ಶಾರ್ಜಾದಲ್ಲಿ – ಮಂಗಳೂರು ಮೂಲದವರ ಒಡೆತನದ ಗೋಲ್ಡನ್ ಸ್ಟಾರ್ಸ್ ನೂತನ ಮ್ಯೂಸಿಕ್ ಆಂಡ್ ಫೈನ್ ಆರ್ಟ್ಸ್ ಸ್ಕೂಲ್, 2019 ಏಪ್ರಿಲ್ 6ನೇ ತಾರೀಕು ಶನಿವಾರ ಬೆಳಿಗ್ಗೆ 10.00 ಗಂಟೆಗೆ ಶಾರ್ಜಾ ಇಂಡಿಯನ್ ಸ್ಕೂಲ್ ಪೂರ್ವ ಅಧ್ಯಕ್ಷರಾದ ಶ್ರೀ ಕೆ. ಬಾಲಕೃಷ್ಣನ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಗೌರವ ಅತಿಥಿಗಳಾಗಿ ಶಾರ್ಜಾ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾದ ಶ್ರೀ ಬಿ. ಕೆ. ಗಣೇಶ್ ರೈ ಯವರು ಮತ್ತು ಎಲಿಗೆಂಟ್ ಗ್ರೂಪ್ಸ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದಿನೇಶ್ ಸಿ ದೇವಾಡಿಗ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಗೋಲ್ಡನ್ ಸ್ಟಾರ್ಸ್ ಮ್ಯೂಸಿಕ್ ಅಂಡ್ ಫೈನ್ ಆರ್ಟ್ಸ್ ಪ್ರಾಂಶುಪಾಲರಾದ ಶ್ರೀ ಸುರೇಶ್ ಎನ್. ಶೆಟ್ಟಿ ಸರ್ವರನ್ನು ಸ್ವಾಗತಿಸಿದರು.
ಸಮಾರಂಭದಲ್ಲಿ ಕರ್ನಾಟಕ ಎನ್. ಆರ್. ಐ. ಫೋರಂ ಯು.ಎ.ಇ. ಯ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಭಾಕರ ಅಂಬಲತೆರೆ ಹಾಗೂ ಶಾರ್ಜಾ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾದ ಶ್ರೀ ನೋವೆಲ್ ಡಿ ಅಲ್ಮೇಡಾ ಹಾಗೂ ಸೌಹಾರ್ದ ಲಹರಿಯ ಶ್ರೀ ದಿನೇಶ್, ಮಂಗಳೂರಿನಿಂದ V4 ವಾಹಿನಿಯ ಶ್ರೀ ಲಕ್ಷ್ಮಣ್ ರವರು ರವರು ಹಾಗೂ ಇನ್ನಿತರ ಹಲವಾರು ಅತಿಥಿಗಳು ಭಾಗವಹಿಸಿದ್ದರು.
ಶ್ರೀ ಹನೀಫ್ ಪರ್ಲಿಯಾರ್ ಕಾವ್ಯದ ಮೂಲಕ ಶುಭವನ್ನು ಹಾರೈಸಿದರು. ಕಲಾಶಾಲೆಯ ವಿದ್ಯಾರ್ಥಿಗಳೊಂದಿಗೆ ಪೋಷಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವ್ಯವಸ್ಥಾಪಕ ಪಾಲುದಾರರಾಗಿರುವ ಶ್ರೀಮತಿ ಸೌಮ್ಯ ಸುರೇಶ್ ಶೆಟ್ಟಿಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಅಯೋಜಿಸಿದ್ದರು. ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ನೂತನ ಕಲಾಶಾಲೆಯಲ್ಲಿ ನುರಿತ ವಾದ್ಯ ಸಂಗೀತ ಅಧ್ಯಾಪಕರು ಚಿತ್ರ ಕಲಾವಿದರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಕಲಾತರಗತಿಗಳು ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತ ಅಭ್ಯಾಸಕ್ಕೆ ವೇದಿಕೆಯನ್ನು ಕಲ್ಪಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ : 050-9736263
Comments are closed.