ಟೆಹರಾನ್: ಇರಾನ್‍ನ ವಾಯುವಿಭಾಗದಲ್ಲಿ ಇಂದು ಮುಂಜಾನೆ ಸಂಭವಿಸಿದ ಭೂಕಂಪದಲ್ಲಿ ಸಾವು-ನೋವು ಉಂಟಾಗಿದ್ದು, ಅನೇಕ ಕಟ್ಟಡಗಳು ಕುಸಿದುಬಿದ್ದಿವೆ. ಈ ದುರ್ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಪೂರ್ವ ಅಜರ್ ಬೈಜಾನ್ ಪ್ರಾಂತ್ಯದ ತಬ್ರೀಜ್ ನಗರದಿಂದ 120ಕಿ.ಮೀ. ಆಗ್ನೇಯ ದಿಕ್ಕಿನಲ್ಲಿ ಈ ಭೂಕಂಪ ಸಂಭವಿಸಿತ್ತು. ಪ್ರಾಥಮಿಕ ವರದಿ ಪ್ರಕಾರ 9 ಮಂದಿ ಮೃತಪಟ್ಟು 120ಕ್ಕೂ ಹೆಚ್ಚು ಜನರು ತೀವ್ರ ಗಾಯಗೊಂಡಿದ್ದಾರೆ.
5.9 ತೀವ್ರತೆಯ ಭೂಕಂಪದಿಂದ ಕೆಲ ಕಟ್ಟಡಗಳು ಕುಸಿದಿದ್ದು, ಅನೇಕ ಮನೆಗಳು ಹಾನಿಗೀಡಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ರಕ್ಷಣಾ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಭೂಮಿಯಿಂದ 8ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದ್ದರೂ ಭೂಕಂಪದ ನಂತರ ಐದು ಬಾರಿ ಮತ್ತೆ ಮತ್ತೆ ಭೂಮಿ ಕಂಪಿಸಿದ್ದರಿಂದ ಜನರು ಮತ್ತಷ್ಟು ಭಯಭೀತರಾಗಿದ್ದಾರೆ.
ಇದು ಮೇಲ್ನೋಟಕ್ಕೆ ಸಾಧಾರಣ ತೀವ್ರತೆಯ ಭೂಕಂಪವಾದರೂ ಭಾರೀ ಪರಿಣಾಮ ಬೀರಿದೆ ಎಂದು ಇರಾನ್ ಭೂಗರ್ಭ ಅಧ್ಯಯನ ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Comments are closed.