ರಾಷ್ಟ್ರೀಯ

ಚೆನ್ನೈ, ಕರಾವಳಿ ತೀರದಲ್ಲಿ ಕುಂಭದ್ರೋಣ ಮಳೆ: ಚಂಡಮಾರುತ ಭೀತಿ ! ಚೆನ್ನೈನಲ್ಲಿ 40 ಕಿ.ಮೀ ವೇಗದಲ್ಲಿ ಬಿರುಗಾಳಿ

Pinterest LinkedIn Tumblr

rain

ಚೆನ್ನೈ: ಕಳೆದ ವರ್ಷ ಸುರಿದ ಕುಂಭದ್ರೋಣ ಮಳೆಯಿಂದಾಗಿ ಚೆನ್ನೈ ಅಕ್ಷರಶಃ ನಲುಗಿದ್ದು, ಇದೀಗ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚೆನ್ನೈ ನಲ್ಲಿ ಮತ್ತೆ ಪ್ರವಾಹ ಭೀತಿ ಶುರುವಾಗಿದೆ.

ಚೈನ್ನೈ ಸೇರಿದಂತೆ ಕರಾವಳಿ ತೀರದಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದ್ದು, ಇದೀಗ ಚಂಡಮಾರುತ ಭೀತಿ ಶುರುವಾಗಿದೆ. ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಚೆನ್ನೈನಲ್ಲಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಚಂಡಮಾರುತ ಭೀತಿ ಶುರುವಾಗಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಚೆನ್ನೈನಿಂದ ಆಂಧ್ರ ಕರಾವಳಿ ತೀರದೆಡೆಗೆ ಚಂಡಮಾರುತ ಸಾಗುತ್ತಿದ್ದು ಆಂಧ್ರದ ಕರಾವಳಿ ತೀರಗಳಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.

ಎಡ ಬಿಡದೆ ಸುತ್ತಿರುವ ಮಳೆಯಿಂದಾಗಿ ಚೆನ್ನೈನಲ್ಲಿ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ ಇದರಿಂದಾಗಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 56 ವಿಮಾನಗಳ ಹಾರಾಟದಲ್ಲಿ ಬದಲಾವಣೆಯಾಗಿದೆ.

Comments are closed.