ಮನೋರಂಜನೆ

ಸಾಯೋವರೆಗೂ ನಗ್ನ ಸೆಲ್ಫಿಗಳನ್ನು ಅಪ್‌ಲೋಡ್ ಮಾಡುವೇ: ಕಿಮ್ ಕರ್ದಾಶಿಯನ್

Pinterest LinkedIn Tumblr

kim-kardashian

ನ್ಯೂಯಾರ್ಕ್: ನಾನು ಸಾಯುವವರೆಗೂ ನಗ್ನ ಚಿತ್ರಗಳನ್ನು ಅಪ್ ಲೋಡ್ ಮಾಡುವುದಾಗಿ ತಮ್ಮ ಅಭಿಮಾನಿಗಳಿಗೆ ಕಿಮ್ ಕರ್ದಾಶಿಯಾನ್ ಮಾತುಕೊಟ್ಟಿದ್ದಾಳೆ.

ಸಿಪ್ರಿಯಾನಿ ವಾಲ್ ಸ್ಟ್ರೀಟ್ ನಲ್ಲಿ ನಡೆದ 2016ರ ವೆಬ್ಬಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಂಟರ್ ನೆಟ್ ಪ್ರಶಸ್ತಿ ಪಡೆದ ಕಿಮ್ ಕರ್ದಾಶಿಯನ್ ಈ ಹೇಳಿಕೆ ನೀಡಿದ್ದಾಳೆ.

ತಮ್ಮ ಬೋಲ್ಡ್ ಫೋಟೋಗಳು ಹಾಗೂ ವಿಡಿಯೋಗಳ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಸಾಮಾಜಿಕ ಜಾಲತಾಣ, ಆ್ಯಪ್ ಗಳನ್ನು ಸಮರ್ಥವಾಗಿ ಬಳಸಿಕೊಂಡು ಅಭೂತಪೂರ್ವ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಆಕೆಗೆ ಈ ಪ್ರಶಸ್ತಿ ನೀಡಲಾಗಿದೆ.

ಕಳೆದ ಮಾರ್ಚ್ ನಲ್ಲಿ ತಮ್ಮ ಮಾಡೆಲ್ ಮತ್ತು ನಟಿ ಇಮಿಲಿ ಜತೆ ನಗ್ನ ಚಿತ್ರವೊಂದನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದಕ್ಕೂ ಮುನ್ನ ಮಿಡಲ್ ಫಿಂಗರ್ ತೋರಿಸುವ ಮೂಲಕ ನಗ್ನ ಸೆಲ್ಫಿ ತೆಗೆದು ಟ್ವೀಟರ್ ನಲ್ಲಿ ಹರಿ ಬಿಟ್ಟಿದ್ದಳು.

Comments are closed.