ಬೆಂಗಳೂರು: ಐಪಿಎಲ್ 9ನೇ ಆವೃತ್ತಿಯಲ್ಲಿ ಭರ್ಜರಿಯಾಗಿ ಆಡುತ್ತಿರುವ ರಾಯಲ್ ಚಾಲೆಂಡರ್ಸ್ ಬೆಂಗಳೂರು ತಂಡ ಇಂದು ಪಂಜಾಬ್ ತಂಡವನ್ನು ಮಣಿಸಿ ಪ್ಲೇ ಆಫ್ ಆಸೆ ಬಲಪಡಿಸಲುವ ತವಕದಲ್ಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪಂದ್ಯ ನಡೆಯಲಿದೆ. ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಗಳಾದ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಅಲ್ ರೌಂಡರ್ ಸ್ಟೋಯಿನಿಸ್ ಅಲಭ್ಯತೆ ಕಾಡುತ್ತಿದ್ದು, ತವರಿನಲ್ಲಿ ನಡೆಯಲಿರುವ ಕೊನೇ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಪ್ಲೇ ಆಫ್ ಸ್ಥಾನ ಬಹುತೇಕ ಖಚಿತಪಡಿಸಿಕೊಳ್ಳುವ ತವಕದಲ್ಲಿದೆ.
ಆರ್ಸಿಬಿಗೆ ವಿರಾಟ್-ಎಬಿಡಿ ಬಲ
ಕಳಪೆ ಬೌಲಿಂಗ್ ನಿಂದಾಗಿ ಟೂರ್ನಿಯಿಂದ ಹೊರಬೀಳುವ ಸ್ಥಿತಿಯಲ್ಲಿದ್ದ ಆರ್ಸಿಬಿಯನ್ನು ಪ್ರಚಂಡ ಗೆಲುವಿನೊಂದಿಗೆ ಲಯಕ್ಕೆ ತಂದಿದ್ದು ಕೊಹ್ಲಿ-ಎಬಿಡಿ ವಿಲಿಯರ್ಸ್.
ಪಂಜಾಬ್ ವಿರುದ್ಧ ಆರ್ಸಿಬಿ ಜಯ ಗಳಿಸಿದರೆ ಡೆಲ್ಲಿ ವಿರುದ್ಧ ಮೇ 22ರಂದು ನಡೆಯುವ ಕೊನೆ ಪಂದ್ಯವನ್ನು ಗೆದ್ದರೆ ಪ್ಲೇ ಆಫ್ ಗೆ ಸರಾಗವಾಗಿ ಎಂಟ್ರಿಕೊಡಬಹುದು. ಒಂದು ವೇಳೆ ಡೆಲ್ಲಿ ವಿರುದ್ಧ ಸೋತರೇ ಇತರ ಪಂದ್ಯಗಳ ಫಲಿತಾಂಶವನ್ನು ನಂಬಿಕೊಳ್ಳಬೇಕು.
Comments are closed.