ಗಲ್ಫ್

ಜಗತ್ತಿನಲ್ಲೇ ಅತಿ ಎತ್ತರದ ಕಟ್ಟಡ ‘ಬುರ್ಜ್​ ಖಲೀಫಾ’ ನಿರ್ಮಿಸಿದ್ದ ಅರಬ್​ಟೆಕ್​ ಸಂಸ್ಥೆ ಮುಚ್ಚುಗಡೆ; ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ 40 ಸಾವಿರ ನೌಕರರು

Pinterest LinkedIn Tumblr

ದುಬೈ: ಜಗತ್ತಿನಲ್ಲೇ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಬುರ್ಜ್​ ಖಲೀಫಾ ಕಟ್ಟಡ ನಿರ್ಮಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಯುಎಇ(ಸಂಯುಕ್ತ ಅರಬ್ ಸಂಸ್ಥಾನ)ಯ ಪ್ರತಿಷ್ಠಿತ ಬೃಹತ್ ಕಂಪನಿ ಅರಬ್ ಟೆಕ್ ಹೋಲ್ಡಿಂಗ್ಸ್ ಈಗ ಬಾಗಿಲು ಮುಚ್ಚಲು ನಿರ್ಧರಿಸಿದೆ.

ಕರೊನಾ ಹಾವಳಿಯಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ದಿವಾಳಿ ಎದ್ದಿರುವ ಅರಬ್ ಟೆಕ್ ಹೋಲ್ಡಿಂಗ್ಸ್ ಕಂಪನಿ ದಿವಾಳಿಯೆದ್ದಿದೆ. ಸಾಲ ಬಾಧೆ ಹಾಗೂ ಸತತ ಏರಿಕೆಯಾಗುತ್ತಿರುವ ನಷ್ಟದ ಪ್ರಮಾಣದಿಂದ ಚೇತರಿಸಿಕೊಳ್ಳುವುದು ಅಸಾಧ್ಯವೆಂಬ ಹಂತಕ್ಕೆ ಕಂಪೆನಿ ಬಂದಿರುವುದರಿಂದ ಅದನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಕಂಪೆನಿಯ ಶೇರುದಾರರು ಒಪ್ಪಿಗೆ ಸೂಚಿಸಿದ್ದಾರೆ.

ಕಂಪನಿಯ ಪಾಲುದಾರರು ಸಂಸ್ಥೆಯನ್ನು ಮುಚ್ಚುವ ನಿರ್ಧಾರಕ್ಕೆ ಸಹಮತ ಸೂಚಿಸಿದ್ದು ಇದರಿಂದ ಸಾವಿರಾರು ಜನ ನೌಕರರಿಗೆ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಜೊತೆಗೆ, ಸಂಸ್ಥೆಗೆ ಅಂಟಿಕೊಂಡಿದ್ದ ಹಲವಾರು ಗುತ್ತಿಗೆದಾರರಿಗೂ ಕಂಟಕ ಎದುರಾಗಿದೆ.

ದೇಶದಲ್ಲಿ ದಶಕದ ಹಿಂದೆ ಪ್ರಾರಂಭವಾದ ಹಲವಾರು ಕಟ್ಟಡ ನಿರ್ಮಾಣ ಸಂಸ್ಥೆಗಳು ಸಹ ಇದೇ ಪರಿಸ್ಥಿತಿ ಎದುರಿಸುತ್ತಿವೆ. ಕೊರೊನಾ ತಂದೊಡ್ಡಿದ ಸ್ಥಿತಿಯಿಂದ ಎಲ್ಲೆಡೆ ಆರ್ಥಿಕ ಮುಗ್ಗಟ್ಟು ಉಂಟಾಗಿ ಸರ್ಕಾರವು ಹಲವು ಯೋಜನೆಗಳಿಗೆ ನೀಡುತ್ತಿದ್ದ ಅನುದಾನವನ್ನು ಸ್ಥಗಿತಗೊಳಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕಂಪನಿಗಳು ಇದೀಗ ಸಂಕಷ್ಟಕ್ಕೆ ಈಡಾಗಿದೆ. ಅರಬ್​ಟೆಕ್​ ಹೋಲ್ಡಿಂಗ್ ಕಂಪನಿಯ (Arabtec) ಈ ಒಂದು ನಿರ್ಧಾರದಿಂದಲೇ ಸುಮಾರು 40 ಸಾವಿರ ಉದ್ಯೋಗಿಗಳು ಬೀದಿಪಾಲಾಗುವ ಪರಿಸ್ಥಿತಿ ಬಂದಿದೆ.

Comments are closed.