ಅಬುಧಾಬಿ: ಡಾಕ್ಟರ್ಸ್ ಡೇ ಪ್ರಯುಕ್ತ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕುಟುಂಬ ಮತ್ತು ಹೆಮ್ಮೆಯ ಯುಎಇ ಕನ್ನಡ ಡಾಕ್ಟರ್ಸ್ ಸಂಘವು ಜೂನ್ 28ರಂದು ಶೇಕ್ ಜಾಯೆದ್ ರಸ್ತೆಯಲ್ಲಿರುವ ಕೊನ್ರಾಡ್ ಹೋಟೆಲ್ ಸಭಾಂಗಣದಲ್ಲಿ ಕನ್ನಡ ನಾಡಿನ ವೈದ್ಯರನ್ನು ಒಂದೇ ಕಡೆ ಸೇರಿಸಿ ವೈದ್ಯರ ದಿನವನ್ನು ವಿಜೃಂಭಣೆಯಿಂದ ಆಚರಿಸಿದರು.
ಹೆಮ್ಮೆಯ ಕನ್ನಡಿಗರು ಕುಟುಂಬ ಸದಸ್ಯರು ಮತ್ತು ಹಿರಿಯ ವೈದ್ಯರಾದ ಡಾ.ಗುರುಮಾಧವ್ ಅವರು ಸೇರಿ ದೀಪ ಬೆಳಗಿಸುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರ ಗೀತೆ, ಭಾರತ ರಾಷ್ಟ್ರ ಗೀತೆ ಮತ್ತು ಕರ್ನಾಟಕ ನಾಡ ಗೀತೆ ಹಾಡಿ ಗೌರವ ಸೂಚಿಸಿದರು, ನಂತರ ಇಲ್ಲಿ ಸರ್ಕಾರಿ ಮತ್ತು ಖಾಸಗಿ ಅರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 100 ಕ್ಕಿಂತಲೂ ಹೆಚ್ಚು ಕರುನಾಡ ವೈದ್ಯರು ಹಿರಿಯ ವೈದ್ಯರಾದ ಡಾ.ಗುರುಮಾಧವ್, ಡಾ ಶಾಂತಿ , ಡಾ.ಮಮತಾ ರಡಾರ್, ಡಾ.ವಸಂತ್, ಡಾ. ಅನಿಲ್ ಕುಮಾರ್ ಡಾ. ರಾಘವೇಂದ್ರ ಭಟ್ ಡಾ. ಗಾಡ್ಫ್ರೆಡ್ ಮುಂತಾದವರು ಒಟ್ಟಿಗೆ ಸೇರಿ ಡಾಕ್ಟರ್ಸ್ ಡೇ ಕೇಕ್ ಕತ್ತರಿಸಿ ಸಂಭ್ರಮ ಪಟ್ಟುಕೊಂಡರು.
ಸಭೆಯಲ್ಲಿ ಕೆಲವು ಉಪಯುಕ್ತ ಮಾಹಿತಿಗಳು , ಮುಂದಿನ ದಿನಗಳಲ್ಲಿ ಡಾಕ್ಟರ್ಸ್ ಅಸೋಸಿಯೇಷನ್ ವತಿಯಿಂದ ಕೈಗೊಳ್ಳಬಹುದಾ ಕಾರ್ಯಗಳ ರ್ರೋಪುರೇಷೆಗಳ ಬಗ್ಗೆ ಚರ್ಚೆ ಮಾಡಲಾಯಿತ್ತು , ಯುಎಇ ಅನಿವಾಸಿ ಕನ್ನಡಿಗರಿಗೆ ಮತ್ತು ಕರ್ನಾಟದಲ್ಲಿ ನೆಲಸಿರುವ ಕನ್ನಡಿಗರಿಗೆ ಹೇಗೆ ಸಹಾಯ ಮಾಡಬಹುದು ಎಂದೆಲ್ಲಾ ಅವಲೋಕನ ನಡೆಯಿತ್ತು.
ದುಬೈಯಲ್ಲಿ ನಡೆದ ಕನ್ನಡ ಡಾಕ್ಟರ್ಸ್ ದಿನದಲ್ಲಿ ಅನಿವಾಸಿ ಕನ್ನಡ ವೈದ್ಯರುಗಳಿಂದ “ಕೊಡಗಿಗೆ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆ ಅಭಿಯಾನಕ್ಕೆ” ಬೆಂಬಲ ಸೂಚಿಸಿದರು, ಡಾಕ್ಟರ್ಸ್ ಅಸೋಸಿಯೇಷನ್ ಮುಖ್ಯಸ್ಥರಾದ ಡಾ.ಮಾಧವ ರಾವ್ ಮಾತಾಡಿ ವೈದ್ಯರು ಬೆಂಬಲ ಸೂಚಿಸಲು ಕೈ ಮೇಲೆತ್ತಿ ಕೊಡಗಿಗೆ ಸುಸಜ್ಜಿತ ಆಸ್ಪತ್ರೆಯ ಕೂಗನ್ನು ಕಡಲಾಚೆಯಿಂದ ರಾಜ್ಯ ಸರ್ಕಾರಕ್ಕೆ ಧ್ವನಿ ತಲುಪಿಸಲು ಕರೆ ಕೊಟ್ಟರು, ಡಾ.ಹಾರಿಸ್ ಮಾತಾಡಿ ದುಬೈ ಕನ್ನಡ ವೈದ್ಯರ ಸಂಘದಿಂದ ಕೊಡಗಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸಲು ಸಲಹೆ ಕೊಟ್ಟರು.
ಹೆಮ್ಮೆಯ ದುಬೈ ಕನ್ನಡಿಗರು ಕುಟುಂಬ ಸದಸ್ಯರಾದ ಡಾ.ಸವಿತಾ ಮೋಹನ್, ಸುದೀಪ್ ದಾವಣಗೆರೆ, ಸೆಂತಿಲ್ ಬೆಂಗಳೂರು, ಮಮತಾ ಶಾರ್ಜಾ, ಪಲ್ಲವಿ ಬಸವರಾಜ್,ಶಶಿಧರ್, ವಿಷ್ಣುಮೂರ್ತಿ ಮೈಸೂರು, ಹಾದಿಯ ಮಂಡ್ಯ, ರಫೀಕಲಿ ಕೊಡಗು ಹಾಜರಿದ್ದರು.
ಕರ್ನಾಟಕದ ಸಾಂಪ್ರದಾಹಿಕ ಭೋಜನ ವೇಳೆ ನಡುವೆ ಡಾ. ಸಂತೋಷ್ ಮತ್ತು ಡಾ. ಮಂಜುನಾಥ್ ಅವರ ಕಂಠದಲ್ಲಿ ಮೂಡಿಬಂದ ಕನ್ನಡ ಹಾಡುಗಳು ಎಲ್ಲರನ್ನೂ ಸಂತೋಷದಿಂದ ಮೆರೆಸಿದರು, ವಿಷ್ಣುಮೂರ್ತಿ ಮೈಸೂರು ಅವರು ಆಗಮಿಸಿದ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು, ಕಾರ್ಯಕ್ರಮದ ನಿರ್ವಹಣೆಯನ್ನು ಹೆಮ್ಮೆಯ ಕುಟುಂಬ ಸದಸ್ಯರಾದ ಡಾ.ಸವಿತಾ ಮೈಸೂರು ಮತ್ತು ಡಾ. ಲೇಖಾ ಅಪ್ಪಯ್ಯ ಕೊಡಗು ಅವರು ನಿರ್ವಹಿಸಿದರು.
Comments are closed.