ಅಂತರಾಷ್ಟ್ರೀಯ

ಸೌದಿಯ ರಿಯಾದ್‌ನಲ್ಲಿ ವಾಷಿಂಗ್ಟನ್‌ ಪೋಸ್ಟ್‌ನ ಪತ್ರಕರ್ತನ ಹತ್ಯೆ: ಐವರಿಗೆ ಮರಣ ದಂಡನೆ ವಿಧಿಸಿದ ನ್ಯಾಯಾಲಯ

Pinterest LinkedIn Tumblr


ಸೌದಿ: ಸೌದಿಯ ರಿಯಾದ್‌ನಲ್ಲಿ ವಾಷಿಂಗ್ಟನ್‌ ಪೋಸ್ಟ್‌ನ ಪತ್ರಕರ್ತನ ಹತ್ಯೆಗೆ ಕಾರಣವಾದ 5 ಮಂದಿಗೆ ಅಲ್ಲಿನ ನ್ಯಾಯಾಲಯ ಮರಣ ದಂಡನೆಯ ತೀರ್ಪು ನೀಡಿದೆ. ರಿಯಾದ್‌ನಲ್ಲಿ ಪತ್ರಕರ್ತ ಜಮಾಲ್ ಖಶೋಗ್ಗಿ ಅವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಕುರಿತಂತೆ ಸೌದಿ ಅರೇಬಿಯಾದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸೋಮವಾರ ತೀರ್ಪು ನೀಡಿದೆ.

ಸೌದಿ ಅರೇಬಿಯಾ ರಾಜಮನೆತನದ ಟೀಕಾಕಾರರಾಗಿದ್ದ ಜಮಾಲ್‌ ಖಶೋಗಿಯನ್ನು ಕಳೆದ ಅಕ್ಟೋಬರ್‌ನಲ್ಲಿ ಟರ್ಕಿಯ ಇಸ್ತಾಂಬುಲ್ ನಲ್ಲಿರುವ ಸೌದಿ ರಾಯಭಾರ ಕಚೇರಿಯೊಳಗೆ ಹತ್ಯೆ ಮಾಡಲಾಗಿತ್ತು. ಹತ್ಯೆಯಲ್ಲಿ ನೇರವಾಗಿ ಪಾಲ್ಗೊಂಡಿದ್ದ ಐವರಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿದ್ದು, ಉಳಿದ ಇಬ್ಬರನ್ನು ಖುಲಾಸೆಗೊಳಿಸಲಾಗಿದೆ.

ಕೊಲೆ ನಡೆದ ಸಮಯದಲ್ಲಿ ಇಸ್ತಾಂಬುಲ್‌ನ ರಾಯಭಾರಿಯಾಗಿದ್ದ ಮೊಹಮ್ಮದ್‌ ಅಲ್‌ ಒತೈಬಿಯನ್ನೂ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಒಟ್ಟಾರೆ 11 ಆರೋಪಿಗಳಲ್ಲಿ ಐವರಿಗೆ ಗಲ್ಲು ಶಿಕ್ಷೆ, ಮೂರು ಜನರಿಗೆ ತಲಾ 24 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಈ ಹತ್ಯೆ ಸಂಬಂಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸೌದಿ ದೊರೆ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ವಿರುದ್ಧ ಸಹ ಆಕ್ರೋಶ ಕೇಳಿಬಂದಿತ್ತು. ಆದರೆ ಈ ಹತ್ಯೆಗೂ ಅಲ್ಲಿನ ರಾಜಕುಮಾರರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸೌದಿ ಹೇಳಿತ್ತು.

ಈಗ ಪ್ರಾಸಿಕ್ಯೂಶನ್‌ ಖಶೋಗ್ಗಿ ಹತ್ಯೆ ಪೂರ್ವನಿಯೋಜಿತ ಕೃತ್ಯವಲ್ಲ ಎಂದಿದೆ. ಜಮಾಲ್‌ ಖಶೋಗ್ಗಿ ಅವರು ಅಕ್ಟೋಬರ್‌ 2018ರಲ್ಲಿ ಬೆಳಗ್ಗೆ ಇಸ್ತಾಂಬುಲ್‌ನಲ್ಲಿರುವ ತಮ್ಮ ದೇಶದ ದೂತಾವಾಸಕ್ಕೆ ಕಚೇರಿಗೆ ತೆರಳಿದ್ದರು. ಆದರೆ ಅವರು ಹತ್ಯೆಯಾಗಿದ್ದು ಅವರ ಮೃತದೇಹ ಎಲ್ಲಿಯೂ ಪತ್ತೆಯಾಗಿಲ್ಲ.

ಆದರೆ ಟರ್ಕಿ ಹೇಳುವ ಪ್ರಕಾರ ಪತ್ರಕರ್ತನನ್ನು ಆ ದೇಶದ ರಾಯಾಭಾರ ಕಚೇರಿಯಲ್ಲಿ ಕತ್ತು ಹಿಸುಕಿ ಸಾಯಿಸಲಾಗಿದೆ. ಆತನ ದೇಹವನ್ನು ತುಂಡರಿಸಲಾಗಿದೆ ಎಂದಿದ್ದರು. ಅವರ ಅವಶೇಷಗಳು ಈ ತನಕ ಪತ್ತೆಯಾಗಿಲ್ಲ.

Comments are closed.