ದುಬೈ: ಅಬುದಾಬಿಯಲ್ಲಿ ನೆಲೆಸಿರುವ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ದುಬೈ ಡ್ಯೂಟಿ ಫ್ರೀ ಲಕ್ಕಿ ಡ್ರಾನಲ್ಲಿ ಭರ್ಜರಿ ಬಹುಮಾನ ಒಲಿದಿದೆ.
ದುಬೈನಲ್ಲಿ ಕೆಲಸ ಮಾಡುತ್ತಿರುವ ಎರ್ನಾಕುಲಂ ಮೂಲದ ಸೂರಜ್ ಅನೀದ್ (35) ಅವರಿಗೆ ಲಕ್ಕಿ ಡ್ರಾನಲ್ಲಿ ಬರೋಬ್ಬರಿ ಒಂದು ಮಿಲಿಯನ್ ಯುಎಸ್ ಡಾಲರ್ (7 ಕೋಟಿ ರೂ.) ಬಹುಮಾನ ಬಂದಿದೆ. ಸೂರಜ್ ಅವರು ಜನವರಿ 20ರಂದು ಆನ್ಲೈನ್ ಮೂಲಕ ಟಿಕೆಟ್ ಖರೀದಿಸಿದ್ದರು.
350ನೇ ಸರಣಿಯ ಟಿಕೆಟ್ ಸಂಖ್ಯೆ 4645 ಮೂಲಕ ಸೂರಜ್ ಅದೃಷ್ಟಶಾಲಿ ವಿಜೇತರಾಗಿದ್ದಾರೆ. ತಾವು ಜಯಶಾಲಿ ಆಗಿರುವ ವಿಚಾರ ಫೇಸ್ಬುಕ್ ಲೈವ್ ಮೂಲಕ ಸೂರಜ್ ಅವರಿಗೆ ತಿಳಿದಿದೆ. ವಿಜೇತರನ್ನು ಘೋಷಿಸಿದಾಗ ನನ್ನನ್ನು ನಾನೇ ನಂಬಲು ಆಗಲಿಲ್ಲ ಎಂದು ಸೂರಜ್ ಹೇಳಿಕೊಂಡಿದ್ದಾರೆ.
ಅಂದಹಾಗೆ ಸೂರಜ್ ದುಬೈ ಡ್ಯೂಟಿ ಫ್ರೀ ಲಕ್ಕಿ ಡ್ರಾನಲ್ಲಿ ವಿಜೇತರಾದ 175ನೇ ಭಾರತೀಯರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಸೂರಜ್ ಯುಎಇನಲ್ಲಿ ನೆಲೆಸಿದ್ದಾರೆ. ಬ್ಯಾಂಕ್ ಒಂದರ ಕಸ್ಟಮರ್ ಕೇರ್ ವಿಭಾಗದಲ್ಲಿ ಸೂರಜ್ ಕೆಲಸ ಮಾಡುತ್ತಿದ್ದು, ಅಬುದಾಬಿಯಲ್ಲಿ ಪತ್ನಿ ಮತ್ತು ಮಗಳೊಂದಿಗೆ ವಾಸವಿದ್ದಾರೆ.
Comments are closed.