ಮುಂಬೈ: ಜಿಂಬಾಬ್ವೆ ವಿರುದ್ಧ ಏಕದಿನ ಪಂದ್ಯ ಸರಣಿ ಮತ್ತು ಟಿ-20 ಪಂದ್ಯಗಳು ಜೂನ್ 11ರಂದು ಆರಂಭವಾಗಲಿದ್ದು, ಭಾರತ ತಂಡದ ನಾಯಕ ಎಂ.ಎಸ್. ಧೋನಿಯವರೇ 16 ಸದಸ್ಯರ ತಂಡವನ್ನು ಮುನ್ನಡೆಸಲಿದ್ದಾರೆ. ಉಪ ನಾಯಕ ವಿರಾಟ್ ಕೊಹ್ಲಿಯವರಿಗೆ ವಿಶ್ರಾಂತಿ ನೀಡಲಾಗಿದೆ. ಯಜುವೇಂದ್ರ ಚಹಲ್ ಅವರನ್ನು ಜಿಂಬಾಬ್ವೆ ಸರಣಿಗೆ ಸೇರ್ಪಡೆ ಮಾಡಲಾಗಿದೆ.
ಜಿಂಬಾಬ್ವೆ ವಿರುದ್ದ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳು ನಡೆಯಲಿವೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ 4 ಟೆಸ್ಟ್ ಸರಣಿಗೆ 17 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಶರ್ದೂಲ್ ಠಾಕೂರ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ಬಿಸಿಸಿಐ ಆಯ್ಕೆ ಸಮಿತಿ ಸಭೆಯಲ್ಲಿ ತಂಡಕ್ಕೆ ಆಯ್ಕೆಯಾದ ಸದಸ್ಯರ ಹೆಸರುಗಳನ್ನು ಘೋಷಿಸಲಾಯಿತು. ಈ ವರ್ಷದ ಐಪಿಎಲ್ ನಲ್ಲಿ 400 ರನ್ ಗಳನ್ನು ಕಲೆ ಹಾಕಿದ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಮತ್ತು ಅಜಿಂಕ್ಯ ರಹಾನೆಯವರಿಗೆ ಜಿಂಬಾವ್ವೆ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ. ರಾಯಲ್ ಚಾಲೆಂಜರ್ಸ್ ಪರ ಆಡಿ 19 ವಿಕೆಟ್ ಕಬಳಿಸಿದ ಯಜುವೇಂದ್ರ ಚಹಲ್ ಅವರಿಗೆ ಸ್ಥಾನ ನೀಡಲಾಗಿದೆ. ಇವರ ಜೊತೆ ಫೈಸ್ ಫಜಲ್, ಮನ್ ದೀಪ್ ಸಿಂಗ್, ಜಯಂತ್ ಯಾದವ್ ಅವರೂ ಆಯ್ಕೆಯಾಗಿದ್ದಾರೆ.
ಇನ್ನು ಆಶ್ಚರ್ಯವೆಂಬಂತೆ ಜುಲೈಯಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಶರ್ದೂಲ್ ಠಾಕೂರ್ ಅವರನ್ನು ಆಯ್ಕೆ ಮಾಡಲಾಗಿದೆ. ಶ್ರೀಲಂಕಾ ಸರಣಿಯಲ್ಲಿ ಆಡಿದ್ದ ಸ್ಟುವರ್ಟ್ ಬಿನ್ನಿ ಕೂಡ ತಂಡಕ್ಕೆ ವಾಪಸಾಗಿದ್ದಾರೆ.
ಬಿಂಬಾಬ್ವೆ ಸರಣಿ ಮತ್ತು ಟಿ-20 ಸರಣಿ: ಎಂ.ಎಸ್.ಧೋನಿ(ನಾಯಕ), ಕೆ.ಎಲ್.ರಾಹುಲ್, ಫೈಜ್ ಫಜಲ್, ಮನೀಶ್ ಪಾಂಡೆ, ಕರುಣ್ ನಾಯರ್, ಅಂಬಾಟಿ ರಾಯುಡು, ರಿಷಿ ಧವನ್, ಅಕ್ಸರ್ ಪಟೇಲ್, ಜಯಂತ್ ಯಾದವ್, ಧವಲ್ ಕುಲಕರ್ಣಿ, ಜಸ್ಪ್ರೀತ್ ಬುಮ್ರಾ, ಬರೀಂದರ್ ಸ್ರಾನ್, ಮಂದೀಪ್ ಸಿಂಗ್, ಕೇದಾರ್ ಜಾಧವ್, ಜಾಧವ್ ಉನದ್ ಕಾಟ್, ಯಜುವೇಂದ್ರ ಚಹಲ್ .
ವೆಸ್ಟ್ ಇಂಡೀಸ್ ಟೆಸ್ಟ್ ತಂಡ: ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಕೆ,ಎಲ್.ರಾಹುಲ್, ಚೇತೇಶ್ವರ ಪೂಜಾರ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ರಿದ್ದಿಮಾನ್ ಸಹ, ಆರ್.ಅಶ್ವಿನ್, ರವೀಂದ್ರ ಜಡೇಜಾ, ಇಶಾಂತ್ ಶರ್ಮ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಶರ್ದುಲ್ ಠಾಕೂರ್, ಸ್ಟುವರ್ಟ್ ಬಿನ್ನಿ.
Comments are closed.