ನವದೆಹಲಿ (ಪಿಟಿಐ): ಕೇಂದ್ರ ಪರಿಸರ ಸಚಿವಾಲಯದಿಂದ ವನ್ಯ ಜೀವಿಗಳನ್ನು ಕೊಲ್ಲಲು ಅನುಮತಿ ನೀಡಿರುವುದಕ್ಕೆ ಕೇಂದ್ರ ಸಚಿವೆ ಮನೇಕಾ ಗಾಂಧಿ ಕಿಡಿಕಾರಿದ್ದಾರೆ.
ರಾಜ್ಯಗಳ ಮನವಿ ಮೇರೆಗೆ ಬೆಳೆ ಹಾನಿ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಇತ್ತೀಚೆಗೆ ಬಿಹಾರದಲ್ಲಿ ನೀಲಿ ಜಿಂಕೆಗಳನ್ನು (ಬ್ಲೂ ಬುಲ್ಸ್) ಹತ್ಯೆ ಮಾಡಲಾಗಿದೆ. ಇದಕ್ಕೆ ವಿರೋಧ ಪಕ್ಷದಿಂದ ಸಹ ವಿರೋಧ ವ್ಯಕ್ತವಾಗಿಲ್ಲ ಎಂದು ಮನೇಕಾ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.
ಪರಿಸರ ಸಚಿವಾಲಯವು ಎಲ್ಲ ರಾಜ್ಯ ಸರ್ಕಾರಗಳಿಗೂ ಪತ್ರ ಬರೆದು ಉಪಟಳ ನೀಡುವ ಯಾವ ಯಾವ ಪ್ರಾಣಿಗಳನ್ನು ಕೊಲ್ಲಬೇಕು ಎಂದು ಹೇಳಿದೆ ಎಂದು ಅವರು ದೂರಿದರು.
ಬಿಹಾರದಲ್ಲಿ ನೀಲಿ ಜಿಂಕೆ, ಪಶ್ಚಿಮ ಬಂಗಾಳದಲ್ಲಿ ಆನೆ, ಹಿಮಾಚಲ ಪ್ರದೇಶದಲ್ಲಿ ಮಂಗ, ಗೋವಾದಲ್ಲಿ ನವಿಲು ಮತ್ತು ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಕಾಡು ಹಂದಿಗಳನ್ನು ಕೊಲ್ಲಲು ಅನುಮತಿ ನೀಡಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಜಾವಡೇಕರ್, ‘ವನ್ಯ ಪ್ರಾಣಿಗಳಿಂದಾಗಿ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಹೀಗಾಗಿ ಕಾನೂನು ಪ್ರಕಾರ ವನ್ಯ ಜೀವಿಗಳ ಹತ್ಯೆಗೆ ಅನುಮತಿ ನೀಡಲಾಗಿದೆ’ ಎಂದು ಹೆಳಿದ್ದಾರೆ.
Comments are closed.