ರಾಷ್ಟ್ರೀಯ

ಡ್ಯಾನಿಶ್‌ ಮಹಿಳೆ ಅತ್ಯಾಚಾರ ಪ್ರಕರಣ: ಐವರಿಗೆ ಜಿವಾವಧಿ ಶಿಕ್ಷೆ

Pinterest LinkedIn Tumblr

court01

ನವದೆಹಲಿ(ಪಿಟಿಐ): ದೆಹಲಿಯ ರೈಲು ನಿಲ್ದಾಣದ ಬಳಿ ಎರಡು ವರ್ಷಗಳ ಹಿಂದೆ ಡ್ಯಾನಿಷ್‌ ಮಹಿಳೆಯ ಅತ್ಯಚಾರ ಪ್ರಕರಣ ಸಂಬಂಧ ಐವರು ಅಪರಾಧಿಗಳಿಗೆ ದೆಹಲಿ ಕೋರ್ಟ್‌ ಜೀವಾವಧಿ ಶಿಕ್ಷೆ ನೀಡಿದೆ.

52 ವರ್ಷದ ಡ್ಯಾನಿಷ್‌ ಮಹಿಳೆಯನ್ನು ರೈಲು ನಿಲ್ದಾಣದ ಬಳಿ ಅಪಹರಿಸಿ ಒಂಬತ್ತು ಮಂದಿ ಅತ್ಯಾಚಾರ ಎಸಗಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿತ್ತು.

ತೀರ್ಪು ಪ್ರಕಟಿಸಿರುವ ನ್ಯಾಯಾಧೀಶರಾದ ರಮೇಶ್‌ ಕುಮಾರ್‌ ಅವರು, ಮಹೇಂದರ್‌ ಅಲಿಯಾಸ್ ಗಾಂಜಾ(25), ಮೊಹದ್‌ ರಾಜ್‌(25), ರಾಜು(23), ಅರ್ಜುನ್‌(21) ಮತ್ತು ರಾಜು ಚಕ್ಕಾ(30) ಈ ಐವರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡವನ್ನೂ ವಿಧಿಸಿ‌ದ್ದಾರೆ.

ಪ್ರಕರಣ ಒಂಬತ್ತು ಅಪರಾಧಿಗಳಲ್ಲಿ ಮೂವರು ಬಾಲಪರಾಧಿಗಳಿದ್ದರು. ಈ ಪೈಕಿ ಒಬ್ಬ ಆರೋಪಿಯು ಕಳೆದ ವರ್ಷ ಫೆಭ್ರುವರಿಯಲ್ಲಿ ತಿಹಾರ್‌ ಜೈಲಿನಲ್ಲಿ ಮೃತಪಟ್ಟಿದ್ದಾನೆ.

Comments are closed.