ನವದೆಹಲಿ: ಭಾರತೀಯ ವಾಯುಸೇನೆ ಶುಕ್ರವಾರ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಪೋಖ್ರಾನ್ ಅಂಗಳದ ನೌಕೆಯಿಂದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಯ ಸುಧಾರಿತ ಆವೃತ್ತಿಯ ಯಶಸ್ವಿ ಪರೀಕ್ಷೆ ನಡೆಸಿತು.
ಜಗತ್ತಿನ ಅತಿ ವೇಗದ ನೌಕೆಯಿಂದ ಭೂಮಿಗೆ ನೆಗೆಯುವ ಈ ಕ್ಷಿಪಣಿಯನ್ನು ರಷ್ಯಾ-ಭಾರತ ಜಂಟಿಯಾಗಿ ಅಭಿವೃದ್ದಿಪಡಿಸಿವೆ. ನಿಗದಿತ ಗುರಿಯನ್ನು ಅತಿ ವೇಗವಾಗಿ ಮುಟ್ಟಬಲ್ಲ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನೆರವೇರಿದೆ.
ಸೀಮಿತ ವ್ಯಾಪ್ತಿಯ ಕ್ಷಿಪಣಿಯಾದ ಬ್ರಹ್ಮೋಸ್ನ್ನು ಅಂತರ್ಗಾಮಿ ನೌಕೆ, ಹಡಗು, ವಿಮಾನ ಅಥವಾ ಭೂಮಿಯಿಂದ ಪ್ರಯೋಗಿಸಬಹುದಾಗಿದೆ. ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮೊಸ್ಕೊವ ನದಿಯ ಹೆಸರುಗಳನ್ನು ಕೂಡಿಸಿ ‘ಬ್ರಹ್ಮೋಸ್’ ಎಂಬ ಹೆಸರನ್ನು ಈ ಕ್ಷಿಪಣಿಗೆ ನೀಡಲಾಗಿದೆ.
ಕ್ಷಿಪಣಿಯ ವ್ಯಾಪ್ತಿಯು 290 ಕಿ ಮೀ ಆಗಿದ್ದು, ಗರಿಷ್ಠ ವೇಗ 2.8 ಮ್ಯಾಕ್. ಹಡಗಿನಿಂದ 10 ಮೀಟರ್ನಿಂದ 15 ಕಿ ಮೀ ವರೆಗಿನ ಎತ್ತರಕ್ಕೆ ಹಾರಬಲ್ಲದ್ದಾಗಿದೆ. ಭೂಮಿಯಿಂದ ನೆಗೆಯುವ ಬ್ರಹ್ಮೋಸ್ ಕ್ಷಿಪಣಿಯ ಆವೃತ್ತಿಯನ್ನು ಮೊಬೈಲ್ ಸ್ವಾಯತ್ತತೆಯ ಲಾಂಚರ್ ಮೂಲಕ ಅಭಿವೃದ್ದಿಪಡಿಸಿ ಮುಂಬರುವ ಕೆಲ ವರ್ಷಗಳಲ್ಲಿ ಬ್ಲಾಕ್ 1, 2, 3 ಯಾಗಿ ರೂಪಾಂತರಿಸಲಾಗುವುದು. ವಾಯುಸೇನೆಯ ಫೈಟರ್ ಜೆಟ್ ಸು-30ಎಮ್ೆಐ ಮೂಲಕ ಶೀಘ್ರದಲ್ಲೆ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುವುದು ಎಂದು ವಾಯುಸೇನೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ರಾಷ್ಟ್ರೀಯ
Comments are closed.