ಮನೋರಂಜನೆ

ಜಿಂಬಾಬ್ವೆ ಪ್ರವಾಸ: ಸ್ಟಾರ್ ಕ್ರಿಕೆಟಿಗರಿಗೆ ವಿಶ್ರಾಂತಿ ! ನಾಯಕ ಧೋನಿ ಸಹ ಡೌಟ್

Pinterest LinkedIn Tumblr

kohli-rohith

ನವದೆಹಲಿ: ಜೂನ್ 11ರಿಂದ ಆರಂಭವಾಗಲಿರುವ ಜಿಂಬಾಬ್ವೆ ಪ್ರವಾಸದಿಂದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಗೆ ವಿಶ್ರಾಂತಿ ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಚಿಂತನೆ ನಡೆಸಿದೆ.

ಜಿಂಬಾಬ್ವೆ ಪ್ರವಾಸದಲ್ಲಿ ಟೀಂ ಇಂಡಿಯಾ 3 ಏಕದಿನ ಹಾಗೂ ಟಿ20 ಪಂದ್ಯಗಳನ್ನು ಆಡಲಿದೆ. ಕಳೆದ ಆರು ತಿಂಗಳಿನಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಇನ್ನು ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಈ ಇಬ್ಬರು ಆಟಗಾರರು ಬಲಿಷ್ಠವಾಗಿ ಕಣಕ್ಕಿಳಿಯಬೇಕಾದ ಕಾರಣದಿಂದ ಇವರಿಬ್ಬರಿಗೂ ವಿಶ್ರಾಂತಿ ನೀಡುವುದು ಖಚಿತವಾಗಿದ್ದು, ಶಿಖರ್ ಧವನ್ ಸಹ ಜಿಂಬಾಬ್ವೆ ಪ್ರವಾಸದಲ್ಲಿ ಆಡುವ ಸಾಧ್ಯತೆ ತೀರ ಕಡಿಮೆ ಇದೆ ಎಂದು ಬಿಸಿಸಿಐ ಉನ್ನತ ಮೂಲಗಳು ತಿಳಿಸಿವೆ.

ಜಿಂಬಾಬ್ವೆ ವಿರುದ್ಧ ಧೋನಿ ಆಡ್ತಾರಾ, ವಿಶ್ರಾಂತಿ ನೀಡಲಾಗಿದೆಯ ಎಂಬುದೇ ಡೌಟ್
ಜಿಂಬಾಬ್ವೆ ವಿರುದ್ಧ ಏಕದಿನ ಹಾಗೂ ಟಿ20 ಪಂದ್ಯಗಳನ್ನು ಆಡುತ್ತಿರುವುದರಿಂದ ಸೀಮಿತ ಓವರ್ ಗಳ ನಾಯಕ ಎಂಎಸ್ ಧೋನಿ ತಂಡವನ್ನು ಮುನ್ನಡೆಸುತ್ತಾರಾ ಎಂಬುದೇ ಡೌಟ್ ಆಗಿದೆ. ಇನ್ನು ಧೋನಿ ಪ್ರವಾಸದ ತಪ್ಪಿಸಿಕೊಂಡರೆ ದ್ವೀತಿಯ ದರ್ಜೆಯ ತಂಡವನ್ನು ಅಂಜಿಕ್ಯ ರಹಾನೆ ಮುನ್ನಡೆಸಲಿದ್ದಾರೆ. ವಿಕೆಟ್ ಕೀಪರ್ ಆಗಿ ಕನ್ನಡಿಗ ಕೆಎಲ್ ರಾಹುಲ್ ಆಯ್ಕೆಯಾಗುವ ಸಾಧ್ಯತೆ ಇದೆ.

Comments are closed.