ಗಲ್ಫ್

ಯಶಸ್ವಿಯಾಗಿ ನಡೆದ ದುಬೈ ಬಿಲ್ಲವ ಫ್ಯಾಮಿಲಿಯ 21ನೇ ವಾರ್ಷಿಕೋತ್ಸವ ಸಮಾರಂಭ

Pinterest LinkedIn Tumblr

Photo: Ashok Belman

ದುಬೈ: ಬಿಲ್ಲವ ಫ್ಯಾಮಿಲಿ ದುಬೈ ಇದರ 21 ನೇ ವಾರ್ಷಿಕೋತ್ಸವ ಸಮಾರಂಭ ಶುಕ್ರವಾರ ದುಬೈಯ ಇಂಡಿಯನ್ ಹೈಸ್ಕೂಲಿನ ಶೇಖ್ ರಾಶಿದ್ ಆಡಿಟೋರಿಯಮಿನಲ್ಲಿ ನಡೆಯಿತು.

ಸಂಜೆಯಿಂದ ರಾತ್ರಿವರೆಗೆ ನಡೆದ ಸಮಾರಂಭದಲ್ಲಿ ಗಣ್ಯಾತಿಗಣ್ಯರು ಭಾಗವಹಿಸಿದ್ದು, ಯುಎಇಯಲ್ಲಿರುವ ಬಿಲ್ಲವ ಸಮುದಾಯದ ಬಾಂಧವರು ಭಾಗವಹಿಸುವ ಮೂಲಕ ಅಭೂತಪೂರ್ವ ಸಮಾರಂಭಕ್ಕೆ ಸಾಕ್ಷಿಯಾದರು.

ಸಾಕ್ಷಿ ಕಲಾವಿದರು ಬೆಳಪು ಇವರಿಂದ ಹಾಸ್ಯ ಕಾರ್ಯಕ್ರಮ ಹಾಗು ಯುಎಇಯ ಸ್ಥಳೀಯ ಕಲಾವಿದರಿಂದ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರದರ್ಶನಗೊಂಡಿತು. ಜೊತೆಗೆ ಬಿಲ್ಲವ ಸಮುದಾಯದ ಯುವಕ-ಯುವತಿಯರು ಹಾಗು ಮಕ್ಕಳಿಂದ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರ ಮನಸೂರೆಗೊಳಿಸಿತು.

ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಹಾಗು ಸಾಕ್ಷಿ ಕಲಾವಿದರಿಗೆ ಸನ್ಮಾನ ಕೂಡ ನಡೆಯಿತು. ಕಾರ್ಯಕ್ರಮಕ್ಕೆ ಸುನಿಲ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು. ನಿತೇಶ್ ಪೂಜಾರಿ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು. ಬಿಲ್ಲವ ಫ್ಯಾಮಿಲಿ ದುಬೈ ಇದರ ಅಧ್ಯಕ್ಷರು, ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

Comments are closed.