ಅಂತರಾಷ್ಟ್ರೀಯ

ವಧುವಿನ ಬೆಲೆ ಏಳು ಕೋಟಿ ರೂಪಾಯಿ, ಆಶ್ಚರ್ಯವಾಯ್ತಾ?

Pinterest LinkedIn Tumblr

ವಧುವಿನಂತೆ ಸಿಂಗಾರಗೊಂಡ ಈ ಹುಡುಗಿ ಬೆಲೆ ಸಾಮಾನ್ಯರ ಕೈಗೆಟಕುವುದಿಲ್ಲ. ದುಬೈನ ವಿಶ್ವ ವಾಣಿಜ್ಯ ಕೇಂದ್ರದಲ್ಲಿ ಈ ವಧು ಚರ್ಚೆಯ ವಿಷ್ಯವಾಗಿದ್ದಾಳೆ. ಈ ವಧುವಿನ ಬೆಲೆ ಏಳು ಕೋಟಿ ರೂಪಾಯಿ. ಆಕೆ ತೂಕ 120 ಕೆ.ಜಿ.

ಆಶ್ಚರ್ಯವಾಯ್ತಾ? ಇದು ಅಸಲಿ ವಧುವಲ್ಲ. ಕೇಕ್ ನಿಂದ ತಯಾರಿಸಿದ ವಧು. ಇದನ್ನು ಬ್ರಿಟನ್ ನಲ್ಲಿ ತಯಾರಿಸಲಾಗಿದೆ. ವರದಿಯ ಪ್ರಕಾರ, ಈ ಕೇಕ್ ಉದ್ದ 182 ಸೆಂಟಿಮೀಟರ್. ಇದನ್ನು ಅಲಂಕರಿಸಲು ಕುಶಲಕರ್ಮಿಗಳು 10 ದಿನ ತೆಗೆದುಕೊಂಡಿದ್ದಾರೆ. 5000 ಹೂವುಗಳನ್ನು ಅದರಲ್ಲಿ ಬಳಸಲಾಗಿದೆ.

ಕೇಕ್ ತಯಾರಿಸಲು 1 ಸಾವಿರ ಮೊಟ್ಟೆ, 20 ಕೆಜಿ ಚಾಕೊಲೇಟ್ ಬಳಸಲಾಗಿದೆ. ವಧುವಿನಂತೆ ಸಿಂಗಾರಗೊಂಡ ಈ ಸುಂದರ ಕೇಕ್ ನೋಡಲು ಜನರು ಹರಿದು ಬರ್ತಿದ್ದಾರೆ. ಇದನ್ನು ವಿಶ್ವದ ದುಬಾರಿ ವಧು ಎಂದು ಕರೆಯಲಾಗ್ತಿದೆ.

Comments are closed.