎರಡು ಸಾವಿರ ಪ್ರೇಕ್ಷಕರು ಆಸೀನರಾಗುವ ಹವಾನಿಯಂತ್ರಿತ ಸಭಾಂಗಣ ಮತ್ತು ಮುನ್ನೂರು ಮಂದಿ ಆಸೀನರಾಗುವ ಎರಡು ಕಿರಿಯ ಸಭಾಂಗಣಗಳು ಹೊಂದಿದೆ. ಈಜುಕೊಳ, ಜಿಮ್, ಒಳಾಂಗಣ ಕ್ರೀಡಾವ್ಯವಸ್ಥೆ, ಉಪಹಾರ ಮಂದಿರದ ವ್ಯವಸ್ಥೆ ಇದ್ದು ಐದು ಸಾವಿರಕಿಂತಲೂ ಹೆಚ್ಚು ಮಂದಿ ಸೌಲಭ್ಯ ಪಡೆಯುತಿದ್ದಾರೆ.

ಯು.ಎ.ಇ. ರಾಷ್ಟ್ರಪಿತ ಗೌ| ಶೇಕ್ ಝಾಯದ್ ಸುಲ್ತಾನ್ ಅಲ್ ನಯ್ಯಾನ್ ಜನ್ಮ ಶತಾಬ್ಧಿ ವರ್ಷಾಚರಣೆ ಹಾಗೂ ಐ. ಎಸ್. ಸಿ. 51ನೇ ವಾರ್ಷಿಕೋತ್ಸವ….

ಅರಬ್ ಸಂಯುಕ್ತ ಸಂಸ್ಥಾನದ ನವನಿರ್ಮಾಣ ಶಿಲ್ಪಿ ಸುಮಾರು ಇನ್ನೊರಕಿಂತಲೂ ಹೆಚ್ಚು ದೇಶವಾಸಿಗಳಿಗೆ ಅನಿವಾಸಿ ಉಧ್ಯೋಗಿಗಳಾಗಿ, ಉಧ್ಯಮಿಗಳಾಗಿ ನೆಲೆಸಲು ಅವಕಾಶ ಕಲ್ಪಿಸಿರುವ ಯು.ಎ.ಇ. ರಾಷ್ಟ್ರಪಿತ ಗೌ| ಶೇಕ್ ಝಾಯದ್ ಸುಲ್ತಾನ್ ಅಲ್ ನಯ್ಯಾನ್ ರವರ ಜನ್ಮಶತಾಬ್ಧಿ ವರ್ಷಾಚರಣೆಯನ್ನು ಈ ವರ್ಷ ಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲು ಹಾಗೂ ಐ. ಎಸ್. ಸಿ. 51ನೇ ವಾರ್ಷಿಕೋತ್ಸವ ಆಚರಿಸುವ ಕಾರ್ಯಯೋಜನೆಗಳ ಬಗ್ಗೆ ಐ. ಎಸ್. ಸಿ. ಗೌ| ಅಧ್ಯಕ್ಷರಾದ ಶ್ರೀ ರಮೇಶ್ ವಿ. ಪಣಿಕರ್ ರವರು ಇಂದು ಐ. ಎಸ್. ಸಿ. ಕಿರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗೌ| ಶೇಕ್ ಝಾಯದ್ ಸುಲ್ತಾನ್ ಅಲ್ ನಯ್ಯಾನ್ ಜನ್ಮ ಶತಾಬ್ಧಿ ವರ್ಷಾಚರಣೆಯನ್ನು ವರ್ಷಪೂರ್ತಿಯಾಗಿ ಭಾರತೀಯ ರಾಯಭಾರಿ ಕಛೇರಿ ಆಶ್ರಯದಲ್ಲಿ ಆಚರಿಸಲು ಕಾರ್ಯಯೋಜನೆಯನ್ನು ರೂಪಿಸಲಾಗಿದೆ. ಐ.ಎಸ್.ಸಿ. ಚೇರ್ಮನ್ ಶ್ರೀ ಎಂ. ಎ. ಯೂಸುಫ್ ಆಲಿ, ವೈಸ್ ಚೇರ್ಮನ್ ಡಾ| ಬಿ. ಆರ್. ಶೆಟ್ಟಿಯವರ್ ಮಾರ್ಗದರ್ಶನದಲ್ಲಿ ಯು.ಎ.ಇ. ಸರ್ಕಾರಿ ವಿವಿಧ ಇಲಾಖೆಗಳು ಮತ್ತು ಯು.ಎ.ಇ. ಯಲ್ಲಿರುವ ಭಾರತೀಯ ವಿವಿಧ ಪ್ರಾದೇಶಿಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು.

ಛಾಯಚಿತ್ರ ಪ್ರದರ್ಶನ, ರಕ್ತದಾನ ಶಿಬಿರ, ವಿಚಾರ ಸಂಕಿರಣ, ಸಾರ್ವಜನಿಕ ಸಭೆಗಳು, ಜಾಗೃತಿ ಅಭಿಯಾನ, ಇಂಡೋ/ಯು.ಎ.ಇ. ಸಾಂಸ್ಕೃತಿಕ ಮೇಳ, ಜಾನಪದ ಹಬ್ಬ, ಕ್ರೀಡೆ ಇತ್ಯಾದಿ ಕಾರ್ಯಕರ್ಮಗಳಲ್ಲಿ ಭಾರತದ ವಿವಿಧ ಭಾಗಗಳ ಕಲಾವಿದರು, ಹಾಗೂ ಯು.ಎ.ಇ. ಯಲ್ಲಿ ನೆಲೆಸಿರುವ ಅನಿವಾಸಿ ಭಾರತಿಯರು ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.

ಐ.ಎಸ್.ಸಿ. 51ನೇ ವಾರ್ಷಿಕೋತ್ಸವ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

2018-19 ರ ಸಾಲಿಗೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ 2018 ಮೇ 3ನೇ ತಾರಿಕು ಗುರುವಾರ ರಾತ್ರಿ 8.00 ಗಂಟೆಗೆ ಐ.ಎಸ್.ಸಿ. ಬೃಹತ್ ಸಭಾಂಗಣದಲ್ಲಿ ಐ.ಎಸ್.ಸಿ. ಚೇರ್ಮನ್ ಶ್ರೀ ಎಂ.ಎ. ಯೂಸುಫ್ ಆಲಿ ಮತ್ತು ವೈಸ್ ಚೇರ್ಮನ್ ಡಾ. ಬಿ. ಆರ್. ಶೆಟ್ಟಿಯವರ ಸಮ್ಮುಖದಲ್ಲಿ ನೆರವೇರಲಿದೆ.

ವಿಶೇಷ ಆಕರ್ಷಣೆಯಾಗಿ ಬಾಲಿವುಡ್ ತಾರಾಗಾಯಕಿ ಹಂಸಿಕಾ ಅಯ್ಯರ್ ಮತ್ತು ವಿಪಿನ್ ಅನೆಜಾ ಇವರ ಸಂಗೀತ ಕಛೇರಿ ನಡೆಯಲಿದೆ.

5ನೇ ಯು.ಎ.ಇ. ಮಟ್ಟದ ಪವಿತ್ರ ಕುರಾನ್ ಪಠಣ ಸ್ಪರ್ಧೆ 2018 ಮೇ 24ರಂದು ಏರ್ಪಡಿಸಲಾಗಿದೆ

ಯು.ಎ.ಇ. ರಾಷ್ಟ್ರಪಿತ ಗೌ| ಶೇಕ್ ಝಾಯದ್ ಸುಲ್ತಾನ್ ಅಲ್ ನಯ್ಯಾನ್ ಜನ್ಮ ಶತಾಬ್ಧಿ ವರ್ಷಾಚರಣೆ ಗೌರವಾರ್ಥ ಯು.ಎ.ಇ. ಯಲ್ಲಿ ನೆಲೆಸಿರುವ ಮುಸ್ಲಿಂ ಭಾಂದವರಿಗೆ ಎರ್ಪಡಿಸಲಾಗಿದೆ. 2018 ಮೇ 24ರಂದು ನಡೆಯಲಿರುವ ಇಫ್ತಾರ್ ಕೂಟದಲ್ಲಿ ಯು.ಎ.ಇ. ಮಿನಿಸ್ಟ್ರಿ ಆಫ್ ಂWಕಿಂಈ ಸಹಯೋಗದೊಂದಿಗೆ ಸ್ಪರ್ಧೆಯ ಉದ್ಘಾಟನೆ ನಡೆಯಲಿದೆ.

ಸ್ಪರ್ಧೆ ಮೇ 28 ರಿಂದ ನಾಲ್ಕು ದಿನಗಳ ರಾತ್ರಿ 10.00 ಗಂಟೆಯ ತಾರವಿತ್ ಪ್ರಾರ್ಥನೆಯ ನಂತರ ನಡೆಯಲಿದ್ದು 2018 ಜೂನ್ 1ನೇ ತಾರೀಕು ಇಫ್ತಾರ್ ಕೂಟದಲ್ಲಿ ಪ್ರಥಮ ದ್ವಿತೀಯ ಸ್ಥಾನ ಪಡೆದ ಬಹುಮಾನಿತರಿಗೆ ನಗದು ಹಣ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು.

ತೀರ್ಪುಗಾರರು ಆಯ್ಕೆಮಾಡಿರುವ ಸಮದಾನಕರ ಪಟ್ಟಿಯಲ್ಲಿರುವವರಿಗೆ ಪ್ರಶಸ್ತಿ ಪತ್ರ ಮತ್ತು ಸಮದಾನಕರ ಬಹುಮಾನ ನೀಡಲಾಗುವುದು.

ಪತ್ರಿಕಾಗೋಷ್ಠಿಯ ಅಧ್ಯಕ್ಷತೆಯನ್ನು ಐ.ಎಸ್.ಸಿ. ಗೌರವ ಅಧ್ಯಕ್ಷರಾದ ಶ್ರೀ ರಮೇಶ್ ವಿ. ಪಣಿಕರ್ ವಹಿಸಿದ್ದರು. ಗೌ| ಉಪಾಧ್ಯಕ್ಷರಾದ ಶ್ರೀ ಜಯರಾಂ ರೈ ಯವರು ತಮ್ಮ ಮಾತಿನಲ್ಲಿ ಭಾರತದ ವಿವಿಧ ಭಾಗಗಳ ವೈವಿಧ್ಯಮಯ ಕಲೆಯನ್ನು ಯು.ಎ.ಇ. ಈ ಮಣ್ಣಿನಲ್ಲಿ ಪ್ರದರ್ಶಿಸುವಂತೆ ಹಾಗೂ ಯು.ಎ.ಇ.ಯಲ್ಲಿ ಕಾರ್ಯೋನ್ಮುಖವಾಗಿರುವ ಭಾರಾತದ ಎಲ್ಲಾ ರಾಜ್ಯಗಳ ಸಂಘಟನೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಐ.ಎಸ್.ಸಿ ಯಲ್ಲಿ ಸದಸ್ಯತ್ವ ಪಡೆದುಕೊಂಡು ಸಾಂಸ್ಕೃತಿಕ ಹಾಗೂ ಭಾರತೀಯತೆಯನ್ನು ಉನ್ನತ ಮಟ್ಟದಲ್ಲಿ ವೈಭವೀಕರಿಸುವಂತೆ ಕೋರಿದರು. ಗೌ| ಪ್ರಧಾನ ಕಾರ್ಯದರ್ಶಿ ಶ್ರೀ ಈಪನ್ ಮಮ್ಮುಟಿಲ್ ವರ್ಷ ಪೂರ್ತಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವರ ಸಹಕಾರ ಸಲಹೆ ಸೂಚನೆ ನೀಡಿ ಯಶಸ್ವಿಗೊಳಿಸುವಂತೆ ಕೋರಿದರು.

ವರದಿ : ಬಿ. ಕೆ. ಗಣೇಶ್ ರೈ – ಯು.ಎ.ಇ.

Comments are closed.