ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ತಾಯಿಯಾಗುತ್ತಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಕೊನೆಗೂ ಕರೀನಾ ಕಪೂರ್ ಪ್ರತಿಕ್ರಿಯಿಸಿದ್ದಾರೆ.
ನಾನು ಒಂದು ಹೆಣ್ಣು, ಆದರೆ ತಾನು ತಾಯಿಯಾಗುತ್ತಿರುವುದರ ಸಂಬಂಧ ಸದ್ಯಕ್ಕೆ ಏನನ್ನೂ ಹೇಳುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಎಲ್ಲರು ನಾನು ಗರ್ಭಿಣಿ ಎಂದು ಮಾತನವಾಡುತ್ತಿರುವುದರಿಂದ ನನಗೆ ತುಂಬಾ ಎಕ್ಸೈಟ್ ಆಗಿದೆ ಎಂದು ಹೇಳಿರುವ ಅವರು. ಲಂಡನ್ ನಲ್ಲಿ ನಾನು ಐದು ಮಕ್ಕಳನ್ನು ಕೊಡಲಿದ್ದೇನೆ ಎಂದು ತಮಾಷೆಯಾಗಿ ಮಾತನಾಡಿದ್ದಾರೆ.
ಕರೀನಾ ಕಪೂರ್ ಪ್ರೆಗ್ನೆಂಟ್ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಹರಿದಾಡಿತ್ತು. ಕೀ ಅಂಡ್ ಕಾ ಚಿತ್ರದ ಬಿಡುಗಡೆ ನಂತರ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮೊದಲನೆಯ ಬೇಬಿಗಾಗಿ ಕಾಯುತ್ತಿದ್ದು, ಕರೀನಾ ವಿಶ್ರಾಂತಿಗಾಗಿ ಲಂಡನ್ ಗೆ ತೆರಳಿದ್ದಾರೆ ಎನ್ನುವ ಸುದ್ದಿ ಹರಡಿತ್ತು.
Comments are closed.