ನವದೆಹಲಿ: ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಚತುರ್ವೇದಿ ನಡುವೆ ಟ್ವೀಟ್ ಸಮರ ನಡೆದಿದೆ.
ಇತ್ತೀಚೆಗಷ್ಟೇ ಪ್ರಕಟವಾದ ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿದ್ದ ಸ್ಮೃತಿ ಇರಾನಿ, ಕಾಂಗ್ರೆಸ್ ಅಸ್ಸಾಂ ರಾಜ್ಯವನ್ನು ಕಳೆದುಕೊಂಡಿರುವುದು ರಾಹುಲ್ ಗಾಂಧಿ ಅವರ ಸಾಮರ್ಥ್ಯ ಎಂದು ಹೇಳಿದ್ದರು. ಇನ್ನು ಮತ್ತೊಂದು ಟ್ವೀಟ್ ನಲ್ಲಿ ಸಂವಹನ ನಡೆಸುತ್ತಿದ್ದ ಕಾಂಗ್ರೆಸ್ ನ ಪ್ರಿಯಾಂಕ ಚತುರ್ವೇದಿ, ಸ್ಮೃತಿ ಇರಾನಿ ಅವರಿಗೆ ಬೆದರಿಕೆ ಬಂದರೆ ಝೆಡ್ ಶ್ರೇಣಿಯ ಭದ್ರತೆ ನೀಡಲಾಗುತ್ತದೆ. ಆದರೆ ನನಗೆ ಬಂದಿದ್ದ ಅತ್ಯಾಚಾರ, ಕೊಲೆ ಬೆದರಿಕೆಯ ಬಗ್ಗೆ ತನಿಖೆ ನಡೆಸುವುದಕ್ಕೆ ಹೆಣಗುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಸ್ಮೃತಿ ಇರಾನಿ, ತಮಗೆ ಝೆಡ್ ಶ್ರೇಣಿಯ ಭದ್ರತೆ ಇಲ್ಲ ಎಂದು ಹೇಳಿದ್ದರು. ಸ್ಮೃತಿ ಇರಾನಿ ಟ್ವೀಟ್ ಗೆ ಮತ್ತೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ ಚತುರ್ವೇದಿ, ತಮಗೆ ಮಾನವ ಸಂಪನ್ಮೂಲ ಇಲಾಖೆ ಆಂತರಿಕ ಕಾರ್ಯನಿರ್ವಹಣೆ ಬಗ್ಗೆ ತಮಗೆ ತಿಳಿಸಿದಿಲ್ಲ. ಆದರೆ ಮಾಧ್ಯಮಗಳ ವರದಿಯನ್ನು ಆಡಹ್ರಿಸಿ ಹೇಳಿದ್ದಾಗಿ ಸ್ಪಷ್ಟನೆ ನೀಡಿದ್ದರೆ.
ಇದನ್ನು ಇಲ್ಲಿಗೇ ನಿಲ್ಲಿಸದ ಸ್ಮೃತಿ ಇರಾನಿ, ” ನನ್ನ ಭದ್ರತೆ ಬಗ್ಗೆ ನಿಮಗೇಕೆ ಆಸಕ್ತಿ? ಏನಾದರೂ ಯೋಜನೆ ರೂಪಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಸ್ಮೃತಿ ಇರಾನಿ ಹೇಳಿಕೆಯಿಂದ ಕುಪಿತಗೊಂಡ ಪ್ರಿಯಾಂಕ ಚತುರ್ವೇದಿ, ನಿಮ್ಮ ಭದ್ರತೆ ಬಗ್ಗೆ ಆಸಕ್ತಿ ತೋರುವುದಕ್ಕೆ ಅಥವಾ ಯೋಜನೆ ರೂಪಿಸುವಷ್ಟು ಸಮಯ ವ್ಯರ್ಥ ಮಾಡುವುದಿಲ್ಲ. ನೀವು ಮತ್ತೊಂದು ವಿಶ್ವವಿದ್ಯಾನಿಲಯದಲ್ಲಿ ವಿವಾದ ಉಂಟು ಮಾಡುವುದರ ಬಗ್ಗೆ ಗಮನ ಕೇಂದ್ರೀಕರಿಸಿ ಎಂದು ಹೇಳಿದ್ದಾರೆ.
ಈ ಟ್ವೀಟ್ ಗೆ ಮತ್ತಷ್ಟು ಆಕ್ರೋಶಗೊಂಡ ಸ್ಮೃತಿ, ಆ ರೀತಿ ಮಾಡುವುದು ರಾಹುಲ್ ಗಾಂಧಿ ಅವರ ವೈಶಿಷ್ಟ್ಯ, ಅಸ್ಸಾಂ ಚುನಾವಣೆಯನ್ನು ಸೋತಿರುವುದು ಅವರ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ. ” ಸರಣಿ ಚುನಾವಣೆಗಳಲ್ಲಿ ಸೋತರೂ ಸಚಿವೆಯಾಗುವುದು ನಿಮ್ಮ ವೈಶಿಷ್ಟ್ಯ ಎಂದು ಪ್ರಿಯಾಂಕ ಚತುರ್ವೇದಿ ಸ್ಮೃತಿ ಇರಾನಿ ಅವರಿಗೆ ತಿರುಗೇಟು ನೀಡಿ ಟ್ವಿಟರ್ ವಾದಕ್ಕೆ ಅಂತ್ಯ ಹಾಡಿದ್ದಾರೆ.
Comments are closed.