ಗಲ್ಫ್

ಇಂದು ದುಬೈಯಲ್ಲಿ ‘ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ

Pinterest LinkedIn Tumblr

ದುಬೈ: ಕಳೆದ 16 ವರ್ಷಗಳಿಂದ ದುಬೈಯ ಮಣ್ಣಿನಲ್ಲಿ ಯಕ್ಷಗಾನದ ಕಂಪನ್ನು ಪಸರಿಸಿ ತುಳುನಾಡ ಯಕ್ಷಗಾನದ ಕಲೆಯ ಕೀರ್ತಿ ಪತಾಕೆಯನ್ನು ಆಕಾಶದೆತ್ತರಕ್ಕೆ ಹಾರಿಸಿದ ಯಕ್ಷ ಮಿತ್ರರು ದುಬೈ ಇವರ ‘ಯಕ್ಷ ಸಂಭ್ರಮ 2019 ‘ ಇದರ ಸಲುವಾಗಿ ಜೂನ್ 21 ರ ಶುಕ್ರವಾರ ಸಂಜೆ 5 ಗಂಟೆಗೆ ಸರಿಯಾಗಿ ಶೇಖ್ ರಶೀದ್ ಅಡಿಟೊರಿಯಮ್ ದುಬೈ ಇಲ್ಲಿ ಹಾಕಿರುವ ವಿದ್ಯುದ್ವೀಪಾಲಂಕೃತವಾದ ಭವ್ಯ ರಂಗ ಮಂಟಪದಲ್ಲಿ ” ಕಟೀಲು ಕ್ಷೇತ್ರ ಮಹಾತ್ಮೆ” ಎಂಬ ಯಕ್ಷಗಾನ ಪುಣ್ಯ ಕಥಾ ಪ್ರಸಂಗವು ತುಳುನಾಡಿನ ಹೆಸರಾಂತ ಕಲಾವಿದರು ಹಾಗು ದುಬೈಯ ಹವ್ಯಾಸಿ ಕಲಾವಿದರ ಕೂಡೂವಿಕೆಯಿಂದ ಪ್ರದರ್ಶನಗೊಳ್ಳಲಿದೆ.

ಈ ಪ್ರದರ್ಶನದ ಹಿಮ್ಮೇಳದಲ್ಲಿ ಯಕ್ಷ ಲೋಕದ ಪರಂಪರೆಯ ಭಾಗವತರಾದ ಬಲಿಪ ಪ್ರಸಾದ್ ಭಟ್ ಮತ್ತು ದುಬೈಯ ಯುವ ಭಾಗವತ ಕ್ರಷ್ಣಪ್ರಸಾದ್ ಭಟ್ . ಮದ್ದಳೆಯಲ್ಲಿ ಜನಾರ್ದನ ತೋಲ್ಪಾಡಿತ್ತಾಯ ಮತ್ತು ಚೆಂಡೆಯಲ್ಲಿ ಪ್ರಶಾಂತ್ ಶೆಟ್ಟಿ ವಾಗೆನಾಡು . ವೇಷಭೂಷಣ ಹಾಗೂ ವರ್ಣಾಲಂಕಾರದಲ್ಲಿ ರಮೇಶ್ ಶೆಟ್ಟಿ ಬಾಯರ್ ಮತ್ತು ಜಯಂತ್ ಸಹಕರಿಸಲಿದ್ದಾರೆ . ಮುಮ್ಮೇಳದಲ್ಲಿ ಅಬ್ಬರದ ವೇಷದ ಅರುಣಾಸುರನಾಗಿ ಜಯಪ್ರಕಾಶ್ ಶಟ್ಟಿ ಪೆರ್ಮುದೆ , ಮನಮೋಹಕ ನ್ರತ್ಯದೊಂದಿಗೆ ಯಶೋಮತಿಯಾಗಿ ಹಾಗೂ ನಂದಿನಿಯಾಗಿ ಅಕ್ಷಯ್ ಕುಮಾರ್ ಮಾರ್ನಾಡ್ ಹಾಗೂ ಪ್ರಚಂಡರಾಗಿ ದಿಗಿಣ ವೀರ ಲೋಕೇಶ್ ಮುಚ್ಚೂರು ಇವರುಗಳು ರಂಗಮಂಟಪದಲ್ಲಿ ಮಿಂಚಲಿದ್ದಾರೆ .

Comments are closed.